Monday, 28 May 2018

ವೀರ ವಿ. ಡಿ. ಸಾವರ್ಕರ್

#ವೀರ_ಸಾವರ್ಕರ್_ಜನ್ಮದಿನದ_ಶುಭಾಶಯಗಳು#.
               ಸ್ಪೂರ್ತಿಯ ಕಿಡಿ ಸ್ವಾತಂತ್ರ್ಯ ವಿರ ಸಾವರ್ಕರ್ ರವರಿಗೆ ಅನಂತಾನಂತ ಕೋಟಿ ಪ್ರಣಾಮಗಳು...
ಸಾವರ್ಕರ್ ಎಂದರೆ ಕಿಚ್ಚು, ಸಾವರ್ಕರ್ ಎಂದರೆ ಆತ್ಮಾಭಿಮಾನ, ಸಾವರ್ಕರ್ ಎಂದರೆ ದೇಶಭಕ್ತಿ, ಸಾವರ್ಕರ್ ಎಂದರೆ ಸಮರ್ಪಣೆ. ಆದರ್ಶ, ನಿಷ್ಠೆ, ಸಾಹಸ, ಪರಾಕ್ರಮ, ಸಂಯಮ, ಸಹನಶೀಲತೆ, ಆತ್ಮವಿಶ್ವಾಸ, ಛಲ, ಜಾಣ್ಮೆ, ವಿವೇಕ, ನೇತೃತ್ವ, ಆತ್ಮಾರ್ಪಣೆ ಅವೆಲ್ಲದರ ಸಂಗಮವೇ ವಿನಾಯಕ ದಾಮೋದರ ಸಾವರ್ಕರ್.
ವಿನಾಯಕರು ಮೇ 28, 1883 ರಲ್ಲಿ ಜನಿಸಿದರು. ಸಂಸ್ಕೃತ ವಿದ್ವಾಂಸರ ಪೀಳಿಗೆಯಲ್ಲಿ ಹುಟ್ಟಿದ ಸಾವರ್ಕರರಿಗೆ ಇತಿಹಾಸ, ರಾಜನೀತಿ, ಸಾಹಿತ್ಯ, ಭಾರತಿಯ ಸಂಸ್ಕೃತಿಗಳಲ್ಲಿ ಅತ್ಯಂತ ಆಸಕ್ತಿ. ಅವರು ಬರೆದ ಪುಸ್ತಕ “ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ - 1857” ಅಸಂಖ್ಯಾತ ಸ್ವಾತಂತ್ರ್ಯ ಯೋಧರಿಗೆ ಸ್ಪೂರ್ತಿದಾಯಕವಾಯಿತು.
   ವೀರ ಸಾವರ್ಕರ್(ವಿನಾಯಕ ದಾಮೋದರ ಸಾವರ್ಕರ್) ತಮ್ಮ ಸಂಪೂರ್ಣ ಜೀವನವನ್ನೇ ಭಾರತದ ಸ್ವಾತಂತ್ರ್ಯಕ್ಕಾಗಿ ಮುಡಿಪಾಗಿಟ್ಟ ಮಹಾನ್ ವಾಗ್ಮಿ, ವಿವಿಧ ವಿಷಯಗಳ ಬಗ್ಗೆ ನಿರರ್ಗಳವಾಗಿ ಬರೆಯಬಲ್ಲ ಲೇಖಕ, ಇತಿಹಾಸಕಾರ, ಕವಿ, ತತ್ವಶಾಸ್ತ್ರಜ್ಞ, ಮತ್ತು ಸಮಾಜಸೇವಕ. ಅವರನ್ನು ಕೆಲವರು ಭಾರತದ ಸ್ವಾತಂತ್ರ್ಯ ಸಂಗ್ರಾಮದ ಅತಿ ದೊಡ್ಡ ಕ್ರಾಂತಿಕಾರಿ ಎಂದು ಪರಿಗಣಿಸುವರು.ಚಾಣಕ್ಯನೀತಿಯವರಾಗಿಯೂ ಭಾವಿಸುತ್ತಾರೆ. ಸ್ವಾತಂತ್ರ್ಯ ಅಂದೋಲನದ ಇತಿಹಾಸದ ಅತ್ಯಂತ ವಿವಾದಾತ್ಮಕ ವ್ಯಕ್ತಿಗಳಲ್ಲಿ ಸಾವರ್ಕರ್ ಪ್ರಮುಖರು.
ಅಂಡಮಾನಿನ ಕಾರಾಗೃಹದ ಕರಿನೀರಿನ ಶಿಕ್ಷೆಗೆ ಒಳಗಾದರು ಅವರ ವಿರುದ್ಧದ ಮೊಕದ್ದಮೆಯಲ್ಲಿ , ಆಗಿನ್ನೂ 27ರ ತರುಣನಾಗಿದ್ದ ಅವರಿಗೆ, ಕುಪ್ರಸಿದ್ಧ ಅಂಡಮಾನಿನ ಜೈಲಿನಲ್ಲಿ 50 ವರ್ಷಗಳ ಕಾರಾಗೃಹ ಶಿಕ್ಷೆ ವಿಧಿಸಲಾಯಿತು. ನಾಲ್ಕು ಜುಲೈ, 1911ರಂದು, ಅವರನ್ನು ಅಂಡಮಾನಿಗೆ ಸಾಗಿಸಲಾಯಿತು.
