Monday, 2 April 2018

ಗಾದೆಮಾತು : ನಾಳೆ ಎಂದವನ ಮನೆ ಹಾಳು

ನಾಳೆ ಎಂದವನ ಮನೆ ಹಾಳು:-
             ಕೆಲವರಿಗೆ ಯಾವುದೇ ಕೆಲಸ ಕೊಟ್ಟರು ಅದನ್ನು ಅಂದೆ ಮಾಡದೆ ನಾಳೆಗೆ ಮುಂದೂಡುವ ಪ್ರವೃತ್ತಿಯನ್ನು ಬೆಳೆಸಿಕೊಂಡಿರುತ್ತಾರೆ. ಹೀಗಾಗಿ ಅಂದಿನ ಕೆಲಸವನ್ನು ಮಾಡದೆ, ನಿನ್ನೆಯ ಕೆಲಸವನ್ನೂ ಮಾಡದೆ ಆಲಸಿಗಳಾಗುತ್ತಾರೆ. ನಾಳೆ ಎನ್ನುವುದು ಭವಿಷ್ಯ. ನಾಳೆ ಏನಾಗುವುದು ಎಂದು ಯಾರಿಗೂ ತಿಳಿದಿಲ್ಲ. ಯಾರೂ ಹೇಳಲು ಸಾಧ್ಯವೂ ಇಲ್ಲ. ಅದೂ ಅಲ್ಲದ ಇಂದಿನ ಈ ಜಂಜಾಟದ ಯುಗದಲ್ಲಿ ನಾಳೆ ನಾವು ಬದುಕಿರುತ್ತೇವೆಯೋ ಇಲ್ಲವೋ ಎಂಬುದೂ ಗೊತ್ತಿಲ್ಲ. ನಿನ್ನೆಯು ಮುಗಿದು ಹೋದ ದಿನ. ನಾಳೆ ಎನ್ನುವುದು ಗೊತ್ತಿರದ ದಿನ. ಆದರೆ ಇಂದು ಎಂಬುದು ನಮ್ಮ ಕೈಯಲ್ಲಿದೆ. ಆದುದರಿಂದ ನಾವು ಯಾವುದೇ ಕೆಲಸವನ್ನು ಮಾಡಬೇಕಾದರೂ ನಾಳೆಗೆ ಮಾಡಿದರಾಯಿತು ಎಂದು ಎಂದಿಗೂ ಮುಂದೂಡಬಾರದು. ಇಂದಿನ ಕೆಲಸವನ್ನು ಇಂದೇ ಮಾಡಬೇಕು, ನಾಳೆ ಮಾಡಿದರಾಯಿತು ಎಂದು ಕೈಕಟ್ಟಿ ಕುಳಿತರೆ ನಾಳೆ ಅದು ಮಾಡಲು ಸಾಧ್ಯವಾಗುತ್ತದೆ ಎಂದು ಹೇಳಲು ಬರುವುದಿಲ್ಲ. ಇಂದು ಮಾಡಬೇಕಾದ ಕೆಲಸವನ್ನು ಮಾಡದೇ ಬಿಟ್ಟರೆ ನಾಳೆಯ ಕೆಲಸದ ಜೊತೆಗೆ ಅದು ಸೇರಿಕೊಂಡು ಕೆಲಸದ ಪ್ರಮಾಣ ಹೆಚ್ಚುತ್ತದೆ. ಇದರಿಂದ ಯಾವುದನ್ನೂ ಮಾಡದೇ ಯಾವ ಕೆಲಸವು ಸರಿಯಾಗಿ ಆಗುವುದಿಲ್ಲ. ಆದ್ದರಿಂದ ಇಂದಿನ ಕೆಲಸವನ್ನು ಇಂದೆ ಮಾಡಬೇಕು. ಆದ್ದರಿಂದಲೇ ಹೇಳುವುದು "ನಾಳೆ ಎಂದವನ ಮನೆ ಹಾಳು" ಎಂದು.

2 comments: