Tuesday, 24 April 2018
ನಿಮ್ಮ ಬರವಣಿಗೆ ಮೂಲಕ ಹಣಗಳಿಸಿ
ನಿಕೋಲಾಯ್ ಲೆನಿನ್ (೧೮೭೦-೧೯೨೪)
ಸೋವಿಯತ್ ರಷ್ಯಾದ ಪ್ರವಾದಿ ಲೆನಿನ್ ೧೮೭೦ ಏಪ್ರಿಲ್ ೨೦ ರಂದು ವೊಲ್ಗಾ ನದಿ ತೀರದ ಸಿಂಬ್ರಿಸ್ಕ್ ಎಂಬಲ್ಲಿ ಜನಿಸಿದರು. ವ್ಲಾಡಿಮಿರ್ ಇಲಿಚ್ ಉಲ್ಯನೋವ್ ಅವನ ಮೊದಲ ಹೆಸರು. ಅವನ ತಂದೆ ಇಲ್ಯನಿಕೋಲಾಯ್ ಒಬ್ಬ ಶಾಲಾ ಮೇಲ್ವಿಚಾರಕನಾಗಿದ್ದನು. ತಾಯಿ ಮೇರಿ ಸಹ ಶಾಲಾ ಶಿಕ್ಷಕಿ, ಲೆನಿನ್ ನು ಸೈಂಟ್ ಪೀಟರ್ಸ್ಬರ್ಗ್ ವಿಶ್ವವಿದ್ಯಾಲಯದಿಂದ ಕಾನೂನು ಪದವೀಧರರಾದರು. ನಂತರ ಮಾರ್ಕ್ಸ್ ತತ್ವಗಳಿಂದ ಪ್ರಭಾವಿತರಾಗಿದ್ದ ಕ್ರಾಂತಿಕಾರಿ ಚಟುವಟಿಕೆಗಳಲ್ಲಿ ತೊಡಗಿದನು. ಹೀಗಾಗಿ ಸೈಬೀರಿಯಾಗೆ ಗಡಿಪಾರಾದನು. ನಂತರ ೧೯೧೫ ಸೈಂಟ್ ಪೀಟರ್ಸ್ಬರ್ಗ್ ನಲ್ಲಿ ಕಾರ್ಮಿಕ ವಿಮೋಚನಾ ಸಂಘರ್ಷ ಸಮಿತಿಯನ್ನು ಸ್ಥಾಪಿಸಿ, ಸಮಾಜವಾದಿ ಪ್ರಜಾಪ್ರಭುತ್ವ ಪಕ್ಷದ ನಾಯಕನಾದನು. ಇಸ್ ಕ್ರಾ(ಸ್ಪಾರ್ಕ್) ಎಂಬ ಪತ್ರಿಕೆಯನ್ನು ಹೊರಡಿಸಿದನು.
ಮಾರ್ಕ್ಸಿಸಂ ಅವನ ಇನ್ನೊಂದು ಪತ್ರಿಕೆಯಾಗಿತ್ತು.
೧೯೧೭ರ ಬೊಲ್ಷೆವಿಕ್ ಕ್ರಾಂತಿಯಲ್ಲಿ ಇವನ ಪಾತ್ರ ಮಹತ್ವದ್ದು. ಆಗ ಸ್ನೇಹಿತ ಮತ್ತು ತನ್ನ ವಿದೇಶಾಂಗ ಮಂತ್ರಿಯಾಗಿದ್ದ ಟ್ರಾಟಸ್ಕಿಯ ಕೆಂಪು ಸೈನ್ಯವನ್ನು ಬಳಸಿಕೊಂಡು ಕೆರೆನಸ್ಕಿಯ ತಾತ್ಕಾಲಿಕ ಸರ್ಕಾರವನ್ನು ಕಿತ್ತೊಗೆದು ತನ್ನದೇ ಆದ ಬೋಲ್ಷೆವಿಕ್ (ಸಮಾಜವಾದಿ ಗಣರಾಜ್ಯ) ಸರ್ಕಾರವನ್ನು ಸ್ಥಾಪಿಸಿದನು. ಇದನ್ನು ಅಕ್ಟೋಬರ್ ಕ್ರಾಂತಿ ಎನ್ನುವರು. ಲೆನಿನ್ ಪ್ರಜಾಪ್ರಭುತ್ವ ವಿರೋಧಿ. ರೈತರ ಮತ್ತು ಕಾರ್ಮಿಕ ಸರ್ವಾಧಿಕಾರದ ಸಮಾಜವಾದಿ ಸರ್ಕಾರದಲ್ಲಿ ಅವನಿಗೆ ನಂಬಿಕೆ ಇತ್ತು. ಅದಕ್ಕಾಗಿ ಅವನು ರಷ್ಯಾದ ಸಾರ್ವಜನಿಕ ಆಸ್ತಿಪಾಸ್ತಿಯನ್ನು ರಾಷ್ಟ್ರೀಕರಣಗೊಳಿಸಿ ಉತ್ಪಾದನೆ ಮತ್ತು ಹಂಚಿಕೆಗಳ ಮೇಲೆ ಸರ್ಕಾರದ ಒಡೆತನವನ್ನು ಸ್ಥಾಪಿಸಿದನು. ಈ ನಿಟ್ಟಿನಲ್ಲಿ ಆತ ಹಲವಾರು ಸಮಸ್ಯೆಯನ್ನು ಎದುರಿಸಿದನು. ಫ್ರಾನ್ಸ್ ಮತ್ತು ಇಂಗ್ಲೆಂಡ್ ಗಳು ಅವನ ಸಮಾಜವಾದಿ ಸರ್ಕಾರವನ್ನು ವಿರೋಧಿಸಿದವು. ಆತ ಜರ್ಮನಿಯೊಂದಿಗೆ ಮಾಡಿಕೊಂಡ ಒಪ್ಪಂದ ಅವುಗಳಿಗೆ ಹಿಡಿಸಲಿಲ್ಲ. ಅಲ್ಲದೆ ಆಂತರಿಕವಾಗಿ ಬಳಿ ಸೈನ್ಯದ ನಾಯಕರಾದ ಕೆರೆನಸ್ಕಿ, ಕಾರ್ವಾಲೋವ್ ,ಡೆನ್ಕಿನ್, ರಾಗಟ್ ಪುನಃ ಪ್ರಜಾಪ್ರಭುತ್ವವನ್ನು ತರುವ ಉದ್ದೇಶ ಹೊಂದಿ ಪ್ರತಿಸರ್ಕಾರ ಸ್ಥಾಪಿಸುವ ಸ್ಥಿತಿಯಲ್ಲಿದ್ದರು. ಇಂತಹ ವೇಳೆಯಲ್ಲಿ ತನ್ನ ಕೆಂಪು ಸೈನ್ಯವನ್ನು ಬಳಸಿ ಎಲ್ಲಾ ಪ್ರತಿಸ್ಪರ್ಧಿಗಳನ್ನು ಹತ್ತಿಕ್ಕಿದನು. ಮುಂದೆ ರಷ್ಯಾಗೆ ಒಂದು ರಾಜ್ಯಾಂಗವನ್ನು ರಚಿಸಿಕೊಟ್ಟನು. ಇಂಗ್ಲೆಂಡ್ ಮತ್ತು ಫ್ರಾನ್ಸ್ ಗಳೊಂದಿಗೆ ವಾಣಿಜ್ಯ ಒಪ್ಪಂದಗಳನ್ನು ಮಾಡಿಕೊಂಡನು. ತನ್ನ ಹೊಸ ಆರ್ಥಿಕ ನೀತಿಯನ್ನು ಜಾರಿಗೊಳಿಸಿ ರಷ್ಯಾವನ್ನು ಪ್ರಬಲ ರಾಷ್ಟ್ರವಾಗಿ ರೂಪಿಸಿದನು. ಲೆನಿನ್ ಇಲ್ಲದಿದ್ದರೆ ರಷ್ಯಾ ಕ್ರಾಂತಿಯೇ ಆಗುತ್ತಿರಲಿಲ್ಲ ಎಂಬುದು ಹಲವರ ವಾದ. ಆತನು ಕ್ರಾಂತಿಯ ಬೇಡಿಕೆಗಳಾದ ಶಾಂತಿ, ರೊಟ್ಟಿ ಮತ್ತು ಭೂಮಿಗಳನ್ನು ಈಡೇರಿಸಿದನು. ಹೀಗಾಗಿ ಲೆನಿನ್ ನನ್ನು ರಷ್ಯಾದ ಕ್ರಾಂತಿಯ ಜನಕ ಮತ್ತು ಬೋಲ್ಷೆವಿಕ್ ಜನಕ ಎಂದು ಕರೆಯಲಾಗುತ್ತದೆ. ಅವನ ನೆನಪಿಗೆ ಪೆಟ್ರೋಗ್ರಾಡಿಗೆ ಲೆನಿನ್ ಗ್ರಾಡ್ ಎಂಬ ಹೆಸರಿಡಲಾಗಿದೆ.
Monday, 23 April 2018
ಹಿಂದೂ ವಿವಾಹದ ಪ್ರಕಾರಗಳು
ಹಿಂದೂ ಧರ್ಮಶಾಸ್ತ್ರಗಳ ಪ್ರಕಾರ ಹಿಂದೂ ಧರ್ಮಶಾಸ್ತ್ರಕಾರರು ಎಂಟು ಬಗೆಯ ವಿವಾಹಗಳನ್ನು ಉಲ್ಲೇಖಿಸಲಾಗಿದೆ. ಅವುಗಳು ಕೆಳಗಿನಂತಿವೆ.
೧.ಬ್ರಹ್ಮ ವಿವಾಹ:-
ತಂದೆ ತಾಯಿಗಳು ಸದೃಢನಾದ, ಕುಲೀನನಾದ ವರನಿಗೆ ತಮ್ಮ ಮಗಳನ್ನು ಧಾರೆಯೆರೆದು ಕೊಡುವುದೇ ಬ್ರಹ್ಮ ವಿವಾಹವಾಗಿದೆ. ಇದಕ್ಕೆ'ಕನ್ಯಾದಾನ'ವೆಂತಲೂ ಕರೆಯಲಾಗುತ್ತದೆ. ಈ ಪದ್ಧತಿ ಕೆಲವೊಂದು ಮಾರ್ಪಾಡುಗಳೊಂದಿಗೆ ಇಂದಿಗೂ ಉಳಿದುಕೊಂಡಿದೆ.
೨. ದೈವ ವಿವಾಹ:-
ತಂದೆತಾಯಿಗಳು ಯಜ್ಞ ಕಾರ್ಯಗಳಲ್ಲಿ ಭಾಗವಹಿಸುವ ಸುಯೋಗ್ಯವಾದ ಋಷಿಕುಮಾರನಿಗೆ ಮಗಳನ್ನು ಧಾರೆಎರೆದು ಕೊಡುವುದೇ ದೈವ ವಿವಾಹವಾಗಿದೆ.
೩.ಆರ್ಶ ವಿವಾಹ:-
ವರನು ಕನ್ಯಯ ತಂದೆ ತಾಯಿಗಳಿಗೆ ಎರಡು ಜೊತೆ ಗೋವುಗಳನ್ನು ಕನ್ಯಾಶುಲ್ಕ ರೂಪದಲ್ಲಿ ಕೊಟ್ಟು ಕನ್ಯೆಯನ್ನು ವಿವಾಹವಾಗುವುದೇ ಅರ್ಶ ವಿವಾಹ.
೪.ಪ್ರಜಾಪತ್ಯ ವಿವಾಹ:-
ತಂದೆತಾಯಿಗಳು ಸುಯೋಗ್ಯ ವರನಿಗೆ ಮಗಳನ್ನು ವಿವಾಹ ಮಾಡಿ ಕೊಟ್ಟು "ನೀವಿಬ್ಬರೂ ಸೇರಿ ನಿಮ್ಮ ಧರ್ಮವನ್ನು ಆಚರಿಸಿರಿ" ಎಂದು ಹರಿಸುವುದೇ ಪ್ರಜಾಪತ್ಯ ವಿವಾಹವಾಗಿದೆ.
೫.ಅಸುರ ವಿವಾಹ:-
ವರನು ಕನ್ಯೆಯ ತಂದೆ ತಾಯಿ ಅಥವಾ ಬಾಲಕರಿಗೆ ಶಕ್ಯಾನುಸಾರವಾಗಿ "ಕನ್ಯಾಶುಲ್ಕ "ಕೊಟ್ಟು ಅವರ ಮಗಳನ್ನು ವಿವಾಹವಾಗುದಕ್ಕೆ ಅಸುರ ವಿವಾಹವೆಂದು ಕರೆಯಲಾಗುತ್ತದೆ.
೬.ಗಾಂಧರ್ವ ವಿವಾಹ:-
ವಧೂವರರು ಪರಸ್ಪರ ಒಬ್ಬರನ್ನೊಬ್ಬರು ಮೆಚ್ಚಿಕೊಂಡು ವಿವಾಹವಾಗುದಕ್ಕೆ" ಗಾಂಧರ್ವ ವಿವಾಹ " ಅಥವಾ "ಪ್ರೇಮ ವಿವಾಹ" ಎನ್ನಲಾಗುತ್ತದೆ.
೭.ರಾಕ್ಷಸ ವಿವಾಹ:-
ವರನು ಕನ್ಯೆಯನ್ನು ಬಲಾತ್ಕಾರವಾಗಿ ಕಳೆದುಕೊಂಡು ಹೋಗಿ ವಿವಾಹವಾಗುವುದು "ರಾಕ್ಷಸ ವಿವಾಹ" ವಾಗಿದೆ.
೮.ಪೈಶಾಚ ವಿವಾಹ:-
ಕನ್ಯೆ ನಿದ್ರಿಸುತ್ತಿರುವಾಗ, ಸ್ಮೃತಿ ತಪ್ಪಿರುವಾಗ ಮೈಮರೆತು ಕುಳಿತಿರುವಾಗ, ಮಾನಸಿಕ ಅಸ್ವಸ್ಥಳಾದಾಗ ಮೋಸದಿಂದ ಅವಳನ್ನು ಸಂಭೋಗಿಸಿ ನಂತರ ವಿವಾಹವಾಗುವುದೇ ಪೈಶಾಚ ವಿವಾಹವಾಗಿದೆ.
ಮೇಲಿನ ಎಂಟು ವಿವಾಹ ಪದ್ಧತಿಗಳಲ್ಲಿ ಬ್ರಹ್ಮ ವಿವಾಹ ಶ್ರೇಷ್ಠ ವಾಗಿದೆ. ಗಾಂಧರ್ವ, ರಾಕ್ಷಸ, ಅಸುರ ಮತ್ತು ಪೈಶಾಚ ವಿವಾಹಗಳು ಕಾನೂನು ಬಾಹಿರವಾಗಿವೆ ಎಂದು ದಾರ್ಶನಿಕರು ವಿವರಿಸಿದ್ದಾರೆ, ಗಾಂಧರ್ವ ಮತ್ತು ರಾಕ್ಷಸ ವಿವಾಹಗಳನ್ನು ಕ್ಷತ್ರಿಯರಿಗೆ ಹಾಗೂ ಬ್ರಹ್ಮ, ದೈವ, ಆರ್ಶ ಮತ್ತು ಪ್ರಜಾಪತ್ಯ ವಿವಾಹಗಳು ಬ್ರಾಹ್ಮಣರಿಗೆ ಯೋಗ್ಯವೆಂದು ಮನುಸ್ಮೃತಿ ಮತ್ತು ಮಹಾಭಾರತದಲ್ಲಿ ಉಲ್ಲೇಖಿಸಲಾಗಿದೆ.
ಪ್ರಮುಖ ವ್ಯಂಗ್ಯ ಚಿತ್ರಕಾರರು
೧. ಆರ್. ಕೆ. ಲಕ್ಷ್ಮಣ್
೨.ಶಂಕರ್ ಪಿಳ್ಳೈ
೩. ಸುಧಿರ್ ಧಾರ್
೪.ಬಾಳ ಠಾಕ್ರೆ
೫.ಸುಧಿರ್ ಟೈಲಂಗ್
Sunday, 22 April 2018
ಕರ್ನಾಟಕ ಮಣ್ಣು
ಕರ್ನಾಟಕದಲ್ಲಿ ವಿವಿಧ ರೀತಿಯ ಮಣ್ಣು ಬೇರೆ ಬೇರೆ ಪ್ರದೇಶಗಳಲ್ಲಿ ಕಂಡು ಬರುತ್ತದೆ. ಇಲ್ಲಿಯ ಮಣ್ಣನ್ನು ೪ ಗುಂಪುಗಳನ್ನಾಗಿ ವಿಂಗಡಿಸಬಹುದು.
೧.ಕೆಂಪು ಮಣ್ಣು:-
ಈ ರೀತಿಯ ಮಣ್ಣು ಜೋಳ, ನೆಲಗಡಲೆ,ರಾಗಿ ಮತ್ತು ಇನ್ನಿತರ ಎಣ್ಣೆ ಕಾಳುಗಳನ್ನು ಬೆಳೆಯಲು ಸೂಕ್ತವಾಗಿದೆ.
೨. ಕಪ್ಪು ಮಣ್ಣು:-
ಈ ಮಣ್ಣನ್ನು ಕಪ್ಪು ಹತ್ತಿ ಮಣ್ಣು ಎಂದು ಸಹ ಕರೆಯಲಾಗುತ್ತದೆ. ಇದು ಹತ್ತಿ, ಗೋಧಿ, ಜೋಳ, ತಂಬಾಕು, ನೆಲಕಡಲೆ, ಮುಂತಾದ ಬೆಳೆಗಳನ್ನು ಬೆಳೆಯಲು ಸೂಕ್ತವಾಗಿದೆ. ಕಪ್ಪು ಮಣ್ಣು ಮುಖ್ಯವಾಗಿ ರಾಜ್ಯದ ಉತ್ತರದ ಬಯಲು ಪ್ರದೇಶಗಳಾದ ಬೆಳಗಾವಿ, ಬಿಜಾಪುರ, ಬಳ್ಳಾರಿ, ಗುಲ್ಬರ್ಗ ಮತ್ತು ರಾಯಚೂರು ಮೊದಲಾದ ಜಿಲ್ಲೆಗಳಲ್ಲಿ ಕಂಡು ಬರುತ್ತದೆ.
