Friday, 20 April 2018

ರಾಜ್ಯದ ಪಶುಸಂಪತ್ತು

     ಕೃಷಿಯ ವ್ಯಾಪ್ತಿ ಬೆಳೆಗಳ ಬೇಸಾಯಕ್ಕೆ ಮಾತ್ರ ಸಿಮಿತವಲ್ಲ. ಪಶುಪಾಲನೆ ನಮ್ಮ ರೈತರ ಜೀವನದಾಗ ಹಾಸುಹೊಕ್ಕಾಗಿದೆ. ಇತ್ತೀಚೆಗೆ ಬೇಸಾಯದಲ್ಲಿ ಯಂತ್ರಗಳು ಬಳಕೆಗೆ ಬರುತ್ತಿದ್ದರೂ ೯೦% ಕ್ಕೂ ಹೆಚ್ಚು ರೈತರಿಗೆ ಬೇಸಾಯ ಕೆಲಸಗಳಿಗೆ ಎತ್ತುಗಳೇ ಮುಖ್ಯ ಆಧಾರ ಆಗ್ಯಾವ.
        ೧೯೬೬ರ ಪಶುಗಣತಿಯ ಪ್ರಕಾರ ರಾಜ್ಯದಲ್ಲಿ ಸುಮಾರು ೨೨೭ ದಶಲಕ್ಷ ಪಶುಗಳಿದ್ದವು. ಇದರಾಗ ೧೭೫.೧ ದಶಲಕ್ಷ ಗೋವುಗಳೂ ಮತ್ತು ೫೨.೯ ದಶಲಕ್ಷ ಎಮ್ಮೆಗಳೂ ಅದಾವು. ನಮ್ಮ ರಾಜ್ಯದಾಗ ಹಸುವಿನ ತಳಿ ದಿನಕ್ಕೆ ೬ ಕಿ. ಗ್ರಾಂ. ಮಾತ್ರ ಹಾಲನ್ನು ಎಮ್ಮೆ ೧.೫. ಕಿ. ಗ್ರಾಂ. ಮಾತ್ರ ಹಾಲನ್ನ ಕೊಡತಾವ.
          ಅಮೃತ್ ಮಹಲ್, ಹಳ್ಳಿಕಾರ್, ಖಿಲಾರಿ, ಕೃಷ್ಣಕೊಳ್ಳ ಮತ್ತ ದೇವನಿ ನಮ್ಮ ಮುಖ್ಯವಾದ ಹಸುವಿನ ತಳಿಗಳು. ನಮ್ಮಲ್ಲಿ ಯಾವ ಶುದ್ಧ ತಳಿಯ ಎಮ್ಮೆಗಳೂ ಇಲ್ಲ. ರಾಷ್ಟ್ರ ಮಟ್ಟದಲ್ಲಿ ಮುಖ್ಯವಾಗಿರುವ ಮುರ್ರಾ, ಸುರ್ತಿ, ಮೆಹಸಾನ್, ಜಫರಾಬಾದಿ ಮತ್ತು ಪಂಡರಿಪುರಿ ತಳಿಗಳನ್ನೇ ನಮ್ ರಾಜ್ಯದಾಗ ತರಿಸಿ ತಳಿ ಅಭಿವೃದ್ಧಿ ಕಾರ್ಯದಲ್ಲಿ ಬಳಸಲಾಗುತ್ತದೆ.
           ಇತ್ತೀಚೆಗೆ ರಾಜ್ಯದಲ್ಲಿ ಮಿಶ್ರ ತಳಿ ಹಸುಗಳ ಅಭಿವೃದ್ಧಿ ಕಾರ್ಯ ಹೆಚ್ಚಾಗುತ್ತಿದೆ. ಈ ಮಿಶ್ರತಳಿ ಅಭಿವೃದ್ಧಿ ಕಾರ್ಯದಾಗ ಹೋಲ್ಸ್ ಟೇನ್ ಫ್ರೆಷಿಯನ್, ಜರ್ಸಿ, ರೆಡ್ ಡೇನ್ ಮುಂತಾದ ವಿದೇಶಿ ತಳಿಗಳನ್ನು ಬಳಸಲಾಗಿದೆ. ಈ ಮಿಶ್ರತಳಿ ಹಸುಗಳು ದಿನಕ್ಕೆ ೨೦ ಲೀಟರ್ ವರೆಗೂ ಹಾಲು ಕೊಡಬಲ್ಲವು. ಈ ಮಿಶ್ರತಳಿ ಹಸುಗಳನ್ನು ಬೆಂಗಳೂರು, ಮೈಸೂರು, ಧಾರವಾಡ ಮುಂತಾದ ಪಟ್ಟಣಗಳ ಸುತ್ತಮುತ್ತಲಿನ ಗ್ರಾಮಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಾಣಬಹುದು.
   