24/12/1910 ರಿಂದ 23/12/1960, ವಿದೇಶಕ್ಕೆ ತೆರಳಿ ಕ್ರಾಂತಿ ಕಾರ್ಯ ಸಂಘಟಿಸಿದ, ದೇಶಭಕ್ತಿ ಪ್ರದರ್ಶಿಸಿದ ಮಹಾಪರಾಧಕ್ಕಾಗಿ ವಿನಾಯಕ ದಾಮೋದರ ಸಾವರ್ಕರ್ ಅವರಿಗೆ 50 ವರ್ಷಗಳ ಕರಿನೀರಿನ ಶಿಕ್ಷೆ. ಅವತ್ತಿನ ಮಟ್ಟಿಗೆ ಕರಿನೀರಿನ ಶಿಕ್ಷೆ ಎಂದರೆ ಅದು ಸಾವಿನ ಮನೆ ಅಂತಲೇ ಅರ್ಥ. ಹೊರಗಿನ ಯಾರ ಸಂಪರ್ಕವೂ ಇಲ್ಲದ, ದೇಶದಿಂದ ಬಹುದೂರದ ಅಂಡಮಾನಿನ ಆ ಕ್ರೂರ ಜೈಲಿನಿಂದ ಮರಳಿ ಬರುವ ನಂಬಿಕೆಯೇ ಇರಲಿಲ್ಲ. ಅದೂ 50 ವರ್ಷಗಳು !. ಎದೆ ಬಿರಿಯುವ ಶಿಕ್ಷೆ ಕೇಳಿದಾಗಲೂ ಅವರು ವಿಚಲಿತರಾಗಲಿಲ್ಲ. ಈ ಸಮುದ್ರ ಈಜಿದ ಸಾಹಸಿಯನ್ನು ಅಣಕಿಸಲೆಂದೇ ಅಲ್ಲಿನ ಜೈಲರ್ 'ಹೆದರಬೇಡಿ ಬ್ಯಾರಿಸ್ಟರ್ ಸಾಹೇಬರೇ, 1960 ರಲ್ಲಿ ನಮ್ಮ ಪರಮ ಕೃಪಾಳು ಸರ್ಕಾರ ಖಂಡಿತಾ ನಿಮ್ಮನ್ನು ಬಿಡುಗಡೆ ಮಾಡುತ್ತದೆ' ಎಂದಾಗ ಸಾವರ್ಕರ್ ಜೋರಾಗಿ ನಕ್ಕು '50 ವರ್ಷಗಳ ಕಾಲ ನಿಮ್ಮ ಸರ್ಕಾರ ಇದ್ದರೆ ತಾನೇ ?' ಎಂದು ಮರುಪ್ರಶ್ನಿಸಿ ಗತ್ತಿನಿಂದಲೇ ನಡೆದಿದ್ದರು.
       “ಬ್ರಿಟಿಷ್ ಅಧಿಕಾರಿಗಳ ಬಗೆಗೇ ಆಗಲಿ, ಅವರ ಕಾನೂನುಗಳ ಬಗೆಗೆ ಆಗಲಿ, ಗೊಣಗುವುದರಲ್ಲಿ ಅರ್ಥವಿಲ್ಲ. ಅದಕ್ಕೆ ಕೊನೆಯೂ ಇಲ್ಲ. ನಮ್ಮ ಚಳುವಳಿ ಯಾವುದೇ ನಿರ್ದಿಷ್ಟ ಕಾನೂನನ್ನು ವಿರೋಧಿಸುವುದಕ್ಕಷ್ಟೇ ಸೀಮಿತವಾಗದೆ, ಆ ಕಾನೂನುಗಳನ್ನು ರಚಿಸಿ, ಜಾರಿಗೆ ತರುವ ಹಕ್ಕಿಗಾಗಿ ಇರಬೇಕು. ಅರ್ಥಾತ್, ಸಂಪೂರ್ಣ ರಾಜಕೀಯ ಸ್ವಾತಂತ್ರ್ಯವೇ ನಮ್ಮ ಗುರಿಯಾಗಬೇಕು” ಎಂದು ಸಾವರ್ಕರರು ಹೇಳಿದ್ದರು.
ಮಾನಸಿಕವಾಗಿ ತಮ್ಮನ್ನು ಮಾರಿಕೊಳ್ಳುತ್ತಿದ್ದಭಾರತೀಯನ್ನು ಬಡಿದೆಬ್ಬಿಸಿ ಕ್ರಾಂತಿಕಾರ್ಯಕ್ಕೆ ಮುನ್ನುಡಿ ಬರೆದರು. ಅವರ ಕಾರ್ಯದಿಂದ ಪ್ರೇರೇಪಣೆಗೊಂಡ 'ಮದನಲಾಲ್ ಧೀಂಗ್ರ' ದಾಸ್ಯ ರಕ್ಕಸನಎದೆ ಮೆಟ್ಟಿ ವಿದೇಶಿ ನೆಲದ ಮೊದಲ ಬಲಿದಾನಿಯಾಗಿ ಇತಿಹಾಸ ಸೃಷ್ಟಿಸಿದ.
1857 ರ ಸಂಗ್ರಾಮವನ್ನು 'ಸಿಪಾಯಿದಂಗೆ' ಎಂದೇ ಕರೆದಿದ್ದ ಬ್ರಿಟಿಷರಿಗೆ ಸವಾಲಾಗಿ ನಿಂತು ಅದು 'ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ' ಎಂದು ನಿರೂಪಿಸುವ ಪುಸ್ತಕ ಬರೆದ ಸಾವರ್ಕರ್ ಆ ಮೂಲಕ ಭಗತ್ ಸಿಂಗ್, ಆಜಾದ್, ನೇತಾಜಿಯಂತಹ ಈ ದೇಶದ ಮಹಾನ್ ನಾಯಕರುಗಳಿಗೆ ಪ್ರೇರಣೆ ನೀಡಿದರು.
ನೇತಾಜಿ ಸುಭಾಷ್ ಚಂದ್ರ ಬೋಸ್‌ರಿಗೆ ಪ್ರೇರಣೆ ನೀಡಿ ವಿದೇಶಕ್ಕೆ ತೆರಳಿ ಸಂಗ್ರಾಮದ ಮೂಲಕ ದಾಸ್ಯ ವಿಮೋಚನೆಯ ಮಾರ್ಗದರ್ಶನ ನೀಡಿದವರು ಸಾವರ್ಕರ್. 