೩.ಜಂಬುಮಣ್ಣು:-
ಈ ಜಂಬುಮಣ್ಣು ಕೆಲವು ಬಗೆಯ ಶಿಲೆಗಳ ಸವೆತದಿಂದ ಉಂಟಾಗುತ್ತದೆ. ಈ ಮಣ್ಣು ಅಡಿಕೆ, ತೆಂಗು, ಭತ್ತ, ಬಾಳೆ,ಕಾಫಿ, ರಬ್ಬರ್ ಮುಂತಾದ ಬೆಳೆಗಳಿಗೆ ಸೂಕ್ತವಾಗಿದೆ. ಈ ಬಗೆಯ ಮಣ್ಣು ರಾಜ್ಯದ ಚಿಕ್ಕಮಗಳೂರು, ಶಿವಮೊಗ್ಗ, ಕೊಡಗು, ದಕ್ಷಿಣ ಕನ್ನಡ, ಬೆಳಗಾವಿ ಮತ್ತು ಧಾರವಾಡ ಮೊದಲಾದ ಜಿಲ್ಲೆಗಳಲ್ಲಿ ಕಂಡು ಬರುತ್ತದೆ.
೪. ಮೆಕ್ಕಲು ಮಣ್ಣು:-
ಈ ಮಣ್ಣು ಕರಾವಳಿ ಪ್ರದೇಶ ಮತ್ತು ನದಿ ಮುಖಜ ಭೂಮಿಗಳಲ್ಲಿ ಕಂಡು ಬರುತ್ತದೆ. ಇದು ಕಬ್ಬು, ಭತ್ತ, ಬಾಳೆ ಮತ್ತು ತೆಂಗು ಬೆಳೆಗೆ ಸೂಕ್ತವಾಗಿದೆ.
ಶಾಸ್ತ್ರೀಯ ಸಂಗೀತದ ಕಲಾವಿದರು
೧. ಅರಿಯಾಕುಡಿ ರಾಮಾನುಜನ್ ಅಯ್ಯಂಗಾರ್
೨.ಬಾಲಮುರಳಿ ಕೃಷ್ಣ
೩.ಜಿ. ಎನ್.ಬಾಲಸುಬ್ರಹ್ಮಣ್ಯಂ
೪.ಚೆಂಬೈ ವೈದ್ಯನಾಥ ಭಾಗವತರ್
೫.ಎಂ.ಡಿ..ರಾಮನಾಥನ್
೬.ಎಂ.ಎಸ್. ಸುಬ್ರಲಕ್ಷ್ಮಿ
೭. ಎಂ.ಎಲ್.ವಸಂತಕುಮಾರಿ
೮.ಬಸವರಾಜ ರಾಜಗುರು
೯.ಭೀಮಸೇನ ಜೋಶಿ
೧೦.ಗಿರಿಜಾದೇವಿ
೧೧.ನೈನಾದೇವಿ
೧೨. ಪಂಡಿತ್ ಜಸ್ ರಾಜ್
೧೩. ಸಿದ್ದೇಶ್ವರಿ
ರೈಲ್ವೆ ವಲಯಗಳು
ಸ್ವಾತಂತ್ರ್ಯಾ ನಂತರ ರೈಲು ಸಾರಿಗೆಯ ಆಡಳಿತದಲ್ಲಿ ಸಮನ್ವಯ ಸಾಧಿಸುವ ದೃಷ್ಟಿಯಿಂದ ರೈಲ್ವೆ ವಲಯಗಳನ್ನು ರಚಿಸಲಾಯಿತು. ಈಗ ದೇಶದಲ್ಲಿ ಹಲವಾರು ರೈಲ್ವೆ ವಲಯಗಳಿವೆ. ಮುಖ್ಯವಾದವುಗಳೆಂದರೆ:
೧. ಉತ್ತರ ರೈಲ್ವೆ (ದಿಲ್ಲಿ)
೨. ಈಶಾನ್ಯ ರೈಲ್ವೆ (ಗೋರಖ್ ಪುರ)
೩. ಈಶಾನ್ಯ ಗಡಿ ರೈಲ್ವೆ (ಮಳೆಗಾಂ-ಗೌಹತಿ)
೪.ಪೂರ್ವ ರೈಲ್ವೆ (ಕೋಲ್ಕತ್ತಾ)
೫.ಆಗ್ನೇಯ ರೈಲ್ವೆ (ಕೋಲ್ಕತ್ತಾ)
೬. ಮಧ್ಯ ರೈಲ್ವೆ(ಮುಂಬಯಿ)
೭. ಪಶ್ಚಿಮ ರೈಲ್ವೆ (ಮುಂಬಯಿ)
೮. ದಕ್ಷಿಣ ರೈಲ್ವೆ(ಚೆನ್ನೈ)
೯.ದಕ್ಷಿಣ ಮಧ್ಯ ರೈಲ್ವೆ (ಸಿಕಂದರಾಬಾದ್)
೧೦. ನೈಋತ್ಯ ರೈಲ್ವೆ (ಹುಬ್ಬಳ್ಳಿ)
೧೧. ಪೂರ್ವ ಮಧ್ಯ ರೈಲ್ವೆ (ಹಾಜಿಪುರ್)
೧೨.ಉತ್ತರ ಮಧ್ಯ ರೈಲ್ವೆ (ಅಲಹಾಬಾದ್)
೧೩. ವಾಯವ್ಯ ರೈಲ್ವೆ (ಜೈಪುರ)
೧೪.ಪೂರ್ವ ಕರಾವಳಿ ರೈಲ್ವೆ (ಭುವನೇಶ್ವರ್)
೧೫. ಪಶ್ಚಿಮ ಮಧ್ಯ ರೈಲ್ವೆ (ಜಬಲ್ ಪುರ)
೧೬. ಆಗ್ನೇಯ ಮಧ್ಯ ರೈಲ್ವೆ (ಬಿಲಾಸ್ಪುರ) , ಇತ್ಯಾದಿ.
ಸಂಪರ್ಕ ಸೇವೆಗಳು
೧. ಅಂಚೆ ಸೇವೆ:-
ಭಾರತದಲ್ಲಿ ೧೮೩೭ ರಲ್ಲಿ ಅಂಚೆ ಸೇವೆಯನ್ನು ಸಾರ್ವಜನಿಕರಿಗೆ ಕಲ್ಪಿಸಿದ ನಂತರ ದಿನ ಕಳೆದಂತೆ ಮೈಸೂರು ಪ್ರಾಂತ್ಯದಲ್ಲೂ ಈ ಸೇವೆಯನ್ನು ಸಾಕಷ್ಟು ಜಾರಿಗೊಳಿಸಲಾಯಿತು. ೧೮೮೬-೮೭ ರಷ್ಟರಲ್ಲಿ ಮೈಸೂರು ರಾಜ್ಯದಲ್ಲಿ ಸುಮಾರು ೨೩೧ ಅಂಚೆ ಕಚೇರಿಗಳಿದ್ದವು. ಕರ್ನಾಟಕ ಅಂಚೆ ಮತ್ತು ತಂತಿ ವೃತ್ತದ ಮುಖ್ಯ ಕಚೇರಿಯು ಬೆಂಗಳೂರಿನಲ್ಲಿ ಏಪ್ರಿಲ್ ೧,೧೯೬೦ ರಂದು ಪ್ರಾರಂಭವಾಯಿತು. ಅತ್ಯುತ್ತಮ ನಿರ್ವಹಣೆಯ ದೃಷ್ಟಿಯಿಂದ ಈ ವೃತ್ತವನ್ನು ೩ ವಲಯಗಳನ್ನಾಗಿ ವಿಭಜಿಸಲಾಗಿದೆ. ಅವೆಂದರೆ- ಬೆಂಗಳೂರು, ದಕ್ಷಿಣ ಕರ್ನಾಟಕ, ಮತ್ತು ಉತ್ತರ ಕರ್ನಾಟಕ ವಲಯಗಳು. ಇತ್ತೀಚಿನ ದಿನಗಳಲ್ಲಿ ರಾಜ್ಯದ ಮೂಲೆ ಮೂಲೆಗಳಿಗೂ ಅಂಚೆ ಮತ್ತು ತಂತಿ ಸೌಲಭ್ಯ ಕಲ್ಪಿಸಲಾಗಿದೆ.
೨. ದೂರಸಂಪರ್ಕ:-
ಭಾರತದಲ್ಲಿ ೧೮೫೧ ರಲ್ಲಿ ದೂರವಾಣಿ ಸೌಲಭ್ಯವನ್ನು ಜಾರಿಗೊಳಿಸಲಾಯಿತು. ಕರ್ನಾಟಕದಲ್ಲಿ ೧೮೮೧-೮೨ ರಲ್ಲಿ ಬೆಂಗಳೂರು ದಂಡು ಪ್ರದೇಶಕ್ಕೆ ದೂರವಾಣಿ ಸೌಲಭ್ಯ ಲಭಿಸಿತು. ೧೮೯೬ರಲ್ಲಿ ೧೧ ಮೈಲಿ ದೂರದ ಹೆಸರಘಟ್ಟ-ಬಾಣಾವರ ತಾತ್ಕಾಲಿಕ ದೂರವಾಣಿ ಮಾರ್ಗವನ್ನು ನಿರ್ಮಿಸಲಾಯಿತು. ೧೯೧೮ ರಷ್ಟತ್ತಿಗೆ ಹಳೆ ಮೈಸೂರು ಪ್ರಾಂತ್ಯದಲ್ಲಿ ಸುಮಾರು ೫೩೩ ಮೈಲಿ ಉದ್ದದ ದೂರವಾಣಿ ಮಾರ್ಗ ಲಭ್ಯವಿತ್ತು. ಇಂದಿನ ದಿನಗಳಲ್ಲಿ ರಾಜ್ಯದ ಮೂಲೆ ಮೂಲೆಗಳಲ್ಲಿ ದೂರವಾಣಿ ಸೇವೆಯನ್ನು ಕಲ್ಪಿಸಲಾಗಿದೆ. ಈ ಕಾರ್ಯದಲ್ಲಿ ಖಾಸಗಿ ಸಂಸ್ಥೆಗಳು ಸಹ ಕೈ ಗೂಡಿಸಿವೆ.ರಾಜ್ಯದ ಹಲವಾರು ನಗರ-ಪಟ್ಟಣಗಳು ಇಂಟರ್ನೆಟ್ ಜಾಲಕ್ಕೆ ಸೇರಿವೆ.
ರಾಷ್ಟ್ರಮಟ್ಟದ ಕಾರ್ಮಿಕ ಸಂಘಗಳು
ಇಂದು ದೇಶದಲ್ಲಿ ಅನೇಕ ರಾಷ್ಟ್ರ ಮಟ್ಟದ ಕಾರ್ಮಿಕ ಸಂಘಗಳಿವೆ. ಅವುಗಳ ವಿವರಣೆ ಕೆಳಕಂಡಂತಿದೆ.
೧. ಇಂಡಿಯನ್ ನ್ಯಾಷನಲ್ ಟ್ರೇಡ್ ಯೂನಿಯನ್ ಕಾಂಗ್ರೆಸ್ (INTUC);-
೧೯೪೭ ರಲ್ಲಿ ಭಾರತದ ರಾಷ್ಟ್ರೀಯ ಕಾಂಗ್ರೆಸ್ ನಿಂದ ಸ್ಥಾಪನೆಯಾದ ಈ ಸಂಘ ಇಂದು ದೇಶದಲ್ಲೇ ಎರಡನೇ ದೊಡ್ಡದಾದ ಕಾರ್ಮಿಕ ಸಂಘವಾಗಿದೆ. ಈ ಸಂಘಟನೆಗೆ ಸೇರಿರುವ ಕಾರ್ಮಿಕ ಸಂಘಗಳ ಸಂಖ್ಯೆ ಸುಮಾರು ೪,೪೨೮ ಇದ್ದು ಒಟ್ಟು ಸದಸ್ಯ ಬಲ ಸುಮಾರು ೨೬.೯ ಲಕ್ಷದಷ್ಟಿದೆ. ಇದು ಈಗ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಹತೋಟಿಯಲ್ಲಿದೆ.
೨. ಆಲ್ ಇಂಡಿಯಾ ಟ್ರೇಡ್ ಯೂನಿಯನ್ ಕಾಂಗ್ರೆಸ್ (AITUC):-
೧೯೨೦ರಲ್ಲಿ ಸ್ಥಾಪನೆಯಾದ ಈ ಕಾರ್ಮಿಕ ಸಂಘ ದೇಶದ ಅತ್ಯಂತ ಹಳೆಯದಾದ ಸಂಘವಾಗಿದೆ. ಸುಮಾರು ೪೩೦೦ ಸಂಘಗಳನ್ನು ಒಳಗೊಂಡಿರುವ ಈ ಸಂಘ ಸುಮಾರು ೯.೨೪ ಲಕ್ಷ ಸದಸ್ಯ ಬಲ ಹೊಂದಿದೆ. ಇದು ಕಮ್ಯೂನಿಸ್ಟ್ ಪಕ್ಷ (CPI) ದ ನಿಯಂತ್ರಣಕ್ಕೊಳಪಟ್ಟಿದೆ.
೩. ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ (CITU):-
೧೯೭೦ರಲ್ಲಿ ಅಸ್ತಿತ್ವಕ್ಕೆ ಬಂದ ಈ ಸಂಘದಲ್ಲಿ ಸುಮಾರು ೩,೦೧೧ ಕಾರ್ಮಿಕ ಸಂಘಗಳು ಮತ್ತು ಸುಮಾರು ೧೮ ಲಕ್ಷ ಸದಸ್ಯರಿದ್ದಾರೆ. ಇದು ಸಿ. ಪಿ.ಐ.(ಎಂ) ಪಕ್ಷದ ನಿಯಂತ್ರಣದಲ್ಲಿದೆ.
೪. ಹಿಂದ್ ಮಜದೂರ್ ಸಭಾ(HMS):-
ಇದು ೧೯೪೮ರಲ್ಲಿ ಸ್ಥಾಪಿಸಲ್ಪಟ್ಟಿತು. ಇದಕ್ಕೆ ಸೇರಿದ ಕಾರ್ಮಿಕ ಸಂಘಗಳ ಸಂಖ್ಯೆ ೧೨೪೮ ಇದ್ದು ಸದಸ್ಯರ ಸಂಖ್ಯೆ ೧೪.೮ ಲಕ್ಷದಷ್ಟಿದೆ. ಈ ಸಂಘ ಪ್ರಜಾ ಸೋಷಿಯಲಿಸ್ಟ್ ಪಕ್ಷದ ಹತೋಟಿಗೆ ಒಳಪಟ್ಟಿದೆ.
೫. ಭಾರತೀಯ ಮಜದೂರ್ ಸಂಘ (BMS):-
ಇದು ೧೯೫೪ ರಲ್ಲಿ ಸ್ಥಾಪಿಸಲ್ಪಟ್ಟಿತು. ಈ ಸಂಘಕ್ಕೆ ೨೮೭೧ ಕಾರ್ಮಿಕ ಸಂಘಗಳು ಸೇರಲ್ಪಟ್ಟಿದ್ದು ಸದಸ್ಯರ ಸಂಖ್ಯೆ ಸುಮಾರು ೩೧ ಲಕ್ಷದಷ್ಟಿದೆ. ಈ ಸಂಘ ಭಾರತೀಯ ಜನತಾ ಪಕ್ಷದ ಅಧೀನದಲ್ಲಿದೆ.ಇದು ದೇಶದಲ್ಲೇ ಅತ್ಯಂತ ದೊಡ್ಡದಾದ ಕಾರ್ಮಿಕ ಸಂಘವಾಗಿದೆ.
೬.ಯುನೈಟೆಡ್ ಟ್ರೇಡ್ ಯೂನಿಯನ್ ಕಾಂಗ್ರೆಸ್ (UTUC):-
ಇದು ೧೯೪೯ರಲ್ಲಿ ಸ್ಥಾಪನೆಯಾಯಿತು. ಈ ಸಂಘಕ್ಕೆ ೧೯೮೯ ಕಾರ್ಮಿಕ ಸಂಘಗಳು ಸೇರಿದ್ದು ಸುಮಾರು ೧೩.೪೩ ಲಕ್ಷ ಕಾರ್ಮಿಕರ ಸದಸ್ಯ ಬಲ ಹೊಂದಿದೆ. ಇದು ಕ್ರಾಂತಿಕಾರಿ ಸಮಾಜವಾದಿ ಪಕ್ಷದ ಹತೋಟಿಯಲ್ಲಿದೆ.
Saturday, 21 April 2018
ಕೆಲವು ಪ್ರಮುಖ ಖನಿಜಗಳ ವಿವರ:-
೧. ಕಬ್ಬಿಣದ ಅದಿರು:-
ಜಗತ್ತಿನಲ್ಲಿ ಅತೀ ಹೆಚ್ಚು ಕಬ್ಬಿಣದ ಅದಿರು ಲಭ್ಯವಿರುವ ದೇಶಗಳಲ್ಲಿ ಭಾರತಕ್ಕೆ ಎರಡನೇ ಸ್ಥಾನ ಲಭ್ಯವಿದೆ. ಮೊದಲನೇ ಸ್ಥಾನ ಬ್ರೆಜಿಲ್ ದೇಶದ್ದು. ಭಾರತದಲ್ಲಿ ಜಗತ್ತಿನ ಕಬ್ಬಿಣದ ಒಟ್ಟು ನಿಕ್ಷೇಪದ ಶೇಕಡಾ ೭ ರಷ್ಟಿದೆ. ಕಬ್ಬಿಣದ ಅದಿರಿನ ಉತ್ಪಾದನೆಯಲ್ಲಿ ವಿಶ್ವದಲ್ಲಿ ಭಾರತಕ್ಕೆ ಒಂಬತ್ತನೆಯ ಸ್ಥಾನ ಲಭ್ಯವಿದೆ.