                         - :ಕುರಿಗಳು :-
           ಕುರಿ ಸಾಕುವುದು ಸಹ ನಮ್ ರೈತರಿಗೆ ಒಂದು ಮುಖ್ಯ ಕಸಬಾಗೆತಿ. ಇದರಿಂದ ರೈತರಿಗೆ ಬರುವ ಲಾಭ ಹೆಚ್ಚುವುದೇ ಅಲ್ಲದೇ ಉಣ್ಣೆ ಸಹ ಪಡೆಯಬಹುದು. ಕುರಿಗಳ ಹಿಕ್ಕೆ  ಉತ್ತಮ ಗೊಬ್ಬರವಾಗೆತಿ. ೧೯೬೬ರ ಗಣತಿ ಪ್ರಕಾರ ನಮ್ಮಲ್ಲಿ ೪೭ ದಶಲಕ್ಷ ಕುರಿ ಇದ್ದವು. ಇವುಗಳ ಸಂಖ್ಯೆ ಬೆಂಗಳೂರ, ತುಮಕೂರು, ಮತ್ತ ಕೋಲ್ಹಾರ ಜಿಲ್ಲೆಯಲ್ಲಿ ಹೆಚ್ಚಾಗಿ ಕಂಡು ಬರತಾವು. ಕುರಿಯ ಜಾತಿಯನ್ನು ಆಯಾ ಪ್ರದೇಶದ ಮ್ಯಾಲೆ ವಿಂಗಡಿಸ್ಯಾರ. ಬನ್ನೂರ್, ಹಾಸನ ಮತ್ತು ಬಳ್ಳಾರಿ, ಎಂಬುದು ರಾಜ್ಯದ ಮುಖ್ಯ ಕುರಿ ತಳಿಗಳು. ಇವುಗಳಲ್ಲಿ ಬನ್ನೂರ್ ಜಾತಿಯ ಕುರಿಯು ಶ್ರೇಷ್ಠ ದರ್ಜೆಯ ಮಾಂಸ ಒದಗಿಸಲು ಸಹಾಯಕ.

                  - :ಮೇಕೆ ಅಥವಾ ಆಡು:-
         ಮಾನವ ತನ್ನ ಉಪಯೋಗಕ್ಕಾಗಿ ಪಳಗಿಸಿದ ಪ್ರಾಣಿಗಳಲ್ಲಿ ಮೇಕೆಯು ಒಂದು. ಇದನ್ನು ಬಡವನ ಪಶುವೆಂದು ಪರಿಗಣಿಸಲಾಗಿದೆ. ಇದು ಎಲ್ಲ ಬಗೆಯ ಸೊಪ್ಪನ್ನು ತಿನ್ನುವುದರಿಂದ ಇದರ ಹಾಲಿನಲ್ಲಿ ವಿವಿಧ ಅನ್ನಾಂಗಗಳಿವೆ. ಇದು ಎಲ್ಲ ವಯಸ್ಸಿನವರಿಗೂ ಉತ್ತಮ ಆಹಾರ. ಮಹಾತ್ಮ ಗಾಂಧಿಯವರು ಪ್ರತಿನಿತ್ಯ ಆಡಿನ ಹಾಲನ್ನು ಬಳಸುತ್ತಿದ್ದರು ಎಂಬ ಅಂಶವನ್ನು ಇಲ್ಲಿ ನೆನಪಿಗೆ ತರಬಹುದು.
            ೧೯೬೬ರ ಗಣತಿಯ ಪ್ರಕಾರ ನಮ್ಮಲ್ಲಿ ಸುಮಾರು ೨೮ ಲಕ್ಷ ಆಡುಗಳಿದ್ದವು. ನಮ್ಮಲ್ಲಿ ಆಡುಗಳ ಜಾತಿಯನ್ನು ನಿರ್ದಿಷ್ಟವಾಗಿ ಗುರುತಿಸಲಾಗಿಲ್ಲ.

                    - : ಹಂದಿಗಳು:-
            ನಮ್ಮಲ್ಲಿ ಮಾಂಸಕ್ಕಾಗಿ ಸಾಕುತ್ತಿರುವ ಪ್ರಾಣಿಗಳಲ್ಲಿ ಮುಖ್ಯವಾದದು ಹಂದಿ. ಕೆಲವು ರೈತರು ಹಂದಿ ಸಾಕುವುದನ್ನು ಒಂದು ಉಪಕಸಬಾಗಿಟ್ಟಕೊಂಡಿರುದನ್ನು ಕಾಣಬಹುದು. ಹಂದಿಯು ಒಂದು ಬಾರಿಗೆ ೧೦ ರಿಂದ ೧೪ ಮರಿಗಳನ್ನು ಹಾಕುತ್ತವೆ. ಒಂದೇ ಬಾರಿಗೆ ೨೮ ಮರಿಗಳನ್ನು ಹಾಕಿರುವ ನಿದರ್ಶನವು ಇದೆ.
                
                    - : ಕೋಳಿಸಾಕಣೆ:-
              ಕೋಳಿಗಳನ್ನು ಮೊಟ್ಟೆಯ ತಳಿಗಳು ಮತ್ತು ಮಾಂಸದ ತಳಿಗಳು ಎಂಬುದಾಗಿ ವಿಂಗಡಿಸಬಹುದು. ಕೋಳಿ ಮೊಟ್ಟೆಯಲ್ಲಿ ದೇಹಪೋಷಣೆಗೆ ಬೇಕಾದ ಅನ್ನಾಂಗಗಳು, ಖನಿಜ ಲವಣಗಳು ಮತ್ತು ಸಸಾರಜನಕ ದೊರೆಯುತ್ತದೆ. ದೇಶದಲ್ಲಾಗುತ್ತಿರುವ ಮೊಟ್ಟೆಗಳ ಉತ್ಪಾದನೆ ಕೇವಲ ೮೦೦ ಕೋಟಿ ಮೊಟ್ಟೆಗಳು ಮಾತ್ರ.

No comments:

Post a Comment