     ದೇಶಭಕ್ತಿಯ ಅಪರಾಧಕ್ಕಾಗಿ ಭಾರತೀಯ ಮಹಾವಿದ್ಯಾಲಯವೊಂದರ ವಸತಿಗೃಹದಿಂದ ಹೊರದೂಡಲ್ಪಟ್ಟ ಮೊಟ್ಟಮೊದಲ ವಿದ್ಯಾರ್ಥಿ ಸಾವರ್ಕರ್. ಭಾರತದಲ್ಲಿ ವಿದೇಶಿ ಬಟ್ಟೆಗಳಿಗೆ ಬೆಂಕಿಯಿಟ್ಟು ಹೋಳಿ ಆಚರಿಸಿದ ಮೊಟ್ಟಮೊದಲ ಸ್ವದೇಶಾಭಿಮಾನಿ ಸಾವರ್ಕರ್. ದಾಸ್ಯರಕ್ಕಸನ ಎದೆ ಮೆಟ್ಟಲು ಮುಂದಾಗಿದ್ದಕ್ಕೆ ತಾನು ಗಳಿಸಿದ್ದ ಬಿ.ಎ. ಪದವಿಯನ್ನೇ ಕಳೆದುಕೊಂಡ ಮೊಟ್ಟಮೊದಲ ಭಾರತೀಯ ಪದವೀಧರ, ಕ್ರಾಂತಿಕಾರಿ ಚಟುವಟಿಕೆಗಳನ್ನು ನಡೆಸಿದ್ದಕ್ಕಾಗಿ ಬ್ರಿಟಿಷರಿಂದ 'ಬ್ಯಾರಿಸ್ಟರ್ ಪದವಿ'ಯನ್ನೇ ನಿರಾಕರಿಸಲ್ಪಟ್ಟ ಮೊಟ್ಟ ಮೊದಲ ಬ್ಯಾರಿಸ್ಟರ್, ಪ್ರಕಟಣೆಗೆ ಮೊದಲೇ ಎರಡು ರಾಷ್ಟ್ರಗಳಲ್ಲಿ ನಿಷೇಧಿಸಲ್ಪಟ್ಟ ಗ್ರಂಥ ರಚಿಸಿದ ಜಗತ್ತಿನ ಮೊಟ್ಟಮೊದಲ ಲೇಖಕ ಸಾವರ್ಕರ್. 'ಸಂಪೂರ್ಣ ಸ್ವಾತಂತ್ರ್ಯವೇ ಭಾರತದ ಧ್ಯೇಯ' ಎಂದು ಘೋಷಿಸಿದ ಮೊಟ್ಟಮೊದಲ ರಾಜಕೀಯ ಮುಂದಾಳು, ಜಗತ್ತಿನ ರಾಜಕೀಯ ಇತಿಹಾಸದಲ್ಲೇ ಹೇಗ್ ಅಂತರರಾಷ್ಟ್ರೀಯ ನ್ಯಾಯಾಲಯದೆದುರು ತನ್ನ ಬಗ್ಗೆ ಮೊಕದ್ದಮೆ ನಡೆಯುವಂತೆ ಮಾಡಿದ ಮೊದಲ ರಾಜಕೀಯ ಖೈದಿ ಸಾವರ್ಕರ್.
ವಿಶ್ವದ ಚರಿತ್ರೆಯಲ್ಲಿ 50 ವರ್ಷಗಳ ಕರಿನೀರಿನ ಶಿಕ್ಷೆಗೆ ಗುರಿಯಾದ ಮೊಟ್ಟ ಮೊದಲ ಸ್ವಾತಂತ್ರ್ಯ ಸೇನಾನಿ ಸಾವರ್ಕರ್. ಅಹಿಂಸೆಯ ಹೆಸರಲ್ಲಿ ಬ್ರಿಟಿಷರ ಕಾಲಿಗೆ ಬಿದ್ದು ಬಿದ್ದು ಆತ್ಮಾಭಿಮಾನವನ್ನೇ ಕಳೆದುಕೊಂಡಿದ್ದವರ ಮಧ್ಯೆ ಇಂಗ್ಲೆಂಡಿಗೇ ತೆರಳಿ ಬ್ರಿಟಿಷರ ಎದೆನಡುಗುವಂತೆ ಕ್ರಾಂತಿಕಾರ್ಯ ಸಂಘಟಿಸಿ ನೂರಾರು ತರುಣ ದೇಶಭಕ್ತರ ಪಡೆ ರಚಿಸಿದ ಮೊದಲ ಕ್ರಾಂತಿಕಾರಿ ಸಾವರ್ಕರ್. ಸತತ 11 ಬಾರಿ ಕಠಿಣ ಸೆರೆವಾಸಕ್ಕೆ ಗುರಿಯಾದ ಅದ್ವಿತೀಯ ಸೇನಾನಿ ಸಾವರ್ಕರ್. ದುರಂತವೆಂದರೆ ಸ್ವಾತಂತ್ರ್ಯಬಂದಮೇಲೂ ಭಾರತ ಸರ್ಕಾರದಿಂದಲೇ ಬಂಧನಕ್ಕೆ ಒಳಗಾದ, ಇಲ್ಲಿನ ವ್ಯವಸ್ಥೆಗೆ ನೊಂದು 21 ದಿನಗಳ ಉಪವಾಸದ ಮೂಲಕ ಪ್ರಾಯೋಪವೇಶ ಮಾಡಿ ಆತ್ಮಾರ್ಪಣೆಗೈದ ಮೊದಲ ಚೇತನ ಸಾವರ್ಕರ್.
ಸೂರ್ಯ ಮುಳುಗದ ಸಾಮ್ರಾಜ್ಯಕ್ಕೆ ದಿಟ್ಟ ಸವಾಲಾಗಿ ನಿಂತು ಬೆಳಗಿದ, ರಾಷ್ಟ್ರಕ್ಕಾಗಿ ತಮ್ಮ ಬದುಕನ್ನು, ತಮ್ಮ ಇಡೀ ಕುಟುಂಬವನ್ನು ಸಮರ್ಪಿಸಿದ, ತಮ್ಮ ಹೆಸರು ಕೇಳಿದರೇ ಬ್ರಿಟಿಷರ ಎದೆ ನಡುಗುವಂತೆ ಮಾಡಿದ, ಮತ್ತು ಆ ಕಾರಣಕ್ಕಾಗಿಯೇ ವಿಶ್ವದ ಇತಿಹಾಸದಲ್ಲೇ ಮೊದಲ ಬಾರಿ 50 ವರ್ಷಗಳ ಘೋರ ಕರಿನೀರಿನ ಶಿಕ್ಷೆಗೆ ಒಳಗಾದ ಈ ದೇಶದ ಒಬ್ಬ ಮಹಾನ್ ಕ್ರಾಂತಿಕಾರಿಯನ್ನು, ಅಪ್ರತಿಮ ದೇಶಭಕ್ತನನ್ನು ಸ್ವಾತಂತ್ರ್ಯ ಬಂದ ಕೇವಲ 50 ವರ್ಷಗಳಲ್ಲಿ ಮರೆತುಬಿಟ್ಟೆವೆಂದರೆ ಅದಕ್ಕಿಂತ, ನೋವಿನ ಸಂಗತಿh ಬೇರೇನಿದ್ದೀತು?
   ವೀರ್ ಸಾವರ್ಕರ್(ವಿನಾಯಕ ದಾಮೋದರ ಸಾವರ್ಕರ್) ಹೆಸರು ಅಮರವಾಗಲಿ....
#ವಂದೇ_ಮಾತರಂ.

