ಕಾಫಿ :-
ಇದರ ಮೂಲಸ್ಥಾನ ದಕ್ಷಿಣ ಅಮೇರಿಕಾ ಎನ್ನಬಹುದು. ಕರ್ನಾಟಕ ರಾಜ್ಯದಲ್ಲಿಯೇ ಅಲ್ಲದೇ ಈ ಬೆಳೆಯನ್ನು ತಮಿಳುನಾಡು, ಕೇರಳ, ಮತ್ತು ಆಂಧ್ರದ ಕೆಲವು ಭಾಗಗಳಲ್ಲಿಯೂ ಕಾಣಬಹುದು. ನಮ್ಮ ರಾಜ್ಯದಲ್ಲಿ ಕಾಫಿ ಬೆಳೆಯು ಸುಮಾರು ೧,೩೦,೦೦೦ ಹೆಕ್ಟೇರುಗಳಲ್ಲಿದ್ದು ಬರುತ್ತಿರುವ ವಾರ್ಷಿಕ ಉತ್ಪತ್ತಿ ೧೦,೦೦೦ ಟನ್ನುಗಳು. ಕಾಫಿಯಿಂದ ರಾಜ್ಯಕ್ಕೆ ೨೦ ಕೋಟಿ ರೂ. ಗಳಿಗೂ ಹೆಚ್ಚು ವಿದೇಶಿ ವಿನಿಮಯ ಬರುತ್ತದೆ.
ಚಹಾ :-
ರಾಜ್ಯದಲ್ಲಿ ಈ ಬೆಳೆಗೆ ಅಷ್ಟು ಪ್ರಮುಖ ಸ್ಥಾನವಿಲ್ಲ. ಇದನ್ನು ೨೦,೦೦೦ ಹೆಕ್ಟೇರು ಪ್ರದೇಶದಲ್ಲಿ ಬೆಳೆಯಲಾಗುತ್ತದೆ. ವಾರ್ಷಿಕ ಉತ್ಪಾದನೆ ಸುಮಾರು ೩೦,೦೦೦ ಕೆ. ಜಿ. ಗಳು. ಟೀ ಬೆಳೆ ಹೆಚ್ಚಾಗಿ ಅಸ್ಸಾಂ, ಬಂಗಾಳ, ಉದತಮಂಡಲ ಮುಂತಾದ ಪ್ರದೇಶಗಳಲ್ಲಿ ಕಂಡುಬರುತ್ತದೆ.
ಗೋಡಂಬಿ :-
ಇದರ ಮೂಲಸ್ಥಾನ ಬ್ರೆಜಿಲ್. ನಮ್ಮ ದೇಶಕ್ಕೆ ಈ ಬೆಳೆ ೧೬ ನೇಯ ಶತಮಾನದಲ್ಲಿ ಬಂದಿತೆಂಬುದಕ್ಕೆ ಸಾಕಷ್ಟು ಆಧಾರಗಳಿವೆ. ಉತ್ಪಾದನೆಯ ದೃಷ್ಟಿಯಿಂದ ಭಾರತವು ಪ್ರಪಂಚದಲ್ಲೇ ಮೊದಲನೇ ಸ್ಥಾನ ಪಡೆದಿದೆ. ರಾಜ್ಯದಲ್ಲಿ ಈ ಬೆಳೆಯನ್ನು ಸುಮಾರು ೧೮,೦೦೦ ಹೆಕ್ಟೇರುಗಳಲ್ಲಿ ಬೆಳೆಯಲಾಗುತ್ತದೆ. ವಾರ್ಷಿಕ ಉತ್ಪಾದನೆ ೨೨,೦೦೦ ಟನ್ನುಗಳು. ನಮ್ಮ ದೇಶದಲ್ಲಿ ಈ ಬೆಳೆ ಹೆಚ್ಚಾಗಿ ಕರ್ನಾಟಕ, ಕೇರಳ, ತಮಿಳುನಾಡು ಮತ್ತು ಮಹಾರಾಷ್ಟ್ರ, ರಾಜ್ಯಗಳಲ್ಲಿ ವ್ಯಾಪಿಸಿದೆ. ಈ ಬೆಳೆಯಿಂದ ದೇಶಕ್ಕೆ ಗಣನೀಯ ಪ್ರಮಾಣದಲ್ಲಿ ವಿದೇಶಿ ವಿನಿಮಯ ದೊರೆಯುತ್ತದೆ.
No comments:
Post a Comment