೨. ಮ್ಯಾಂಗನೀಸ್:-
ಮ್ಯಾಂಗನೀಸ್ ಉತ್ಪಾದನೆಯಲ್ಲಿ
ಭಾರತಕ್ಕೆ ರಷ್ಯಾ ಮತ್ತು ಆಫ್ರಿಕಾಗಳ ನಂತರ ಮೂರನೇ ಸ್ಥಾನ ಲಭ್ಯವಿದೆ. ೧೯೯೯-೨೦೦೦ ರಲ್ಲಿ ೧೫.೧೪ ಲಕ್ಷ ಟನ್ನುಗಳಷ್ಟು ಮ್ಯಾಂಗನೀಸನ್ನು ಉತ್ಪಾದಿಸಲಾಗಿತ್ತು. ಮ್ಯಾಂಗನೀಸ್ ಬಿಹಾರ, ಮಧ್ಯಪ್ರದೇಶ, ಒರಿಸ್ಸಾ, ತಮಿಳುನಾಡು, ಮಹಾರಾಷ್ಟ್ರ, ಆಂಧ್ರಪ್ರದೇಶ ಮತ್ತು ಕರ್ನಾಟಕ ರಾಜ್ಯಗಳಲ್ಲಿ ಲಭ್ಯವಿದೆ.
೩. ಅಭ್ರಕ:-
ಕಾಗೆ ಬಂಗಾರ ಎಂದು ಪ್ರಸಿದ್ಧವಾಗಿರುವ ಅಭ್ರಕದ ಉತ್ಪಾದನೆಯಲ್ಲಿ ಭಾರತಕ್ಕೆ ಅಗ್ರಸ್ಥಾನವಿದೆ. ಜಗತ್ತಿನ ಒಟ್ಟು ಅಭ್ರಕದ ಉತ್ಪಾದನೆಯಲ್ಲಿ ಭಾರತದ ಪಾಲು ಶೇಕಡಾ ೮೦ರಷ್ಟಿದೆ.೧೯೯೯-೨೦೦೦ ರಲ್ಲಿ ೬೪.೮೯ ಲಕ್ಷ ಟನ್ನುಗಳಷ್ಟು ಅಭ್ರಕವನ್ನು ಉತ್ಪಾದಿಸಿತ್ತು.
೪. ಬಾಕ್ಸೈಟ್:-
ಬಾಕ್ಸೈಟನ್ನು ಉತ್ಪಾದಿಸುವ ಪ್ರಮುಖ ದೇಶಗಳಲ್ಲಿ ಭಾರತವೂ ಒಂದು. ಭಾರತದಲ್ಲಿ ೨೫ ಕೋಟಿ ಟನ್ನುಗಳಿಗೂ ಅಧಿಕ ಬಾಕ್ಸೈಟ್ ನಿಕ್ಷೇಪವಿದೆಯೆಂದು ಅಂದಾಜು ಮಾಡಲಾಗಿದ್ದು, ೧೯೯೯-೨೦೦೦ ರಲ್ಲಿ ೬೪.೮೯ ಲಕ್ಷ ಟನ್ನುಗಳಷ್ಟು ಬಾಕ್ಸೈಟ್ ಅದಿರನ್ನು ಉತ್ಪಾದಿಸಲಾಗಿತ್ತು.
೫. ಇಲ್ಮನೈಟ್:-
ಇಲ್ಮನೈಟ್ ಉತ್ಪಾದನೆಯಲ್ಲಿ ಭಾರತಕ್ಕೆ ಎರಡನೇ ಸ್ಥಾನ ಲಭ್ಯವಿದೆ. ಈ ಖನಿಜ ಉಕ್ಕಿನ ಮತ್ತು ಬಣ್ಣದ ಉತ್ಪಾದನೆಯಲ್ಲಿ ಬಳಸಲಾಗುತ್ತದೆ. ಕೇರಳ ಮತ್ತು ತಮಿಳುನಾಡಿನ ಕರಾವಳಿ ಪ್ರದೇಶಗಳಲ್ಲಿ ಈ ಖನಿಜ ಲಭ್ಯವಾಗುತ್ತದೆ.
೬. ಕ್ರೋಮೈಟ್:-
ಭಾರತದಲ್ಲಿ ಕ್ರೋಮೈಟ್ ಹೇರಳ ಪ್ರಮಾಣದಲ್ಲಿ ದೊರೆಯುತ್ತಿದ್ದು ೧೯೯೯-೨೦೦೦ ರಲ್ಲಿ ೧೩.೨೪ ಲಕ್ಷ ಟನ್ನುಗಳಷ್ಟು ಉತ್ಪಾದನೆಯಾಗಿತ್ತು. ಉತ್ತಮ ದರ್ಜೆಯ ಉಕ್ಕಿನ ತಯಾರಕೆ, ಬಣ್ಣ, ಉಷ್ಣ ನಿರೋಧಕ ಇಟ್ಟಿಗೆಗಳ ತಯಾರಿಕೆಯಲ್ಲಿ ಕ್ರೋಮೈಟ್ ಬಳಸುತ್ತಾರೆ. ಕರ್ನಾಟಕ, ಬಿಹಾರ, ಮತ್ತು ಒರಿಸ್ಸಾ ರಾಜ್ಯಗಳಲ್ಲಿ ಕ್ರೋಮೈಟ್ ಅಧಿಕ ಪ್ರಮಾಣದಲ್ಲಿ ದೊರೆಯುತ್ತದೆ.
೭. ಚಿನ್ನ:-
ಭಾರತ ಪ್ರಮುಖ ಚಿನ್ನದ ಉತ್ಪಾದನೆಯ ರಾಷ್ಟ್ರವೇನಲ್ಲ. ಭಾರತದಲ್ಲಿ ಚಿನ್ನದ ಅದಿರು ಕರ್ನಾಟಕ ರಾಜ್ಯದ ಕೋಲಾರದ ಊರಿಗಾಂ ( KGF) ಮತ್ತು ರಾಯಚೂರಿನ ಹಟ್ಟಿ ಚಿನ್ನದ ಗಣಿಗಳಲ್ಲಿ ಸಿಗುತ್ತಿದೆ. ಕರ್ನಾಟಕ ಇನ್ನೂ ಕೆಲವು ಕಡೆ, ಆಂಧ್ರಪ್ರದೇಶ, ಕೇರಳ, ತಮಿಳುನಾಡು ಮತ್ತು ಬಿಹಾರದ ಕೆಲವು ಭಾಗಗಳಲ್ಲಿ ಚಿನ್ನದ ನಿಕ್ಷೇಪವಿದೆಯೆಂದು ಪತ್ತೆ ಹಚ್ಚಲಾಗಿದೆ. ೧೯೯೯-೨೦೦೦ ರಲ್ಲಿ ೨೨೪೭ ಕೆ.ಜಿ. ಚಿನ್ನವನ್ನು ಉತ್ಪಾದಿಸಲಾಗಿತ್ತು.
೮. ತಾಮ್ರ:-
ಭಾರತ ಅತ್ಯಲ್ಪ ಪ್ರಮಾಣದಲ್ಲಿ ತಾಮ್ರವನ್ನು ಉತ್ಪಾದಿಸುತ್ತದೆ. ತಾಮ್ರ ಒಂದು ಬಹುಪಯೋಗಿ ಲೋಹ. ವಿದ್ಯುತ್ ಉಪಕರಣಗಳ ಕೈಗಾರಿಕೆಗಳಲ್ಲಿ ಇದು ವ್ಯಾಪಕವಾಗಿ ಬಳಸಲಾಗುತ್ತದೆ. ೧೯೯೯-೨೦೦೦ ರಲ್ಲಿ ಭಾರತ ೨೯.೭೬ ಲಕ್ಷ ಟನ್ನು ತಾಮ್ರದ ಅದಿರನ್ನು ಉತ್ಪಾದಿಸಿತ್ತು. ತಾಮ್ರದ ಅದಿರು ಮುಖ್ಯವಾಗಿ ಬಿಹಾರ, ರಾಜಸ್ಥಾನ, ರಾಜ್ಯಗಳಲ್ಲಿ ದೊರೆಯುತ್ತದೆ. ಕರ್ನಾಟಕ, ತಮಿಳುನಾಡು, ಪಶ್ಚಿಮ ಬಂಗಾಳ, ಮಧ್ಯ ಪ್ರದೇಶ ಮತ್ತು ಒರಿಸ್ಸಾ ರಾಜ್ಯಗಳಲ್ಲೂ ಅಲ್ಪ ಪ್ರಮಾಣದ ತಾಮ್ರ ದೊರೆಯುತ್ತದೆ.
ಅಮಲಿನ ಬೆಳೆಗಳು
,ಹೊಗೆಸೊಪ್ಪು:-
ಹೊಗೆಸೊಪ್ಪಿನಲ್ಲಿ ವರ್ಜೀನಿಯಾ ಹೊಗೆಸೊಪ್ಪು, ಅಗಿಯುವ ಹೊಗೆಸೊಪ್ಪು ಮತ್ತು ಬೀಡಿ ಹೊಗೆಸೊಪ್ಪು ಎಂಬ ಮೂರು ಗುಂಪುಗಳಿವೆ. ವರ್ಜೀನಿಯಾ ಹೊಗೆಸೊಪ್ಪು ರಾಜ್ಯದಲ್ಲಿ ಸುಮಾರು ೧೨,೦೦೦ ಹೆಕ್ಟೇರನ್ನು ಆಕ್ರಮಿಸಿದೆ. ಇದು ಶಿವಮೊಗ್ಗ, ಹಾಸನ,ಕೋಲಾರ, ಚಿತ್ರದುರ್ಗ ಮತ್ತು ಮಂಡ್ಯ ಜಿಲ್ಲೆಗಳಲ್ಲಿ ಕೇಂದ್ರಿಕೃತವಾಗಿದೆ. ಈ ಪ್ರದೇಶ ಗಳಿಂದ ವರ್ಷಕ್ಕೆ ಸುಮಾರು ೬,೦೦೦ ಟನ್ನುಗಳಷ್ಟು ಹೊಗೆಸೊಪ್ಪು ಉತ್ಪಾದನೆಯಾಗುತ್ತದೆ. ವರ್ಜೀನಿಯಾ ಗೋಲ್ಡ್ ,ಕುಟ್ ಸೇಗ-೫೧,ಎನ್. ಸಿ. ೯೫,ಎಚ್. ಆರ್ -೬೨-೭, ಇವು ಮುಖ್ಯವಾದ ತಳಿಗಳು. ಅಗಿಯುವ ಹೊಗೆಸೊಪ್ಪು ೧,೨೦೦ ಹೆಕ್ಟೇರುಗಳನ್ನು ಆಕ್ರಮಿಸಿದ್ದು ಇದರಿಂದ ಬರುವ ವಾರ್ಷಿಕ ಉತ್ಪತ್ತಿ ಸುಮಾರು ೨,೦೦೦ ಟನ್ನುಗಳು. ಈ ಬೆಳೆಯನ್ನು ಹೆಚ್ಚಾಗಿ ಚಿತ್ರದುರ್ಗ, ತುಮಕೂರು, ಮೈಸೂರು ಮತ್ತು ಬೆಳಗಾವಿ ಜಿಲ್ಲೆಗಳಲ್ಲಿ ಕಾಣಬಹುದು. ಅಗಿಯುವ ಹೊಗೆಸೊಪ್ಪಿನಲ್ಲಿ ಬಾಳೆ ಪಟ್ಟಿ, ನಾಗರಹೆಡೆ, ಆನೆಕಿವಿ, ಕತ್ತಾಳೆಪಟ್ಟೆ, ಗುತ್ತಿಗಿಡ ಮತ್ತು ಜೋವಾರಿ ಮುಖ್ಯವಾದ ತಳಿಗಳು. ಬೀಡಿ ಹೊಗೆಸೊಪ್ಪಿನ ಬೆಳೆಯನ್ನು ರಾಜ್ಯದಲ್ಲಿ ಸುಮಾರು ೩೦,೦೦೦ ಹೆಕ್ಟೇರುಗಳಲ್ಲಿ ಬೆಳೆಯಲಾಗುತ್ತದೆ.
Friday, 20 April 2018
ರಾಜ್ಯದ ಪಶುಸಂಪತ್ತು
ಕೃಷಿಯ ವ್ಯಾಪ್ತಿ ಬೆಳೆಗಳ ಬೇಸಾಯಕ್ಕೆ ಮಾತ್ರ ಸಿಮಿತವಲ್ಲ. ಪಶುಪಾಲನೆ ನಮ್ಮ ರೈತರ ಜೀವನದಾಗ ಹಾಸುಹೊಕ್ಕಾಗಿದೆ. ಇತ್ತೀಚೆಗೆ ಬೇಸಾಯದಲ್ಲಿ ಯಂತ್ರಗಳು ಬಳಕೆಗೆ ಬರುತ್ತಿದ್ದರೂ ೯೦% ಕ್ಕೂ ಹೆಚ್ಚು ರೈತರಿಗೆ ಬೇಸಾಯ ಕೆಲಸಗಳಿಗೆ ಎತ್ತುಗಳೇ ಮುಖ್ಯ ಆಧಾರ ಆಗ್ಯಾವ.
೧೯೬೬ರ ಪಶುಗಣತಿಯ ಪ್ರಕಾರ ರಾಜ್ಯದಲ್ಲಿ ಸುಮಾರು ೨೨೭ ದಶಲಕ್ಷ ಪಶುಗಳಿದ್ದವು. ಇದರಾಗ ೧೭೫.೧ ದಶಲಕ್ಷ ಗೋವುಗಳೂ ಮತ್ತು ೫೨.೯ ದಶಲಕ್ಷ ಎಮ್ಮೆಗಳೂ ಅದಾವು. ನಮ್ಮ ರಾಜ್ಯದಾಗ ಹಸುವಿನ ತಳಿ ದಿನಕ್ಕೆ ೬ ಕಿ. ಗ್ರಾಂ. ಮಾತ್ರ ಹಾಲನ್ನು ಎಮ್ಮೆ ೧.೫. ಕಿ. ಗ್ರಾಂ. ಮಾತ್ರ ಹಾಲನ್ನ ಕೊಡತಾವ.
ಅಮೃತ್ ಮಹಲ್, ಹಳ್ಳಿಕಾರ್, ಖಿಲಾರಿ, ಕೃಷ್ಣಕೊಳ್ಳ ಮತ್ತ ದೇವನಿ ನಮ್ಮ ಮುಖ್ಯವಾದ ಹಸುವಿನ ತಳಿಗಳು. ನಮ್ಮಲ್ಲಿ ಯಾವ ಶುದ್ಧ ತಳಿಯ ಎಮ್ಮೆಗಳೂ ಇಲ್ಲ. ರಾಷ್ಟ್ರ ಮಟ್ಟದಲ್ಲಿ ಮುಖ್ಯವಾಗಿರುವ ಮುರ್ರಾ, ಸುರ್ತಿ, ಮೆಹಸಾನ್, ಜಫರಾಬಾದಿ ಮತ್ತು ಪಂಡರಿಪುರಿ ತಳಿಗಳನ್ನೇ ನಮ್ ರಾಜ್ಯದಾಗ ತರಿಸಿ ತಳಿ ಅಭಿವೃದ್ಧಿ ಕಾರ್ಯದಲ್ಲಿ ಬಳಸಲಾಗುತ್ತದೆ.
ಇತ್ತೀಚೆಗೆ ರಾಜ್ಯದಲ್ಲಿ ಮಿಶ್ರ ತಳಿ ಹಸುಗಳ ಅಭಿವೃದ್ಧಿ ಕಾರ್ಯ ಹೆಚ್ಚಾಗುತ್ತಿದೆ. ಈ ಮಿಶ್ರತಳಿ ಅಭಿವೃದ್ಧಿ ಕಾರ್ಯದಾಗ ಹೋಲ್ಸ್ ಟೇನ್ ಫ್ರೆಷಿಯನ್, ಜರ್ಸಿ, ರೆಡ್ ಡೇನ್ ಮುಂತಾದ ವಿದೇಶಿ ತಳಿಗಳನ್ನು ಬಳಸಲಾಗಿದೆ. ಈ ಮಿಶ್ರತಳಿ ಹಸುಗಳು ದಿನಕ್ಕೆ ೨೦ ಲೀಟರ್ ವರೆಗೂ ಹಾಲು ಕೊಡಬಲ್ಲವು. ಈ ಮಿಶ್ರತಳಿ ಹಸುಗಳನ್ನು ಬೆಂಗಳೂರು, ಮೈಸೂರು, ಧಾರವಾಡ ಮುಂತಾದ ಪಟ್ಟಣಗಳ ಸುತ್ತಮುತ್ತಲಿನ ಗ್ರಾಮಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಾಣಬಹುದು.
