Saturday, 21 April 2018

ಅಮಲಿನ ಬೆಳೆಗಳು

,ಹೊಗೆಸೊಪ್ಪು:-
           ಹೊಗೆಸೊಪ್ಪಿನಲ್ಲಿ ವರ್ಜೀನಿಯಾ ಹೊಗೆಸೊಪ್ಪು, ಅಗಿಯುವ ಹೊಗೆಸೊಪ್ಪು ಮತ್ತು ಬೀಡಿ ಹೊಗೆಸೊಪ್ಪು ಎಂಬ ಮೂರು ಗುಂಪುಗಳಿವೆ. ವರ್ಜೀನಿಯಾ ಹೊಗೆಸೊಪ್ಪು ರಾಜ್ಯದಲ್ಲಿ ಸುಮಾರು ೧೨,೦೦೦ ಹೆಕ್ಟೇರನ್ನು ಆಕ್ರಮಿಸಿದೆ. ಇದು ಶಿವಮೊಗ್ಗ, ಹಾಸನ,ಕೋಲಾರ, ಚಿತ್ರದುರ್ಗ ಮತ್ತು ಮಂಡ್ಯ ಜಿಲ್ಲೆಗಳಲ್ಲಿ ಕೇಂದ್ರಿಕೃತವಾಗಿದೆ. ಈ ಪ್ರದೇಶ ಗಳಿಂದ ವರ್ಷಕ್ಕೆ ಸುಮಾರು ೬,೦೦೦ ಟನ್ನುಗಳಷ್ಟು ಹೊಗೆಸೊಪ್ಪು ಉತ್ಪಾದನೆಯಾಗುತ್ತದೆ. ವರ್ಜೀನಿಯಾ ಗೋಲ್ಡ್ ,ಕುಟ್ ಸೇಗ-೫೧,ಎನ್. ಸಿ. ೯೫,ಎಚ್. ಆರ್ -೬೨-೭, ಇವು ಮುಖ್ಯವಾದ ತಳಿಗಳು. ಅಗಿಯುವ ಹೊಗೆಸೊಪ್ಪು ೧,೨೦೦ ಹೆಕ್ಟೇರುಗಳನ್ನು ಆಕ್ರಮಿಸಿದ್ದು ಇದರಿಂದ ಬರುವ ವಾರ್ಷಿಕ ಉತ್ಪತ್ತಿ ಸುಮಾರು ೨,೦೦೦ ಟನ್ನುಗಳು. ಈ ಬೆಳೆಯನ್ನು ಹೆಚ್ಚಾಗಿ ಚಿತ್ರದುರ್ಗ, ತುಮಕೂರು, ಮೈಸೂರು ಮತ್ತು ಬೆಳಗಾವಿ ಜಿಲ್ಲೆಗಳಲ್ಲಿ ಕಾಣಬಹುದು. ಅಗಿಯುವ ಹೊಗೆಸೊಪ್ಪಿನಲ್ಲಿ ಬಾಳೆ ಪಟ್ಟಿ, ನಾಗರಹೆಡೆ, ಆನೆಕಿವಿ, ಕತ್ತಾಳೆಪಟ್ಟೆ, ಗುತ್ತಿಗಿಡ ಮತ್ತು ಜೋವಾರಿ ಮುಖ್ಯವಾದ ತಳಿಗಳು. ಬೀಡಿ ಹೊಗೆಸೊಪ್ಪಿನ ಬೆಳೆಯನ್ನು ರಾಜ್ಯದಲ್ಲಿ ಸುಮಾರು ೩೦,೦೦೦ ಹೆಕ್ಟೇರುಗಳಲ್ಲಿ ಬೆಳೆಯಲಾಗುತ್ತದೆ.

No comments:

Post a Comment