ಇಂದು ದೇಶದಲ್ಲಿ ಅನೇಕ ರಾಷ್ಟ್ರ ಮಟ್ಟದ ಕಾರ್ಮಿಕ ಸಂಘಗಳಿವೆ. ಅವುಗಳ ವಿವರಣೆ ಕೆಳಕಂಡಂತಿದೆ.
೧. ಇಂಡಿಯನ್ ನ್ಯಾಷನಲ್ ಟ್ರೇಡ್ ಯೂನಿಯನ್ ಕಾಂಗ್ರೆಸ್ (INTUC);-
೧೯೪೭ ರಲ್ಲಿ ಭಾರತದ ರಾಷ್ಟ್ರೀಯ ಕಾಂಗ್ರೆಸ್ ನಿಂದ ಸ್ಥಾಪನೆಯಾದ ಈ ಸಂಘ ಇಂದು ದೇಶದಲ್ಲೇ ಎರಡನೇ ದೊಡ್ಡದಾದ ಕಾರ್ಮಿಕ ಸಂಘವಾಗಿದೆ. ಈ ಸಂಘಟನೆಗೆ ಸೇರಿರುವ ಕಾರ್ಮಿಕ ಸಂಘಗಳ ಸಂಖ್ಯೆ ಸುಮಾರು ೪,೪೨೮ ಇದ್ದು ಒಟ್ಟು ಸದಸ್ಯ ಬಲ ಸುಮಾರು ೨೬.೯ ಲಕ್ಷದಷ್ಟಿದೆ. ಇದು ಈಗ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಹತೋಟಿಯಲ್ಲಿದೆ.
೨. ಆಲ್ ಇಂಡಿಯಾ ಟ್ರೇಡ್ ಯೂನಿಯನ್ ಕಾಂಗ್ರೆಸ್ (AITUC):-
೧೯೨೦ರಲ್ಲಿ ಸ್ಥಾಪನೆಯಾದ ಈ ಕಾರ್ಮಿಕ ಸಂಘ ದೇಶದ ಅತ್ಯಂತ ಹಳೆಯದಾದ ಸಂಘವಾಗಿದೆ. ಸುಮಾರು ೪೩೦೦ ಸಂಘಗಳನ್ನು ಒಳಗೊಂಡಿರುವ ಈ ಸಂಘ ಸುಮಾರು ೯.೨೪ ಲಕ್ಷ ಸದಸ್ಯ ಬಲ ಹೊಂದಿದೆ. ಇದು ಕಮ್ಯೂನಿಸ್ಟ್ ಪಕ್ಷ (CPI) ದ ನಿಯಂತ್ರಣಕ್ಕೊಳಪಟ್ಟಿದೆ.
೩. ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ (CITU):-
೧೯೭೦ರಲ್ಲಿ ಅಸ್ತಿತ್ವಕ್ಕೆ ಬಂದ ಈ ಸಂಘದಲ್ಲಿ ಸುಮಾರು ೩,೦೧೧ ಕಾರ್ಮಿಕ ಸಂಘಗಳು ಮತ್ತು ಸುಮಾರು ೧೮ ಲಕ್ಷ ಸದಸ್ಯರಿದ್ದಾರೆ. ಇದು ಸಿ. ಪಿ.ಐ.(ಎಂ) ಪಕ್ಷದ ನಿಯಂತ್ರಣದಲ್ಲಿದೆ.
೪. ಹಿಂದ್ ಮಜದೂರ್ ಸಭಾ(HMS):-
ಇದು ೧೯೪೮ರಲ್ಲಿ ಸ್ಥಾಪಿಸಲ್ಪಟ್ಟಿತು. ಇದಕ್ಕೆ ಸೇರಿದ ಕಾರ್ಮಿಕ ಸಂಘಗಳ ಸಂಖ್ಯೆ ೧೨೪೮ ಇದ್ದು ಸದಸ್ಯರ ಸಂಖ್ಯೆ ೧೪.೮ ಲಕ್ಷದಷ್ಟಿದೆ. ಈ ಸಂಘ ಪ್ರಜಾ ಸೋಷಿಯಲಿಸ್ಟ್ ಪಕ್ಷದ ಹತೋಟಿಗೆ ಒಳಪಟ್ಟಿದೆ.
೫. ಭಾರತೀಯ ಮಜದೂರ್ ಸಂಘ (BMS):-
ಇದು ೧೯೫೪ ರಲ್ಲಿ ಸ್ಥಾಪಿಸಲ್ಪಟ್ಟಿತು. ಈ ಸಂಘಕ್ಕೆ ೨೮೭೧ ಕಾರ್ಮಿಕ ಸಂಘಗಳು ಸೇರಲ್ಪಟ್ಟಿದ್ದು ಸದಸ್ಯರ ಸಂಖ್ಯೆ ಸುಮಾರು ೩೧ ಲಕ್ಷದಷ್ಟಿದೆ. ಈ ಸಂಘ ಭಾರತೀಯ ಜನತಾ ಪಕ್ಷದ ಅಧೀನದಲ್ಲಿದೆ.ಇದು ದೇಶದಲ್ಲೇ ಅತ್ಯಂತ ದೊಡ್ಡದಾದ ಕಾರ್ಮಿಕ ಸಂಘವಾಗಿದೆ.
೬.ಯುನೈಟೆಡ್ ಟ್ರೇಡ್ ಯೂನಿಯನ್ ಕಾಂಗ್ರೆಸ್ (UTUC):-
ಇದು ೧೯೪೯ರಲ್ಲಿ ಸ್ಥಾಪನೆಯಾಯಿತು. ಈ ಸಂಘಕ್ಕೆ ೧೯೮೯ ಕಾರ್ಮಿಕ ಸಂಘಗಳು ಸೇರಿದ್ದು ಸುಮಾರು ೧೩.೪೩ ಲಕ್ಷ ಕಾರ್ಮಿಕರ ಸದಸ್ಯ ಬಲ ಹೊಂದಿದೆ. ಇದು ಕ್ರಾಂತಿಕಾರಿ ಸಮಾಜವಾದಿ ಪಕ್ಷದ ಹತೋಟಿಯಲ್ಲಿದೆ.
No comments:
Post a Comment