Sunday, 22 April 2018

ಸಂಪರ್ಕ ಸೇವೆಗಳು

೧. ಅಂಚೆ ಸೇವೆ:-
           ಭಾರತದಲ್ಲಿ ೧೮೩೭ ರಲ್ಲಿ ಅಂಚೆ ಸೇವೆಯನ್ನು ಸಾರ್ವಜನಿಕರಿಗೆ ಕಲ್ಪಿಸಿದ ನಂತರ ದಿನ ಕಳೆದಂತೆ ಮೈಸೂರು ಪ್ರಾಂತ್ಯದಲ್ಲೂ ಈ ಸೇವೆಯನ್ನು ಸಾಕಷ್ಟು ಜಾರಿಗೊಳಿಸಲಾಯಿತು. ೧೮೮೬-೮೭ ರಷ್ಟರಲ್ಲಿ ಮೈಸೂರು ರಾಜ್ಯದಲ್ಲಿ ಸುಮಾರು ೨೩೧ ಅಂಚೆ ಕಚೇರಿಗಳಿದ್ದವು. ಕರ್ನಾಟಕ ಅಂಚೆ ಮತ್ತು ತಂತಿ ವೃತ್ತದ ಮುಖ್ಯ ಕಚೇರಿಯು ಬೆಂಗಳೂರಿನಲ್ಲಿ ಏಪ್ರಿಲ್ ೧,೧೯೬೦ ರಂದು ಪ್ರಾರಂಭವಾಯಿತು. ಅತ್ಯುತ್ತಮ ನಿರ್ವಹಣೆಯ ದೃಷ್ಟಿಯಿಂದ ಈ ವೃತ್ತವನ್ನು ೩ ವಲಯಗಳನ್ನಾಗಿ ವಿಭಜಿಸಲಾಗಿದೆ. ಅವೆಂದರೆ- ಬೆಂಗಳೂರು, ದಕ್ಷಿಣ ಕರ್ನಾಟಕ, ಮತ್ತು ಉತ್ತರ ಕರ್ನಾಟಕ ವಲಯಗಳು. ಇತ್ತೀಚಿನ ದಿನಗಳಲ್ಲಿ ರಾಜ್ಯದ ಮೂಲೆ ಮೂಲೆಗಳಿಗೂ ಅಂಚೆ ಮತ್ತು ತಂತಿ ಸೌಲಭ್ಯ ಕಲ್ಪಿಸಲಾಗಿದೆ.

೨. ದೂರಸಂಪರ್ಕ:-
              ಭಾರತದಲ್ಲಿ ೧೮೫೧ ರಲ್ಲಿ ದೂರವಾಣಿ ಸೌಲಭ್ಯವನ್ನು ಜಾರಿಗೊಳಿಸಲಾಯಿತು. ಕರ್ನಾಟಕದಲ್ಲಿ ೧೮೮೧-೮೨ ರಲ್ಲಿ ಬೆಂಗಳೂರು ದಂಡು ಪ್ರದೇಶಕ್ಕೆ ದೂರವಾಣಿ ಸೌಲಭ್ಯ ಲಭಿಸಿತು. ೧೮೯೬ರಲ್ಲಿ ೧೧ ಮೈಲಿ ದೂರದ ಹೆಸರಘಟ್ಟ-ಬಾಣಾವರ ತಾತ್ಕಾಲಿಕ ದೂರವಾಣಿ ಮಾರ್ಗವನ್ನು ನಿರ್ಮಿಸಲಾಯಿತು. ೧೯೧೮ ರಷ್ಟತ್ತಿಗೆ ಹಳೆ ಮೈಸೂರು ಪ್ರಾಂತ್ಯದಲ್ಲಿ ಸುಮಾರು ೫೩೩ ಮೈಲಿ ಉದ್ದದ ದೂರವಾಣಿ ಮಾರ್ಗ ಲಭ್ಯವಿತ್ತು. ಇಂದಿನ ದಿನಗಳಲ್ಲಿ ರಾಜ್ಯದ ಮೂಲೆ ಮೂಲೆಗಳಲ್ಲಿ ದೂರವಾಣಿ ಸೇವೆಯನ್ನು ಕಲ್ಪಿಸಲಾಗಿದೆ. ಈ ಕಾರ್ಯದಲ್ಲಿ ಖಾಸಗಿ ಸಂಸ್ಥೆಗಳು ಸಹ  ಕೈ ಗೂಡಿಸಿವೆ.ರಾಜ್ಯದ ಹಲವಾರು ನಗರ-ಪಟ್ಟಣಗಳು ಇಂಟರ್ನೆಟ್ ಜಾಲಕ್ಕೆ ಸೇರಿವೆ.
             

No comments:

Post a Comment