Wednesday, 23 May 2018

ವಿವಿಧ ಅಗತ್ಯತೆಗಳಿಗಾಗಿ ಬಳಸುವ ವಿದ್ಯುತ್ ವಿಭವ

* ವಿದ್ಯುತ್ ಉತ್ಪಾದನಾ ಘಟಕ -೪,೦೦,೦೦೦ ವೋಲ್ಟ್
*ಬೃಹತ್ ಕೈಗಾರಿಕೆಗಳು -೩೩,೦೦೦ ವೋಲ್ಟ್
*ದೊಡ್ಡ ಕಾರ್ಖಾನೆಗಳು-೧೧,೦೦೦ ವೋಲ್ಟ್
*ಸಣ್ಣ ಕಾರ್ಖಾನೆಗಳು-೨೩೦-೪೧೫ ವೋಲ್ಟ್
*ಮನೆಗಳು-೨೩೦ ವೋಲ್ಟ್ 

ಹಸಿರುಮನೆ ಪರಿಣಾಮ

         ಬೀಜಗಳು ಮೊಳಕೆಯೊಡೆಯಲು ಬೆಚ್ಚಗಿನ ವಾತಾವರಣ ಅಗತ್ಯವಿದೆ.  ಶೀತ ದೇಶದಲ್ಲಿ ಬೀಜಗಳು ಸುಲಭವಾಗಿ ಮೊಳಕೆಯೊಡೆಯುವುದಿಲ್ಲ. ಬೆಚ್ಚಗಿನ ವಾತಾವರಣವನ್ನು ಒದಗಿಸಲು ಪ್ಲಾಸ್ಟಿಕ್ ಅಥವಾ ಗಾಜಿನ ಮೇಲ್ಚಾವಣಿ ಮತ್ತು ಗೋಡೆಗಳಿಗಿರುವ ಮನೆಗಳನ್ನು ಕಟ್ಟುತ್ತಾರೆ. ಅವುಗಳನ್ನು ಹಸಿರುಮನೆಗಳು ಎನ್ನುವರು. ಇಲ್ಲಿ ಪ್ಲಾಸ್ಟಿಕ್ ಅಥವಾ ಗಾಜು ಉಷ್ಣವನ್ನು ಹೊರಗೆ ಹೋಗಲು ಬಿಡದೆ ಹಿಡಿದಿಟ್ಟುಕೊಳ್ಳುತ್ತದೆ. ಇದು ಹಸಿರು ಮನೆಯನ್ನು ಬೆಚ್ಚಗಿಡುತ್ತದೆ ಮತ್ತು ಬೀಜಗಳು ಮೊಳಕೆಯೊಡೆಯಲು ನೆರವಾಗುತ್ತದೆ.
      ‌‌‌    ಕಾರ್ಬನ್ ಡೈಆಕ್ಸೈಡ್, ಮೀಥೇನ್‌ ಮತ್ತು ನೈಟ್ರೋಜನ್ ಆಕ್ಸೈಡ್ ಗಳಂತಹ ವಾಯು ಮಾಲಿನ್ಯಕಾರಕಗಳು ನೀರಾವಿಯೊಂದಿಗೆ ಉಷ್ಣವು ವಾತಾವರಣದಿಂದ ಹೊರಹೋಗಲು ಬಿಡದೆ ವಾತಾವರಣದ ತಾಪವನ್ನು ಹೆಚ್ಚಿಸಿದಾಗ ಇದೇ ರೀತಿಯ ಪರಿಣಾಮ ಉಂಟಾಗುತ್ತದೆ. ಇದನ್ನು ಹಸಿರುಮನೆ ಪರಿಣಾಮ ಎನ್ನುವರು. ಈ ಪರಿಣಾಮಕ್ಕೆ ಕಾರಣವಾಗುವ ಅನಿಲಗಳನ್ನು ಹಸಿರು ಮನೆ ಅನಿಲಗಳು ( green house gases) ಎನ್ನುವರು.
ಒಂದು ವೇಳೆ ಹಸಿರುಮನೆ ಪರಿಣಾಮವು ಇಲ್ಲದೆ ಹೋಗಿದ್ದರೆ ಭೂಮಿಯ ತಾಪ ಘನೀಭವನ  ಬಿಂದು (freezing point) ವಿಗಿಂತಲೂ ಕಡಿಮೆ ಇರುತಿದ್ದು, ಜೀವಿಗಳ ಅಸ್ತಿತ್ವವು ಸಾಧ್ಯವಾಗುತ್ತಿರಲಿಲ್ಲ. ಆದ್ದರಿಂದ, ಭೂಮಿಯ ವಾತಾವರಣವನ್ನು ಬೆಚ್ಚಗಿರಿಸಲು ಮತ್ತು ಭೂಮಿಯ ಉಷ್ಣವನ್ನು ಸಮತೋಲನಗೊಳಿಸಲು ಹಸಿರುಮನೆ ಪರಿಣಾಮ ಅವಶ್ಯಕವಾಗಿದೆ. ಅದಾಗ್ಯೂ ಹಸಿರುಮನೆ ಅನಿಲಗಳ ಮಟ್ಟ ಅತಿಯಾದರೆ ಹಾನಿಕರ.

Monday, 21 May 2018

ನಿಮಗಿದು ಗೊತ್ತೆ?

* ನಮ್ಮ ದೇಹದಲ್ಲಿ ೨೦೬  ಮೂಳೆಗಳಿವೆ. ೬೦೦ಕ್ಕೂ ಹೆಚ್ಚಿನ ಕೀಲುಗಳಿವೆ.

*ದೇಹದಲ್ಲಿರುವ ಸಣ್ಣ ಕರುಳು ೨೧ ಅಡಿ ಉದ್ದವಿರುತ್ತದೆ. ಅದು ಸುರುಳಿಯಾಗಿ ಸುತ್ತಿಕೊಂಡಿರುತ್ತದೆ.

*ನಮ್ಮ ಹೃದಯ ನಿಮಿಷಕ್ಕೆ ಎಪ್ಪತ್ತು ಸಲ ಬಡಿಯುತ್ತದೆ. ದಿನಕ್ಕೆ ಒಂದು ಲಕ್ಷ ಸಲ ಬಡಿದುಕೊಳ್ಳುತ್ತದೆ.

*ಶ್ವಾಸಕೋಶಗಳಲ್ಲಿ ಸುಮಾರು ೩ ಲೀಟರ್ ಗಳಷ್ಟು ಗಾಳಿ ತುಂಬಬಹುದು.

* ಮಾನವನ ದೇಹದಲ್ಲಿ ಸುಮಾರು ೫.೫ ಲೀಟರ್ ಗಳಷ್ಟು ರಕ್ತವಿರುತ್ತದೆ.

* ಒಮ್ಮೆ ರಕ್ತದಾನ ಮಾಡಿದ ನಂತರ ರಕ್ತ ಮತ್ತೆ ದೇಹದಲ್ಲಿ ಉತ್ಪತ್ತಿಯಾಗುತ್ತದೆ. ಇದಕ್ಕೆ ೪-೫ ವಾರಗಳು ಬೇಕು

Saturday, 19 May 2018

ನಿಮಗಿದು ಗೊತ್ತೆ?

* ೨೦೦೭ರಲ್ಲಿ ಬ್ರಿಟನ್ನಿನ ರೈತನೊಬ್ಬ ೧೯ ಅಡಿ ಉದ್ದದ ಕ್ಯಾರೆಟ್ ಬೆಳೆದ ದಾಖಲೆ ಇದೆ.

*ಹುಲ್ಲಿನ ಜಾತಿಗೆ ಸೇರಿದ ಸಸ್ಯವೊಂದರ ಬೇರಿನ ಉದ್ದದ ದಾಖಲೆ ೬೦೦ಕೆ.ಎಮ್. ಇದು ಬೆಂಗಳೂರಿನಿಂದ ಕಲಬುರಗಿಯ ನಡುವಿನ ಅಂತರದಷ್ಟು.

* ಆಲದ ಮರ ತನ್ನ ಬಿಳಿಲು ಬೇರಿನ ಸಹಾಯದಿಂದ ಸುಮಾರು ೫ ಎಕರೆಗೂ ಹೆಚ್ಚು ವಿಸ್ತಾರವಾಗಿ ಬೆಳೆದ ದಾಖಲೆಗಳಿವೆ‌.
ಉದಾಹರಣೆಗೆ: ಬೆಂಗಳೂರಿನಲ್ಲಿರುವ ದೊಡ್ಡ ಆಲದ ಮರ.

*ಮರಗಳ ಮೇಲೆ ಬೆಳೆಯುವ ಕೆಲವು ಸಸ್ಯಗಳ ( ಅಪ್ಪು ಸಸ್ಯಗಳು) ಬೇರುಗಳು ಹಸಿರಾಗಿದ್ದು ಗಾಳಿಗೆ ತೆರೆದುಕೊಂಡಿರುತ್ತವೆ‌. ಇವು ಗಾಳಿಯಲ್ಲಿನ ನೀರಾವಿಯನ್ನು ಹೀರಿಕೊಳ್ಳುತ್ತದೆ.

