Sunday, 22 April 2018

ಕರ್ನಾಟಕ ಮಣ್ಣು

         ಕರ್ನಾಟಕದಲ್ಲಿ ವಿವಿಧ ರೀತಿಯ ಮಣ್ಣು ಬೇರೆ ಬೇರೆ ಪ್ರದೇಶಗಳಲ್ಲಿ ಕಂಡು ಬರುತ್ತದೆ. ಇಲ್ಲಿಯ ಮಣ್ಣನ್ನು ೪ ಗುಂಪುಗಳನ್ನಾಗಿ ವಿಂಗಡಿಸಬಹುದು.

೧.ಕೆಂಪು ಮಣ್ಣು:-
                 ಈ ರೀತಿಯ ಮಣ್ಣು ಜೋಳ, ನೆಲಗಡಲೆ,ರಾಗಿ ಮತ್ತು ಇನ್ನಿತರ ಎಣ್ಣೆ ಕಾಳುಗಳನ್ನು ಬೆಳೆಯಲು ಸೂಕ್ತವಾಗಿದೆ.

೨. ಕಪ್ಪು ಮಣ್ಣು:-
   ‌‌‌‌‌‌‌‌‌              ಈ ಮಣ್ಣನ್ನು‌ ಕಪ್ಪು ಹತ್ತಿ ಮಣ್ಣು ಎಂದು ಸಹ ಕರೆಯಲಾಗುತ್ತದೆ. ಇದು ಹತ್ತಿ, ಗೋಧಿ, ಜೋಳ, ತಂಬಾಕು, ನೆಲಕಡಲೆ, ಮುಂತಾದ ಬೆಳೆಗಳನ್ನು ಬೆಳೆಯಲು ಸೂಕ್ತವಾಗಿದೆ. ಕಪ್ಪು ಮಣ್ಣು ಮುಖ್ಯವಾಗಿ ರಾಜ್ಯದ ಉತ್ತರದ ಬಯಲು ಪ್ರದೇಶಗಳಾದ  ಬೆಳಗಾವಿ, ಬಿಜಾಪುರ, ಬಳ್ಳಾರಿ, ಗುಲ್ಬರ್ಗ ಮತ್ತು ರಾಯಚೂರು ಮೊದಲಾದ ಜಿಲ್ಲೆಗಳಲ್ಲಿ ಕಂಡು ಬರುತ್ತದೆ.

೩.ಜಂಬುಮಣ್ಣು:-
                 ಈ ಜಂಬುಮಣ್ಣು ಕೆಲವು ಬಗೆಯ ಶಿಲೆಗಳ ಸವೆತದಿಂದ ಉಂಟಾಗುತ್ತದೆ. ಈ ಮಣ್ಣು ಅಡಿಕೆ, ತೆಂಗು, ಭತ್ತ, ಬಾಳೆ,ಕಾಫಿ, ರಬ್ಬರ್ ಮುಂತಾದ ಬೆಳೆಗಳಿಗೆ ಸೂಕ್ತವಾಗಿದೆ. ಈ ಬಗೆಯ ಮಣ್ಣು ರಾಜ್ಯದ ಚಿಕ್ಕಮಗಳೂರು, ಶಿವಮೊಗ್ಗ, ಕೊಡಗು, ದಕ್ಷಿಣ ಕನ್ನಡ, ಬೆಳಗಾವಿ‌ ಮತ್ತು ಧಾರವಾಡ ಮೊದಲಾದ ಜಿಲ್ಲೆಗಳಲ್ಲಿ ಕಂಡು ಬರುತ್ತದೆ.

೪. ಮೆಕ್ಕಲು ಮಣ್ಣು:-
               ಈ ಮಣ್ಣು ಕರಾವಳಿ ಪ್ರದೇಶ ಮತ್ತು ನದಿ ಮುಖಜ ಭೂಮಿಗಳಲ್ಲಿ ಕಂಡು ಬರುತ್ತದೆ. ಇದು ಕಬ್ಬು, ಭತ್ತ, ಬಾಳೆ ಮತ್ತು ತೆಂಗು ಬೆಳೆಗೆ ಸೂಕ್ತವಾಗಿದೆ.

No comments:

Post a Comment