ಹಿಂದೂ ಧರ್ಮಶಾಸ್ತ್ರಗಳ ಪ್ರಕಾರ ಹಿಂದೂ ಧರ್ಮಶಾಸ್ತ್ರಕಾರರು ಎಂಟು ಬಗೆಯ ವಿವಾಹಗಳನ್ನು ಉಲ್ಲೇಖಿಸಲಾಗಿದೆ. ಅವುಗಳು ಕೆಳಗಿನಂತಿವೆ.
೧.ಬ್ರಹ್ಮ ವಿವಾಹ:-
ತಂದೆ ತಾಯಿಗಳು ಸದೃಢನಾದ, ಕುಲೀನನಾದ ವರನಿಗೆ ತಮ್ಮ ಮಗಳನ್ನು ಧಾರೆಯೆರೆದು ಕೊಡುವುದೇ ಬ್ರಹ್ಮ ವಿವಾಹವಾಗಿದೆ. ಇದಕ್ಕೆ'ಕನ್ಯಾದಾನ'ವೆಂತಲೂ ಕರೆಯಲಾಗುತ್ತದೆ. ಈ ಪದ್ಧತಿ ಕೆಲವೊಂದು ಮಾರ್ಪಾಡುಗಳೊಂದಿಗೆ ಇಂದಿಗೂ ಉಳಿದುಕೊಂಡಿದೆ.
೨. ದೈವ ವಿವಾಹ:-
ತಂದೆತಾಯಿಗಳು ಯಜ್ಞ ಕಾರ್ಯಗಳಲ್ಲಿ ಭಾಗವಹಿಸುವ ಸುಯೋಗ್ಯವಾದ ಋಷಿಕುಮಾರನಿಗೆ ಮಗಳನ್ನು ಧಾರೆಎರೆದು ಕೊಡುವುದೇ ದೈವ ವಿವಾಹವಾಗಿದೆ.
೩.ಆರ್ಶ ವಿವಾಹ:-
ವರನು ಕನ್ಯಯ ತಂದೆ ತಾಯಿಗಳಿಗೆ ಎರಡು ಜೊತೆ ಗೋವುಗಳನ್ನು ಕನ್ಯಾಶುಲ್ಕ ರೂಪದಲ್ಲಿ ಕೊಟ್ಟು ಕನ್ಯೆಯನ್ನು ವಿವಾಹವಾಗುವುದೇ ಅರ್ಶ ವಿವಾಹ.
೪.ಪ್ರಜಾಪತ್ಯ ವಿವಾಹ:-
ತಂದೆತಾಯಿಗಳು ಸುಯೋಗ್ಯ ವರನಿಗೆ ಮಗಳನ್ನು ವಿವಾಹ ಮಾಡಿ ಕೊಟ್ಟು "ನೀವಿಬ್ಬರೂ ಸೇರಿ ನಿಮ್ಮ ಧರ್ಮವನ್ನು ಆಚರಿಸಿರಿ" ಎಂದು ಹರಿಸುವುದೇ ಪ್ರಜಾಪತ್ಯ ವಿವಾಹವಾಗಿದೆ.
೫.ಅಸುರ ವಿವಾಹ:-
ವರನು ಕನ್ಯೆಯ ತಂದೆ ತಾಯಿ ಅಥವಾ ಬಾಲಕರಿಗೆ ಶಕ್ಯಾನುಸಾರವಾಗಿ "ಕನ್ಯಾಶುಲ್ಕ "ಕೊಟ್ಟು ಅವರ ಮಗಳನ್ನು ವಿವಾಹವಾಗುದಕ್ಕೆ ಅಸುರ ವಿವಾಹವೆಂದು ಕರೆಯಲಾಗುತ್ತದೆ.
೬.ಗಾಂಧರ್ವ ವಿವಾಹ:-
ವಧೂವರರು ಪರಸ್ಪರ ಒಬ್ಬರನ್ನೊಬ್ಬರು ಮೆಚ್ಚಿಕೊಂಡು ವಿವಾಹವಾಗುದಕ್ಕೆ" ಗಾಂಧರ್ವ ವಿವಾಹ " ಅಥವಾ "ಪ್ರೇಮ ವಿವಾಹ" ಎನ್ನಲಾಗುತ್ತದೆ.
೭.ರಾಕ್ಷಸ ವಿವಾಹ:-
ವರನು ಕನ್ಯೆಯನ್ನು ಬಲಾತ್ಕಾರವಾಗಿ ಕಳೆದುಕೊಂಡು ಹೋಗಿ ವಿವಾಹವಾಗುವುದು "ರಾಕ್ಷಸ ವಿವಾಹ" ವಾಗಿದೆ.
೮.ಪೈಶಾಚ ವಿವಾಹ:-
ಕನ್ಯೆ ನಿದ್ರಿಸುತ್ತಿರುವಾಗ, ಸ್ಮೃತಿ ತಪ್ಪಿರುವಾಗ ಮೈಮರೆತು ಕುಳಿತಿರುವಾಗ, ಮಾನಸಿಕ ಅಸ್ವಸ್ಥಳಾದಾಗ ಮೋಸದಿಂದ ಅವಳನ್ನು ಸಂಭೋಗಿಸಿ ನಂತರ ವಿವಾಹವಾಗುವುದೇ ಪೈಶಾಚ ವಿವಾಹವಾಗಿದೆ.
ಮೇಲಿನ ಎಂಟು ವಿವಾಹ ಪದ್ಧತಿಗಳಲ್ಲಿ ಬ್ರಹ್ಮ ವಿವಾಹ ಶ್ರೇಷ್ಠ ವಾಗಿದೆ. ಗಾಂಧರ್ವ, ರಾಕ್ಷಸ, ಅಸುರ ಮತ್ತು ಪೈಶಾಚ ವಿವಾಹಗಳು ಕಾನೂನು ಬಾಹಿರವಾಗಿವೆ ಎಂದು ದಾರ್ಶನಿಕರು ವಿವರಿಸಿದ್ದಾರೆ, ಗಾಂಧರ್ವ ಮತ್ತು ರಾಕ್ಷಸ ವಿವಾಹಗಳನ್ನು ಕ್ಷತ್ರಿಯರಿಗೆ ಹಾಗೂ ಬ್ರಹ್ಮ, ದೈವ, ಆರ್ಶ ಮತ್ತು ಪ್ರಜಾಪತ್ಯ ವಿವಾಹಗಳು ಬ್ರಾಹ್ಮಣರಿಗೆ ಯೋಗ್ಯವೆಂದು ಮನುಸ್ಮೃತಿ ಮತ್ತು ಮಹಾಭಾರತದಲ್ಲಿ ಉಲ್ಲೇಖಿಸಲಾಗಿದೆ.
No comments:
Post a Comment