*ಮಳೆ ಕಡಿಮೆ ಬೀಳುವ ಪ್ರದೇಶಗಳಲ್ಲಿ ಬೆಳೆಯುವ ಸಸ್ಯಗಳಲ್ಲಿ ಹಲವು ಸಸ್ಯಗಳ ಬೇರುಗಳು ನೀರನ್ನು ಸಂಗ್ರಹಿಸಿಟ್ಟುಕೊಳ್ಳುತ್ತವೆ ಮತ್ತು ಸಸ್ಯಕ್ಕೆ ಬೇಕಾದಾಗ ಒದಗಿಸುತ್ತವೆ. ಕೆಲವು ಜನಾಂಗಗಳು ಬೇರಿನಲ್ಲಿರುವ ನೀರನ್ನು ಕುಡಿಯಲು ಕೂಡ ಉಪಯೋಗಿಸುವುದುಂಟು. ಸುಮಾರು ೭೦ ಕೆಜಿ ಯಷ್ಟು ನೀರನ್ನು ಸಂಗ್ರಹಿಸಿಟ್ಟ ಬೇರುಗಳ ದಾಖಲೆಯೂ ಇದೆ‌‌‌.

Wednesday, 16 May 2018

ನಿಮಗಿದು ಗೊತ್ತೆ?

* ಮೊತ್ತಮೊದಲ ಬಟ್ಟೆಗಳು ಚರ್ಮ, ತುಪ್ಪಳ, ಎಲೆ, ಹುಲ್ಲುಗಳಿಂದ ಮಾಡಲ್ಪಟ್ಟಿದ್ದವು.

* ಸಸ್ಯನಾರಿನಿಂದ ರೇಷ್ಮೆ, ನೈಲಾನ್ ವರೆಗೂ ಅನೇಕ ವಿಧದ ನೂಲುಗಳಿವೆ‌. ಇವುಗಳಿಂದ ನಾನಾ ವಿಧದ ಬಟ್ಟೆಗಳು ತಯಾರಾಗುತ್ತವೆ. ಈ ಬಟ್ಟೆಗಳನ್ನು ಸಸ್ಯಗಳಿಂದ ಮತ್ತು ರಾಸಾಯನಿಕಗಳಿಂದ ತಯಾರಿಸಲಾದ ಬಣ್ಣ ಬಳಸಿ ಅಂದಗೊಳಿಸಲಾಗುತ್ತದೆ. ಮಾನವರ ಸೃಜನಶೀಲತೆಗೆ ಇದು ಒಂದು ಉದಾಹರಣೆ.

*ಕರ್ನಾಟಕವೆ ಭಾರತದ ಅತ್ಯಂತ ಹೆಚ್ಚು ರೇಷ್ಮೆ ಉತ್ಪಾದಿಸುವ ರಾಜ್ಯ. ಭಾರತದಲ್ಲಿ ಉತ್ಪನ್ನವಾಗುವ ರೇಷ್ಮೆಗಳ ಶೇ.೭೦ ಭಾಗ ಕರ್ನಾಟಕ ರಾಜ್ಯದಿಂದ ಬರುತ್ತದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ, ರಾಮನಗರ ಜಿಲ್ಲೆ ಹಾಗೂ ಮೈಸೂರು ಜಿಲ್ಲೆಗಳಲ್ಲಿ ಹೆಚ್ಚಿನ ರೇಷ್ಮೆ ಉತ್ಪನ್ನವಾಗುತ್ತದೆ .

* ಒಂದು ಬಗೆಯ ಕೀಟಗಳ ಸ್ರಾವವೇ ರೇಷ್ಮೆ. ಹೀಗೆ  ಸ್ರಾವವನ್ನು  ಸ್ರವಿಸುವ ಕೀಟಗಳೇ ರೇಷ್ಮೆ ಹುಳುಗಳು.

*ಬಾಗಲಕೋಟೆ ಜಿಲ್ಲೆಯಲ್ಲಿರುವ ಇಳಕಲ್ ಎಂಬ ಊರಿನಲ್ಲಿ  ತಯಾರಾಗುವ ಸೀರೆಗಳು ಜಗತ್ಪ್ರಸಿದ್ಧ.

* ಕರ್ನಾಟಕದಲ್ಲಿ ರಾಜ್ಯದ ಸಾಂಪ್ರದಾಯಿಕ ಉಡುಗೆ
    ಪುರುಷರ ಉಡುಗೆ: ಪಂಚೆ, ಶರ್ಟ್ ,ಅಂಗವಸ್ತ್ರ
    ಸ್ತ್ರೀಯರ ಉಡುಗೆ: ಸೀರೆ, ಕುಪ್ಪಸ ಅಥವಾ ಲಂಗ,
    ದಾವನಿ, ಕುಪ್ಪಸ.

ನಿಮಗಿದು ಗೊತ್ತೆ?

* ಬಿದಿರು, ಹುಲ್ಲಿನ ಜಾತಿಗೆ ಸೇರಿದ ಸಸ್ಯ.

* ಕೆಲವು ಜಾತಿಯ ಸಸ್ಯಗಳ ಎಲೆಗಳಿಂದಲೇ ಸಸಿಗಳು ಹುಟ್ಟುತ್ತವೆ.
ಉದಾಹರಣೆಗೆ, ಬ್ರಯೋಫಿಲಂ

*ಕರಾವಳಿಯಲ್ಲಿ ಬೆಳೆಯುವ ಮ್ಯಾಂಗ್ರೋವ್(ಕಾಂಡ್ಲ) ಸಸ್ಯಗಳ ಬೀಜಗಳು ಸಸ್ಯಗಳಲ್ಲೇ ಮೊಳಕೆಯಾಗಿ ಸಸಿಗಳು ನೆಲಕ್ಕೆ ಉದುರಿ ಬೆಳೆಯುತ್ತವೆ.

*ಹೂಜಿಗಿಡ, ಕೋಬ್ರಲಿಲ್ಲಿ ,ಡ್ರಾಸೆರಾ ಇತ್ಯಾದಿ ಸಸ್ಯಗಳು ಕೀಟಗಳನ್ನು ತಿನ್ನುತ್ತವೆ. ಇವನ್ನು ಕೀಟಹಾರಿ ಸಸ್ಯಗಳೆನ್ನುವರು.

*ಕೊಕೋ-ಡಿ-ಮೆರ್ ಎಂಬ ಸಸ್ಯದ ಬೀಜವು ಸಸ್ಯ ಪ್ರಪಂಚದಲ್ಲೇ ಅತಿ ದೊಡ್ಡದು. ಇದರ ತೂಕ ಸುಮಾರು ೨೮ ಕೆ.ಜಿ.

*ಕರ್ನಾಟಕದಲ್ಲಿ ೫ ರಾಷ್ಟ್ರೀಯ ಉದ್ಯಾನವನಗಳು , ೫ ಪಕ್ಷಿಧಾಮಗಳು ಮತ್ತು ೧೬ ವನ್ಯಧಾಮಗಳು ಇವೆ.

Tuesday, 15 May 2018

ಕಂಡು ಹಿಡಿದವರು.

