* ಚಾರ್ಲ್ಸ್ ಬ್ಯಾಬೇಜ್ ಎನ್ನುವ ಬ್ರಿಟಿಷ್ ನ ಗಣಿತ ವಿಜ್ಞಾನಿಯು ೧೮೩೭ ರಲ್ಲಿ ಮೊದಲನೆಯ ಗಣಕಯಂತ್ರವನ್ನು ತಯಾರಿಸಿದರು ಎಂಬುದಾಗಿ ಹೇಳುತ್ತಾರೆ. ಆದ್ದರಿಂದ ಅನೇಕರು ಇವರನ್ನು ಗಣಕಯಂತ್ರದ ಎಂದೇ ಕರೆಯುತ್ತಾರೆ.
*ಲೋಹಗಳು ಗಟ್ಟಿಯಾಗಿರುತ್ತವೆ, ಹೊಳಪಾಗಿರುತ್ತವೆ ಅವಕ್ಕೆ ನಾನಾ ರೀತಿಯ ಆಕಾರ ಕೊಡಬಹುದು. ಚೆನ್ನಾಗಿ ಸ್ವಚ್ಛಗೊಳಿಸಬಹುದು. ಲೋಹಗಳ ಉಪಯೋಗವಿಲ್ಲದ ಕೆಲಸವೇ ಇಲ್ಲ ಎಂದರೆ ಉತ್ಪ್ರೇಕ್ಷೆಯಾಗಲಾರದು.
* ಅಮೆರಿಕಾದ ಲಿಬರ್ಟಿ ಪ್ರತಿಮೆಯನ್ನು ಸುಮಾರು ೩,೫೦,೦೦೦ ಕೆ. ಜಿ. ತಾಮ್ರ ಉಪಯೋಗಿಸಿ ಮಾಡಲಾಗಿದೆ.
*ಮಣ್ಣಿನ ಮಡಕೆಗಳಲ್ಲಿ ಅಡುಗೆ ಮಾಡುವ ಅಭ್ಯಾಸ ಕಡಿಮೆಯಾಗಿದೆ. ಆದರೆ ಮಡಕೆ ತಯಾರಿಕೆಯಲ್ಲಿನ ಸೃಜನಶೀಲತೆಯಿಂದ ಹೂದಾನಿಗಳು, ಹೂಜಿಗಳು ಇತ್ಯಾದಿ ಅಲಂಕಾರಿಕ ವಸ್ತುಗಳು ಮನೆಯನ್ನು ಸಿಂಗರಿಸಿವೆ. ಇವನ್ನು ತಯಾರಿಸುವ ವಿಧಾನಗಳಲ್ಲೂ ಸುಧಾರಣೆಗಳಾಗಿವೆ.
No comments:
Post a Comment