- :ಕುರಿಗಳು :-
ಕುರಿ ಸಾಕುವುದು ಸಹ ನಮ್ ರೈತರಿಗೆ ಒಂದು ಮುಖ್ಯ ಕಸಬಾಗೆತಿ. ಇದರಿಂದ ರೈತರಿಗೆ ಬರುವ ಲಾಭ ಹೆಚ್ಚುವುದೇ ಅಲ್ಲದೇ ಉಣ್ಣೆ ಸಹ ಪಡೆಯಬಹುದು. ಕುರಿಗಳ ಹಿಕ್ಕೆ ಉತ್ತಮ ಗೊಬ್ಬರವಾಗೆತಿ. ೧೯೬೬ರ ಗಣತಿ ಪ್ರಕಾರ ನಮ್ಮಲ್ಲಿ ೪೭ ದಶಲಕ್ಷ ಕುರಿ ಇದ್ದವು. ಇವುಗಳ ಸಂಖ್ಯೆ ಬೆಂಗಳೂರ, ತುಮಕೂರು, ಮತ್ತ ಕೋಲ್ಹಾರ ಜಿಲ್ಲೆಯಲ್ಲಿ ಹೆಚ್ಚಾಗಿ ಕಂಡು ಬರತಾವು. ಕುರಿಯ ಜಾತಿಯನ್ನು ಆಯಾ ಪ್ರದೇಶದ ಮ್ಯಾಲೆ ವಿಂಗಡಿಸ್ಯಾರ. ಬನ್ನೂರ್, ಹಾಸನ ಮತ್ತು ಬಳ್ಳಾರಿ, ಎಂಬುದು ರಾಜ್ಯದ ಮುಖ್ಯ ಕುರಿ ತಳಿಗಳು. ಇವುಗಳಲ್ಲಿ ಬನ್ನೂರ್ ಜಾತಿಯ ಕುರಿಯು ಶ್ರೇಷ್ಠ ದರ್ಜೆಯ ಮಾಂಸ ಒದಗಿಸಲು ಸಹಾಯಕ.
- :ಮೇಕೆ ಅಥವಾ ಆಡು:-
ಮಾನವ ತನ್ನ ಉಪಯೋಗಕ್ಕಾಗಿ ಪಳಗಿಸಿದ ಪ್ರಾಣಿಗಳಲ್ಲಿ ಮೇಕೆಯು ಒಂದು. ಇದನ್ನು ಬಡವನ ಪಶುವೆಂದು ಪರಿಗಣಿಸಲಾಗಿದೆ. ಇದು ಎಲ್ಲ ಬಗೆಯ ಸೊಪ್ಪನ್ನು ತಿನ್ನುವುದರಿಂದ ಇದರ ಹಾಲಿನಲ್ಲಿ ವಿವಿಧ ಅನ್ನಾಂಗಗಳಿವೆ. ಇದು ಎಲ್ಲ ವಯಸ್ಸಿನವರಿಗೂ ಉತ್ತಮ ಆಹಾರ. ಮಹಾತ್ಮ ಗಾಂಧಿಯವರು ಪ್ರತಿನಿತ್ಯ ಆಡಿನ ಹಾಲನ್ನು ಬಳಸುತ್ತಿದ್ದರು ಎಂಬ ಅಂಶವನ್ನು ಇಲ್ಲಿ ನೆನಪಿಗೆ ತರಬಹುದು.
೧೯೬೬ರ ಗಣತಿಯ ಪ್ರಕಾರ ನಮ್ಮಲ್ಲಿ ಸುಮಾರು ೨೮ ಲಕ್ಷ ಆಡುಗಳಿದ್ದವು. ನಮ್ಮಲ್ಲಿ ಆಡುಗಳ ಜಾತಿಯನ್ನು ನಿರ್ದಿಷ್ಟವಾಗಿ ಗುರುತಿಸಲಾಗಿಲ್ಲ.
- : ಹಂದಿಗಳು:-
ನಮ್ಮಲ್ಲಿ ಮಾಂಸಕ್ಕಾಗಿ ಸಾಕುತ್ತಿರುವ ಪ್ರಾಣಿಗಳಲ್ಲಿ ಮುಖ್ಯವಾದದು ಹಂದಿ. ಕೆಲವು ರೈತರು ಹಂದಿ ಸಾಕುವುದನ್ನು ಒಂದು ಉಪಕಸಬಾಗಿಟ್ಟಕೊಂಡಿರುದನ್ನು ಕಾಣಬಹುದು. ಹಂದಿಯು ಒಂದು ಬಾರಿಗೆ ೧೦ ರಿಂದ ೧೪ ಮರಿಗಳನ್ನು ಹಾಕುತ್ತವೆ. ಒಂದೇ ಬಾರಿಗೆ ೨೮ ಮರಿಗಳನ್ನು ಹಾಕಿರುವ ನಿದರ್ಶನವು ಇದೆ.
- : ಕೋಳಿಸಾಕಣೆ:-
ಕೋಳಿಗಳನ್ನು ಮೊಟ್ಟೆಯ ತಳಿಗಳು ಮತ್ತು ಮಾಂಸದ ತಳಿಗಳು ಎಂಬುದಾಗಿ ವಿಂಗಡಿಸಬಹುದು. ಕೋಳಿ ಮೊಟ್ಟೆಯಲ್ಲಿ ದೇಹಪೋಷಣೆಗೆ ಬೇಕಾದ ಅನ್ನಾಂಗಗಳು, ಖನಿಜ ಲವಣಗಳು ಮತ್ತು ಸಸಾರಜನಕ ದೊರೆಯುತ್ತದೆ. ದೇಶದಲ್ಲಾಗುತ್ತಿರುವ ಮೊಟ್ಟೆಗಳ ಉತ್ಪಾದನೆ ಕೇವಲ ೮೦೦ ಕೋಟಿ ಮೊಟ್ಟೆಗಳು ಮಾತ್ರ.
Thursday, 19 April 2018
ತೋಟಗಾರಿಕೆ ಬೆಳೆಗಳು :-
ಕಾಫಿ :-
ಇದರ ಮೂಲಸ್ಥಾನ ದಕ್ಷಿಣ ಅಮೇರಿಕಾ ಎನ್ನಬಹುದು. ಕರ್ನಾಟಕ ರಾಜ್ಯದಲ್ಲಿಯೇ ಅಲ್ಲದೇ ಈ ಬೆಳೆಯನ್ನು ತಮಿಳುನಾಡು, ಕೇರಳ, ಮತ್ತು ಆಂಧ್ರದ ಕೆಲವು ಭಾಗಗಳಲ್ಲಿಯೂ ಕಾಣಬಹುದು. ನಮ್ಮ ರಾಜ್ಯದಲ್ಲಿ ಕಾಫಿ ಬೆಳೆಯು ಸುಮಾರು ೧,೩೦,೦೦೦ ಹೆಕ್ಟೇರುಗಳಲ್ಲಿದ್ದು ಬರುತ್ತಿರುವ ವಾರ್ಷಿಕ ಉತ್ಪತ್ತಿ ೧೦,೦೦೦ ಟನ್ನುಗಳು. ಕಾಫಿಯಿಂದ ರಾಜ್ಯಕ್ಕೆ ೨೦ ಕೋಟಿ ರೂ. ಗಳಿಗೂ ಹೆಚ್ಚು ವಿದೇಶಿ ವಿನಿಮಯ ಬರುತ್ತದೆ.
ಚಹಾ :-
ರಾಜ್ಯದಲ್ಲಿ ಈ ಬೆಳೆಗೆ ಅಷ್ಟು ಪ್ರಮುಖ ಸ್ಥಾನವಿಲ್ಲ. ಇದನ್ನು ೨೦,೦೦೦ ಹೆಕ್ಟೇರು ಪ್ರದೇಶದಲ್ಲಿ ಬೆಳೆಯಲಾಗುತ್ತದೆ. ವಾರ್ಷಿಕ ಉತ್ಪಾದನೆ ಸುಮಾರು ೩೦,೦೦೦ ಕೆ. ಜಿ. ಗಳು. ಟೀ ಬೆಳೆ ಹೆಚ್ಚಾಗಿ ಅಸ್ಸಾಂ, ಬಂಗಾಳ, ಉದತಮಂಡಲ ಮುಂತಾದ ಪ್ರದೇಶಗಳಲ್ಲಿ ಕಂಡುಬರುತ್ತದೆ.
ಗೋಡಂಬಿ :-
ಇದರ ಮೂಲಸ್ಥಾನ ಬ್ರೆಜಿಲ್. ನಮ್ಮ ದೇಶಕ್ಕೆ ಈ ಬೆಳೆ ೧೬ ನೇಯ ಶತಮಾನದಲ್ಲಿ ಬಂದಿತೆಂಬುದಕ್ಕೆ ಸಾಕಷ್ಟು ಆಧಾರಗಳಿವೆ. ಉತ್ಪಾದನೆಯ ದೃಷ್ಟಿಯಿಂದ ಭಾರತವು ಪ್ರಪಂಚದಲ್ಲೇ ಮೊದಲನೇ ಸ್ಥಾನ ಪಡೆದಿದೆ. ರಾಜ್ಯದಲ್ಲಿ ಈ ಬೆಳೆಯನ್ನು ಸುಮಾರು ೧೮,೦೦೦ ಹೆಕ್ಟೇರುಗಳಲ್ಲಿ ಬೆಳೆಯಲಾಗುತ್ತದೆ. ವಾರ್ಷಿಕ ಉತ್ಪಾದನೆ ೨೨,೦೦೦ ಟನ್ನುಗಳು. ನಮ್ಮ ದೇಶದಲ್ಲಿ ಈ ಬೆಳೆ ಹೆಚ್ಚಾಗಿ ಕರ್ನಾಟಕ, ಕೇರಳ, ತಮಿಳುನಾಡು ಮತ್ತು ಮಹಾರಾಷ್ಟ್ರ, ರಾಜ್ಯಗಳಲ್ಲಿ ವ್ಯಾಪಿಸಿದೆ. ಈ ಬೆಳೆಯಿಂದ ದೇಶಕ್ಕೆ ಗಣನೀಯ ಪ್ರಮಾಣದಲ್ಲಿ ವಿದೇಶಿ ವಿನಿಮಯ ದೊರೆಯುತ್ತದೆ.
ಸಶಸ್ತ್ರ ಪಡೆಗಳ ಮುಖ್ಯಸ್ಥರು
೧. ಮಹಾದಂಡನಾಯಕ - ರಾಷ್ಟ್ರಪತಿ ಎ. ಪಿ. ಜೆ. ಅಬ್ದುಲ್ ಕಲಾಂ.
೨.ಭೂ ಸೇನೆಯ ಮುಖ್ಯಸ್ಥರು- ಜನರಲ್ ಜೆ. ಜೆ. ಸಿಂಗ್
೩. ವಾಯುಪಡೆಯ ಮುಖ್ಯಸ್ಥರು - ಏರ್ ಚೀಫ್ ಮಾರ್ಷಲ್ ಪಾಲಿ ಹೋಮಿ ಮೇಜರ್
೪. ನೌಕಾಪಡೆಯ ಮುಖ್ಯಸ್ಥರು - ಅಡ್ಮಿರಲ್ ಸುರೇಶ್ ಮೆಹ್ತಾ.
Sunday, 15 April 2018
ಜಿಕೆ ಸಿರೀಜ್ ೭
೧) ಕೆ ಜಿ ಎಫ್ ಚಿನ್ನದ ಗಣಿ ಯಾವ ಜಿಲ್ಲೆಯಲ್ಲಿದೆ?
ಅ) ತುಮಕೂರು
ಬ) ಕೋಲಾರ
ಕ) ರಾಯಚೂರು
ಡ) ಶಿವಮೊಗ್ಗ
ಉತ್ತರ ಬ) ಕೋಲಾರ
೨)ಮೈಸೂರಿನ ಮೃಗಾಲಯ ಪ್ರಾರಂಭವಾದ ವರ್ಷ ಯಾವುದು?
ಅ) ೧೮೯೨
ಬ)೧೮೫೦
ಕ)೧೯೧೩
ಡ)೧೯೨೩
ಉತ್ತರ ಅ) ೧೮೯೨
೩)ಬೆಂಗಳೂರಿನ ಖ್ಯಾತ ಲಾಲ್ ಬಾಗ್ ಉದ್ಯಾನವನ ಯಾರಿಂದ ಸ್ಥಾಪಿಸಲ್ಪಟ್ಟಿತು?
ಅ) ಮಾಗಡಿ ಕೆಂಪೇಗೌಡ
ಬ) ಹೈದರಾಲಿ
ಕ) ನಾಲ್ವಡಿ ಕೃಷ್ಣರಾಜ ಒಡೆಯರ್
ಡ) ಟಿಪ್ಪು ಸುಲ್ತಾನ್
ಉತ್ತರ ಬ) ಹೈದರಾಲಿ
೪)ಕುವೆಂಪುರವರಿಗೆ ಜ್ಞಾನಪೀಠ ಪ್ರಶಸ್ತಿ ಯವಾಗ ದೊರಕಿದೆ?
ಅ) ೧೯೬೭
ಬ)೧೯೫೫
ಕ)೧೯೭೨
ಡ)೧೯೬೯
ಉತ್ತರ ಅ) ೧೯೬೭
೫)ಕರ್ನಾಟಕದ ಅತ್ಯಂತ ವಿಶಾಲವಾದ ಕೈಗಾರಿಕಾ ಪ್ರದೇಶ ಯಾವುದು?
ಅ) ಪೀಣ್ಯಾ ಕೈಗಾರಿಕಾ ಪ್ರದೇಶ
ಬ) ದೊಡ್ಡ ಬಳ್ಳಾಪುರ ಕೈಗಾರಿಕಾ ಪ್ರದೇಶ
ಕ) ಸಂಡೂರು ಕೈಗಾರಿಕಾ ಪ್ರದೇಶ
ಡ) ಮೇಲಿನ ಯಾವುದು ಅಲ್ಲ
ಉತ್ತರ ಅ) ಪೀಣ್ಯಾ ಕೈಗಾರಿಕಾ ಪ್ರದೇಶ
೬)ಕೇಂದ್ರೀಯ ಆಹಾರ ಸಂಶೋಧನಾಲಯ ಯಾವ ಊರಿನಲ್ಲಿದೆ?
ಅ) ಬೆಂಗಳೂರು
ಬ) ಶಿವಮೊಗ್ಗ
ಕ) ಮೈಸೂರು
ಡ) ಮೇಲಿನ ಯಾವುದು ಅಲ್ಲ
೭)ಕಬಿನಿ ಜಲಾಶಯ ಎಲ್ಲಿದೆ?
ಅ) ಬೀಚನಹಳ್ಳಿ
ಬ) ಮೈಸೂರು
ಕ) ಗೊರೂರು
ಡ) ಮೇಲಿನ ಯಾವುದು ಅಲ್ಲ
ಉತ್ತರ ಅ) ಬೀಚನಹಳ್ಳಿ
೮)ಸಲೀಂ ಅಲಿ ಈ ಕೆಳಗಿನ ಯಾವುದರೊಂದಿಗೆ ಸಂಬಂಧಿಸಿದ್ದಾರೆ?
ಅ) ಉರ್ದು ಸಾಹಿತ್ಯ
ಬ) ಪಕ್ಷಿ ಶಾಸ್ತ್ರ
ಕ) ಸ್ವತಂತ್ರ ಚಳುವಳಿ
ಡ) ಇಂಗ್ಲೀಷ್ ಕಾವ್ಯ
ಉತ್ತರ ಬ) ಪಕ್ಷಿ ಶಾಸ್ತ್ರ
೯) 'ಏಪ್ರಿಲ್ ೭' ನ್ನು ಯಾವ ದಿನವನ್ನಾಗಿ ಆಚರಿಸಲಾಗುತ್ತದೆ?
ಅ) ವಿಶ್ವ ಪರಿಸರ ದಿನ
ಬ) ಅಂತರರಾಷ್ಟ್ರೀಯ ಮಹಿಳಾ ದಿನ
ಕ) ವಿಶ್ವ ಆರೋಗ್ಯ ದಿನ
ಡ) ರೆಡ್ ಕ್ರಾಸ್ ದಿನ
ಉತ್ತರ ಕ) ವಿಶ್ವ ಆರೋಗ್ಯ ದಿನ
೧೦)ಮಾನ್ಸೂನ್ ಎಂಬ ಪದವನ್ನು ಯಾವ ಭಾಷೆಯಿಂದ ಆಯ್ದುಕೊಳ್ಳಲಾಗಿದೆ?
ಅ) ಲ್ಯಾಟಿನ್
ಬ) ಅರೇಬಿಕ್
ಕ) ಗ್ರೀಕ್
ಡ) ಪರ್ಷಿಯನ್
-
ಅನುಕರಣಾವ್ಯಯ :- ಅನುಕರಣಾವ್ಯಯ :- ನಮಗೆ ಕೇಳಿಸಿದಂತಹ ಮತ್ತು ಕಾಣಿಸಿದಂತಹ ಧ್ವನಿ ಮತ್ತು ವಸ್ತುಗಳನ್ನು ಕೇಳಿಸಿದಂತೆ, ಕಾಣಿಸಿದಂತೆ ಪುನಃ ಅನುಕ...
-
ನಾಳೆ ಎಂದವನ ಮನೆ ಹಾಳು:- ಕೆಲವರಿಗೆ ಯಾವುದೇ ಕೆಲಸ ಕೊಟ್ಟರು ಅದನ್ನು ಅಂದೆ ಮಾಡದೆ ನಾಳೆಗೆ ಮುಂದೂಡುವ ಪ್ರವೃತ್ತಿಯನ್ನು ಬೆಳೆಸಿಕೊಂಡಿರುತ್ತಾರೆ. ಹೀಗಾಗ...
-
ಕಮಿಷನರುಗಳ ಆಳ್ವಿಕೆ :- ಕ್ರಿ.ಶ. ೧೮೩೧ ರಿಂದ ಸುಮಾರು ೫೦ ವರ್ಷಗಳ ಕಾಲ ಮೈಸೂರು ರಾಜ್ಯದ ಆಡಳಿತವನ್ನು ಬ್ರಿಟಿಷ್ ಕಮಿಷನರ್ ಗಳು ಮಾಡಿದರು. ಪ್ರಾರಂಭದಲ್ಲಿ...