-:ಕಂಡು ಹಿಡಿದವರು:-

*ರೈಟ್‌ ಸಹೋದರರು -ವಿಮಾನ

*ಗ್ರಹಾಂ ಬೆಲ್ -ದೂರವಾಣಿ

*ಚಾರ್ಲ್ಸ್ ಬ್ಯಾಬೇಜ್- ಗಣಕಯಂತ್ರ

*ಜಾನ್ ಬೈಯರ್ಡ್- ದೂರದರ್ಶನ

*ಮಾರ್ಕೋನಿ - ರೇಡಿಯೋ

Monday, 14 May 2018

ನಿಮಗಿದು ಗೊತ್ತೆ?

* ಚಾರ್ಲ್ಸ್ ಬ್ಯಾಬೇಜ್ ಎನ್ನುವ ಬ್ರಿಟಿಷ್ ನ ಗಣಿತ ವಿಜ್ಞಾನಿಯು ೧೮೩೭ ರಲ್ಲಿ ಮೊದಲನೆಯ ಗಣಕಯಂತ್ರವನ್ನು ತಯಾರಿಸಿದರು ಎಂಬುದಾಗಿ ಹೇಳುತ್ತಾರೆ. ಆದ್ದರಿಂದ ಅನೇಕರು ಇವರನ್ನು ಗಣಕಯಂತ್ರದ ಎಂದೇ ಕರೆಯುತ್ತಾರೆ.

*ಲೋಹಗಳು ಗಟ್ಟಿಯಾಗಿರುತ್ತವೆ, ಹೊಳಪಾಗಿರುತ್ತವೆ‌ ಅವಕ್ಕೆ ನಾನಾ ರೀತಿಯ ಆಕಾರ ಕೊಡಬಹುದು. ಚೆನ್ನಾಗಿ ಸ್ವಚ್ಛಗೊಳಿಸಬಹುದು. ಲೋಹಗಳ ಉಪಯೋಗವಿಲ್ಲದ ಕೆಲಸವೇ ಇಲ್ಲ ಎಂದರೆ ಉತ್ಪ್ರೇಕ್ಷೆಯಾಗಲಾರದು.

* ಅಮೆರಿಕಾದ ಲಿಬರ್ಟಿ ಪ್ರತಿಮೆಯನ್ನು ಸುಮಾರು ೩,೫೦,೦೦೦ ಕೆ‌. ಜಿ. ತಾಮ್ರ ಉಪಯೋಗಿಸಿ ಮಾಡಲಾಗಿದೆ.

*ಮಣ್ಣಿನ ಮಡಕೆಗಳಲ್ಲಿ ಅಡುಗೆ ಮಾಡುವ ಅಭ್ಯಾಸ ಕಡಿಮೆಯಾಗಿದೆ. ಆದರೆ ಮಡಕೆ ತಯಾರಿಕೆಯಲ್ಲಿನ ಸೃಜನಶೀಲತೆಯಿಂದ ಹೂದಾನಿಗಳು, ಹೂಜಿಗಳು ಇತ್ಯಾದಿ ಅಲಂಕಾರಿಕ ವಸ್ತುಗಳು ಮನೆಯನ್ನು ಸಿಂಗರಿಸಿವೆ‌. ಇವನ್ನು ತಯಾರಿಸುವ ವಿಧಾನಗಳಲ್ಲೂ ಸುಧಾರಣೆಗಳಾಗಿವೆ.

Saturday, 12 May 2018

ನಿಮಗಿದು ಗೊತ್ತೆ?

*ಸೂರ್ಯನ ಕಿರಣಗಳು ದೇಹದಲ್ಲಿ "ಡಿ" ಜೀವಸತ್ವವನ್ನು ಉತ್ಪಾದಿಸಲು ಸಹಾಯ ಮಾಡುತ್ತದೆ.

*ಅಯೋಡಿನ್ ಲವಣದ ಕೊರತೆಯಿಂದ ಬರುವ ರೋಗವೇ ಗಳಗಂಡ

* ನಾವು ಬಳಸುವ ಅತಿ ಮುಖ್ಯ ಆಹಾರ ಧಾನ್ಯಗಳೆಂದರೆ ಅಕ್ಕಿ, ಗೋಧಿ, ಜೋಳ, ರಾಗಿ.

* ಸೂಕ್ಷ್ಮಾಣು ಜೀವಿಗಳು ಆಹಾರದಲ್ಲಿ ಸೇರಿದಾಗ ಆಹಾರ ಕೆಡುತ್ತದೆ ಅಥವಾ ಹಳಸುತ್ತದೆ‌. ಈ ಜೀವಿಗಳು ನಂಜಿನ ಪದಾರ್ಥಗಳನ್ನು ಉತ್ಪಾದಿಸುತ್ತದೆ. ಹೀಗಾಗಿ ಇಂತಹ ಆಹಾರವನ್ನು ಸೇವಿಸುವದರಿಂದ ಜಠರ ಹಾಗೂ ಕರುಳಿಗೆ ಸಂಬಂಧಿಸಿದ ರೋಗಗಳು ಬರುತ್ತವೆ. ಕೆಲವೊಮ್ಮೆ ರೋಗಗಳು ತೀವ್ರಗೊಂಡು ಸಾವು ಸಂಭವಿಸಬಹುದು.

*ಒಣಗಿಸುವುದು, ಉಪ್ಪು ಹಾಕುವುದು, ಹೊಗೆ ಹಾಕುವುದು, ತಂಪುಗೊಳಿಸುವುದು, ಕುದಿಸುವುದು ಇತ್ಯಾದಿ ವಿಧಾನಗಳಿಂದ ಮನೆಯಲ್ಲಿ ಆಹಾರವನ್ನು ಸಂರಕ್ಷಿಸುತ್ತಾರೆ‌. ಮಾರುಕಟ್ಟೆಯಲ್ಲಿ ಹಲವು ವಿಧಾನಗಳಿಂದ ಆಹಾರವನ್ನು ಸಂಸ್ಕರಿಸಿ, ಸಂರಕ್ಷಿಸಿ ಮಾರುತ್ತಾರೆ.
ಉದಾ: ತಂಪು ಪಾನೀಯಗಳು, ಬ್ರೆಡ್,
ಹಣ್ಣುಗಳ ರಸ, ಜ್ಯಾಮ್ ಇತ್ಯಾದಿ.

Thursday, 10 May 2018

ನಿಮಗಿದು ಗೊತ್ತೆ?

* ಒಂದು ಜೇನುನೊಣವು  ತನ್ನ ಒಂದು ಸಂಗ್ರಹಣಾ ಸಂಚಾರದಲ್ಲಿ ೫೦ ರಿಂದ ೧೦೦ ಹೂಗಳಿಗೆ ಭೇಟಿ ಕೊಡುತ್ತದೆ.

* ಜೇನುತುಪ್ಪ ಒಂದೇ ಮಾನವರು ತಿನ್ನುವ, ಕೀಟಗಳಿಂದ ಉತ್ಪಾದಿತ ಆಹಾರ.

