Tuesday, 24 April 2018

ನಿಕೋಲಾಯ್ ಲೆನಿನ್ (೧೮೭೦-೧೯೨೪)

         ಸೋವಿಯತ್ ರಷ್ಯಾದ ಪ್ರವಾದಿ ಲೆನಿನ್ ೧೮೭೦ ಏಪ್ರಿಲ್ ೨೦ ರಂದು ವೊಲ್ಗಾ ನದಿ ತೀರದ ಸಿಂಬ್ರಿಸ್ಕ್ ಎಂಬಲ್ಲಿ ಜನಿಸಿದರು. ವ್ಲಾಡಿಮಿರ್ ಇಲಿಚ್ ಉಲ್ಯನೋವ್ ಅವನ ಮೊದಲ ಹೆಸರು. ಅವನ ತಂದೆ ಇಲ್ಯನಿಕೋಲಾಯ್  ಒಬ್ಬ ಶಾಲಾ ಮೇಲ್ವಿಚಾರಕನಾಗಿದ್ದನು. ತಾಯಿ ಮೇರಿ ಸಹ ಶಾಲಾ ಶಿಕ್ಷಕಿ, ಲೆನಿನ್ ನು ಸೈಂಟ್ ಪೀಟರ್ಸ್ಬರ್ಗ್ ವಿಶ್ವವಿದ್ಯಾಲಯದಿಂದ ಕಾನೂನು ಪದವೀಧರರಾದರು. ನಂತರ ಮಾರ್ಕ್ಸ್ ತತ್ವಗಳಿಂದ ಪ್ರಭಾವಿತರಾಗಿದ್ದ ಕ್ರಾಂತಿಕಾರಿ ಚಟುವಟಿಕೆಗಳಲ್ಲಿ ತೊಡಗಿದನು. ಹೀಗಾಗಿ ಸೈಬೀರಿಯಾಗೆ ಗಡಿಪಾರಾದನು. ನಂತರ ೧೯೧೫ ಸೈಂಟ್ ಪೀಟರ್ಸ್ಬರ್ಗ್ ನಲ್ಲಿ ಕಾರ್ಮಿಕ ವಿಮೋಚನಾ ಸಂಘರ್ಷ ಸಮಿತಿಯನ್ನು ಸ್ಥಾಪಿಸಿ, ಸಮಾಜವಾದಿ ಪ್ರಜಾಪ್ರಭುತ್ವ ಪಕ್ಷದ ನಾಯಕನಾದನು. ಇಸ್ ಕ್ರಾ(ಸ್ಪಾರ್ಕ್) ಎಂಬ ಪತ್ರಿಕೆಯನ್ನು ಹೊರಡಿಸಿದನು‌.
ಮಾರ್ಕ್ಸಿಸಂ ಅವನ ಇನ್ನೊಂದು ಪತ್ರಿಕೆಯಾಗಿತ್ತು.
               ೧೯೧೭ರ ಬೊಲ್ಷೆವಿಕ್ ಕ್ರಾಂತಿಯಲ್ಲಿ ಇವನ ಪಾತ್ರ ಮಹತ್ವದ್ದು. ಆಗ ಸ್ನೇಹಿತ ಮತ್ತು ತನ್ನ ವಿದೇಶಾಂಗ ಮಂತ್ರಿಯಾಗಿದ್ದ ಟ್ರಾಟಸ್ಕಿಯ ಕೆಂಪು ಸೈನ್ಯವನ್ನು ಬಳಸಿಕೊಂಡು ಕೆರೆನಸ್ಕಿಯ ತಾತ್ಕಾಲಿಕ ಸರ್ಕಾರವನ್ನು ಕಿತ್ತೊಗೆದು ತನ್ನದೇ ಆದ ಬೋಲ್ಷೆವಿಕ್ (ಸಮಾಜವಾದಿ ಗಣರಾಜ್ಯ) ಸರ್ಕಾರವನ್ನು ಸ್ಥಾಪಿಸಿದನು. ಇದನ್ನು ಅಕ್ಟೋಬರ್ ಕ್ರಾಂತಿ ಎನ್ನುವರು. ಲೆನಿನ್ ಪ್ರಜಾಪ್ರಭುತ್ವ ವಿರೋಧಿ. ರೈತರ ಮತ್ತು ಕಾರ್ಮಿಕ ಸರ್ವಾಧಿಕಾರದ ಸಮಾಜವಾದಿ ಸರ್ಕಾರದಲ್ಲಿ ಅವನಿಗೆ ನಂಬಿಕೆ ಇತ್ತು. ಅದಕ್ಕಾಗಿ ಅವನು ರಷ್ಯಾದ ಸಾರ್ವಜನಿಕ ಆಸ್ತಿಪಾಸ್ತಿಯನ್ನು ರಾಷ್ಟ್ರೀಕರಣಗೊಳಿಸಿ ಉತ್ಪಾದನೆ ಮತ್ತು ಹಂಚಿಕೆಗಳ ಮೇಲೆ ಸರ್ಕಾರದ ಒಡೆತನವನ್ನು ಸ್ಥಾಪಿಸಿದನು. ಈ ನಿಟ್ಟಿನಲ್ಲಿ ಆತ ಹಲವಾರು ಸಮಸ್ಯೆಯನ್ನು ಎದುರಿಸಿದನು.  ಫ್ರಾನ್ಸ್ ಮತ್ತು ಇಂಗ್ಲೆಂಡ್ ಗಳು ಅವನ ಸಮಾಜವಾದಿ ಸರ್ಕಾರವನ್ನು ವಿರೋಧಿಸಿದವು. ಆತ ಜರ್ಮನಿಯೊಂದಿಗೆ ಮಾಡಿಕೊಂಡ ಒಪ್ಪಂದ ಅವುಗಳಿಗೆ ಹಿಡಿಸಲಿಲ್ಲ. ಅಲ್ಲದೆ ಆಂತರಿಕವಾಗಿ ಬಳಿ ಸೈನ್ಯದ  ನಾಯಕರಾದ ಕೆರೆನಸ್ಕಿ, ಕಾರ್ವಾಲೋವ್ ,ಡೆನ್ಕಿನ್, ರಾಗಟ್ ಪುನಃ ಪ್ರಜಾಪ್ರಭುತ್ವವನ್ನು ತರುವ ಉದ್ದೇಶ ಹೊಂದಿ ಪ್ರತಿಸರ್ಕಾರ ಸ್ಥಾಪಿಸುವ ಸ್ಥಿತಿಯಲ್ಲಿದ್ದರು. ಇಂತಹ ವೇಳೆಯಲ್ಲಿ  ತನ್ನ ಕೆಂಪು ಸೈನ್ಯವನ್ನು ಬಳಸಿ ಎಲ್ಲಾ ಪ್ರತಿಸ್ಪರ್ಧಿಗಳನ್ನು ಹತ್ತಿಕ್ಕಿದನು. ಮುಂದೆ ರಷ್ಯಾಗೆ ಒಂದು ರಾಜ್ಯಾಂಗವನ್ನು  ರಚಿಸಿಕೊಟ್ಟನು. ಇಂಗ್ಲೆಂಡ್ ಮತ್ತು ಫ್ರಾನ್ಸ್ ಗಳೊಂದಿಗೆ ವಾಣಿಜ್ಯ ಒಪ್ಪಂದಗಳನ್ನು ಮಾಡಿಕೊಂಡನು. ತನ್ನ ಹೊಸ ಆರ್ಥಿಕ ನೀತಿಯನ್ನು ಜಾರಿಗೊಳಿಸಿ ರಷ್ಯಾವನ್ನು ಪ್ರಬಲ  ರಾಷ್ಟ್ರವಾಗಿ ರೂಪಿಸಿದನು‌. ಲೆನಿನ್ ಇಲ್ಲದಿದ್ದರೆ ರಷ್ಯಾ ಕ್ರಾಂತಿಯೇ ಆಗುತ್ತಿರಲಿಲ್ಲ ಎಂಬುದು ಹಲವರ ವಾದ. ಆತನು  ಕ್ರಾಂತಿಯ ಬೇಡಿಕೆಗಳಾದ ಶಾಂತಿ, ರೊಟ್ಟಿ ಮತ್ತು ಭೂಮಿಗಳನ್ನು ಈಡೇರಿಸಿದನು. ಹೀಗಾಗಿ ಲೆನಿನ್ ನನ್ನು ರಷ್ಯಾದ ಕ್ರಾಂತಿಯ ಜನಕ ಮತ್ತು ಬೋಲ್ಷೆವಿಕ್ ಜನಕ ಎಂದು ಕರೆಯಲಾಗುತ್ತದೆ. ಅವನ  ನೆನಪಿಗೆ ಪೆಟ್ರೋಗ್ರಾಡಿಗೆ ಲೆನಿನ್ ಗ್ರಾಡ್  ಎಂಬ ಹೆಸರಿಡಲಾಗಿದೆ.

No comments:

Post a Comment