* ಇರುವೆಗಳು, ಗೆದ್ದಲು ಹುಳಗಳು ನೆಲವನ್ನು ಬಗೆದು ತೋಡುವುದರಿಂದ ಮಣ್ಣಿನಲ್ಲಿ ಗಾಳಿಯಾಡಿ ಸಸ್ಯಗಳು ಸೊಂಪಾಗಿ ಬೆಳೆಯುತ್ತವೆ.

* ಜೇನುಗೂಡು, ಪಕ್ಷಿಗಳ ಗೂಡು, ಇರುವೆ ಗೂಡು, ಗೆದ್ದಲು ಹುಳುಗಳ ಹುತ್ತ, ಜೇಡರ ಬಲೆ ಮುಂತಾದವು ಪ್ರಾಣಿ ಜಗತ್ತಿನಲ್ಲಿ ಕಾಣಬರುವ ಅದ್ಭುತ ನಿರ್ಮಾಣಗಳು.

* ಬಿಸಿಲಿನಿಂದ ತನ್ನನ್ನು ರಕ್ಷಿಸಿಕೊಳ್ಳಲು ಬೆನ್ನ ಮೇಲೆ ಎಲೆ ಹೊತ್ತು ತಿರುಗುವ ಇರುವೆಯನ್ನು ಛತ್ರಿ ಇರುವೆ ಎನ್ನುವರು.

Wednesday, 9 May 2018

ವಿಶ್ವಸಂಸ್ಥೆಯ ಮಹಾ ಪ್ರಧಾನ ಕಾರ್ಯದರ್ಶಿಗಳು

ಹೆಸರು             ಕಾಲಾವಧಿ                ದೇಶ

ಟಿಗ್ವಿಲೀ            ೧೯೪೫-೧೯೫೨          ನಾರ್ವೆ

ಡಾಗ್ ಹ್ಯಾಮರ್  ೧೯೫೩-೧೯೬೧.     ಸ್ವೀಡನ್
ಜೋಲ್ಡ್

ಯು ಥಾಂಟ್    ೧೯೬೨-೧೯೭೧.         ಬರ್ಮಾ

ಡಾ.ಕರ್ಟ್        ೧೯೭೨-೧೯೮೧.        ಆಸ್ಟ್ರಿಯಾ
ವಾಲ್ಡ್ ಹೀಂ

ಪೆರೆಜ್ ಡಿ.ಕ್ಯೂಲರ್ ೧೯೮೨-೧೯೯೧    ಪೆರು

ಡಾ. ಬುಟ್ರೋಸ್      ೧೯೯೨-೧೯೯೬   ಈಜಿಪ್ಟ್
ಘಾಲಿ

ಕೋಫಿ ಅನ್ನಾನ್    ೧೯೯೭-೨೦೦೭       ಘಾನ್

ಬಾನ್-ಕಿ-ಮೂನ್    ೨೦೦೭.             ಕೊರಿಯಾ

Tuesday, 8 May 2018

ಅಮೇರಿಗೊ ವೆಸ್ ಪುಸಿ

        ಅಮೇರಿಗೊ ವೆಸ್ಪುಸಿ ಇಟಲಿಯ ಫ್ಲಾರೆನ್ಸ್ ನಗರದವನು. ಇವನು ಕೊಲಂಬಸ್ ಕಂಡು ಹಿಡಿದ ಹೊಸ ನಾಡನ್ನು ಅಮೆರಿಕಾ ಎಂದು ಕರೆದನು. ಈತ ದಕ್ಷಿಣ ಅಮೆರಿಕಾದ ಪೂರ್ವ ಕರಾವಳಿ, ಓರಿನೋಕೋನದಿ,ಪ್ಲೇಟ್ ನದಿ ಮತ್ತು ಮೊರಾಕಿಬೋ ಸರೋವರದ ಪ್ರದೇಶದವರೆಗಿನ ನಾಡನ್ನು ಅನ್ವೇಷಿಸಿದನು. ಅಮೆರಿಕಾ ಭೂಗೋಳವನ್ನು ಪೂರ್ಣ ಇವನೇ ಪರಿಚಯಿಸಿದ್ದರಿಂದ ಆ ಹೊಸ ನಾಡನ್ನು ಅವನ ಹೆಸರಿನಿಂದ ಅಮೆರಿಕಾ ಎಂದು ಕರೆಯಲಾಗಿದೆ.

Monday, 7 May 2018

ಪಂಚಾಯತಿ ರಾಜ್ಯದ ಉದ್ದೇಶಗಳು

೧.ಗ್ರಾಮ ಪಂಚಾಯತಿಯು ಗ್ರಾಮ ವಾಸಿಗಳಿಗೆ ತಮ್ಮ ಸಮಸ್ಯೆಗಳ ಬಗ್ಗೆ ಅರಿವು ಮೂಡಿಸಿ, ಚರ್ಚಿಸಿ ತಾವೇ ಪರಿಹಾರ ಕಂಡುಕೊಳ್ಳಲು ಅವಕಾಶ ನೀಡುತ್ತದೆ.

೨.ಗ್ರಾಮ ಪಂಚಾಯತ ಸ್ವಯಂ ಆಡಳಿತಕ್ಕೆ ಆಸ್ಪದ ನೀಡುತ್ತದೆ.

೩.ಪ್ರಜೆಗಳಿಗೆ ಪೌರತ್ವದ ತರಬೇತಿಯನ್ನು ನೀಡುತ್ತದೆ.

೪.ಗ್ರಾಮೀಣ ಜನರಿಗೆ ಆಡಳಿತದ ಕಲೆ ಹಾಗೂ ತಾವು ಹೊಂದಿರುವ ಹಕ್ಕು ಬಾಧ್ಯತೆಗಳನ್ನು  ತಿಳಿಸಿಕೊಡುತ್ತದೆ.

೫. ಗ್ರಾಮ ಪಂಚಾಯತಿ ಜನರಲ್ಲಿ ಪರಸ್ಪರ ಸಹಕಾರ ಮನೋಭಾವನೆಯನ್ನು ಬೆಳೆಸುತ್ತವೆ.

Sunday, 6 May 2018

ಮುಸ್ಲಿಂ ವಿವಾಹ ವಿಚ್ಛೇದನ ಕಾಯ್ದೆ(೧೯೩೯)

          ೧೯೩೯ರ ಮುಸ್ಲಿಂ ವಿವಾಹ ವಿಚ್ಛೇದನ ಕಾಯ್ದೆಗೆ ಅನುಗುಣವಾಗಿ ಮುಸ್ಲಿಂ ಮಹಿಳೆಯು ಕೆಳಗಿನ ಕಾರಣಗಳಿಗೆ ಅನುಗುಣವಾಗಿ ವಿವಾಹ ವಿಚ್ಛೇದನ ಪಡೆಯಬಹುದಾಗಿದೆ.

೧. ಪತಿಯು ಷಂಡನಾಗಿದ್ದರೆ ಅಥವಾ ಪುರುಷತ್ವ ಕಳೆದುಕೊಂಡಿದ್ದರೆ.

೨.ನಾಲ್ಕು ವರ್ಷಗಳ ಕಾಲ ಗಂಡ ನಾಪತ್ತೆ ಆಗಿದ್ದರೆ.

೩. ಪತಿಯ ಏಳು ವರ್ಷಗಳಿಗಿಂತಲೂ ಹೆಚ್ಚು ಅವಧಿವರೆಗೆ ಜೈಲು ಶಿಕ್ಷೆಗೆ ಒಳಗಾಗಿದ್ದರೆ,

೪.ಗಂಡನು ಕಾರಣವಿಲ್ಲದೆ ಹೆಂಡತಿಯೊಂದಿಗೆ ಮೂರು ವರ್ಷಗಳ ಕಾಲ ಲೈಂಗಿಕ ಸಂಪರ್ಕ ಹೊಂದಿರದಿದ್ದರೆ.

೫. ಗಂಡ ಹುಚ್ಚ ಅಥವಾ ಅಂಗವಿಕಲನಾದರೆ.

೬. ಪತಿಯು ಎರಡು ವರ್ಷಗಳಿಂದ ಹೆಂಡತಿಯ ಪಾಲನೆ-ಪೋಷಣೆ ಮಾಡದಿದ್ದರೆ

೭. ಗಂಡನು ಕ್ರೂರ ವರ್ತನೆಗಳನ್ನು ಹೊಂದಿದ್ದರೆ.

೮. ಗಂಡನು ಎರಡು ವರ್ಷಗಳಿಂದ ವಾಸಿಯಾಗದ ಕಾಯಿಲೆಯಿಂದ ನರಳುತ್ತಿದ್ದರೆ.

೯. ಪೋಷಕರು ೧೫ ವರ್ಷದೊಳಗಾಗಿ ವಿವಾಹ ಮಾಡಿದ್ದರೆ, ಅಂತಹ  ವಿವಾಹ ತನಗೆ ಇಷ್ಟವಿಲ್ಲವೆಂದು ೧೮ ವರ್ಷದೊಳಗೆ ವೈವಾಹಿಕ ಸಂಬಂಧವನ್ನು ನಿರಾಕರಣೆ ಮಾಡುವದಿದ್ದರೆ.
               ಈ ಕಾರಣಗಳಿಂದಾಗಿ ವಿವಾಹ ವಿಚ್ಛೇದನ ಪಡೆಯಬಹುದಾಗಿದೆ.

Friday, 4 May 2018

ಬಂಗಾಳದ ವಿಭಜನೆ

         ೧೯೦೫ರಲ್ಲಿ ವೈಸರಾಯ್ ಆಗಿ ಅಧಿಕಾರ ವಹಿಸಿಕೊಂಡ ಲಾರ್ಡ್ ಕರ್ಜನ್ ಬಂಗಾಳವನ್ನು ಎರಡು ಪ್ರಾಂತ್ಯಗಳಾಗಿ ಇಬ್ಬಾಗ ಮಾಡಿದರು. ಒಡೆದು ಆಳುವುದು ಅವನ ಉದ್ದೇಶವಾಗಿತ್ತು. ಬಂಗಾಳದ ಹಾಗೂ ಇನ್ನಿತರ ಜನರು ಇದನ್ನು ತೀವ್ರವಾಗಿ ವಿರೋಧಿಸಿದರು. ಇದು ಸ್ವದೇಶಿ ಚಳುವಳಿಗೆ ಕಾರಣವಾಯಿತು. ಜನರ ತೀವ್ರ ಪ್ರತಿಭಟನೆಯ ಕಾರಣದಿಂದ ಬಂಗಾಳದ ವಿಭಜನೆಯನ್ನು ೧೯೧೧ರಲ್ಲಿ  ಹಿಂತೆಗೆದುಕೊಳ್ಳಲಾಯಿತು.

Wednesday, 2 May 2018

ಮಧ್ಯಕಾಲೀನ ಭಾರತ

ಮಹಮ್ಮದ್ ಘಜ್ನಿ ( ಕ್ರಿ. .೯೯೭-೧೦೩೦):-
             ಕ್ರಿ‌.ಶ. ೯೯೭ ರಲ್ಲಿ ಮಹಮ್ಮದ್ ಘಜ್ನಿಯು ಸಿಂಹಾಸನವನ್ನೇರಿದನು. ಅವನು ಸಂಪತ್ತನ್ನು ಲೂಟಿ ಮಾಡುವ ಉದ್ದೇಶದಿಂದ ಭಾರತದ ಮೇಲೆ ೧೭ ಬಾರಿ ದಾಳಿ ಮಾಡಿದನು. ಅವನು ಕ್ರಿ. ಪೂ. ೧೦೨೫ ರಲ್ಲಿ ಗುಜರಾತಿನ ಸೋಮನಾಥ ದೇವಾಲಯವನ್ನು ಲೂಟಿ ಮಾಡಿದನು. 'ಶಹನಾಮ'ವನ್ನು ಬರೆದ ಫಿರ್ದೂಸಿಯು ಇವನ ಆಸ್ಥಾನದಲ್ಲಿದ್ದನು. ಘಜ್ನಿಯ ಮಹಮ್ಮದ್ ನು ಮಧ್ಯ ಏಷ್ಯಾದ ವಿದ್ವಾಂಸ ಆಲ್ಬೆರೂನಿಯನ್ನು ಭಾರತಕ್ಕೆ ಕಳುಹಿಸಿದ್ದನು. ಮಹಮ್ಮದ್ ನು ಕ್ರಿ. ಶ. ೧೦೩೦ ರಲ್ಲಿ ಘಜ್ನಿಯಲ್ಲಿ ಮರಣ ಹೊಂದಿದನು.

Tuesday, 1 May 2018

ಖನಿಜಗಳು ಮತ್ತು ಬೆಳೆಗಳ ಪ್ರಮುಖ ರಫ್ತು ರಾಷ್ಟ್ರಗಳು

೧)ಅಲ್ಯೂಮಿನಿಯಂ - ಯು. ಎಸ್. ಎ
೨)ಕಲ್ಲಿದ್ದಲು   - ಯು.ಎಸ್. ಎ
೩)ಕಾಫಿ     - ಬ್ರೆಜಿಲ್
೪)ತಾಮ್ರ- ಯು.ಎಸ್. ಎ
೫)ಚಿನ್ನ -ದಕ್ಷಿಣ ಆಫ್ರಿಕಾ
೬)ಕಬ್ಬಿಣದ ಅದಿರು- ಯು.ಎಸ್. ಎ
೭)ಸೆಣಬು- ಬಾಂಗ್ಲಾದೇಶ
೮)ಮ್ಯಾಂಗನೀಸ್- ರಷ್ಯಾ
೯)ಮೈಕಾ- ಭಾರತ
೧೦)ಭತ್ತ- ಚೀನಾ
೧೧) ರಬ್ಬರ್- ಮಲೇಷಿಯಾ
೧೨)ಬೆಳ್ಳಿ- ಮೆಕ್ಸಿಕೊ
೧೩)ಸಕ್ಕರೆ-ಇಂಡೋನೇಷಿಯ,ಕ್ಯೂಬಾ
೧೪)ಗೋಧಿ- ಅಮೆರಿಕಾ
೧೫) ಉಣ್ಣೆ-ಆಸ್ಟ್ರೇಲಿಯಾ