Saturday, 19 May 2018

ನಿಮಗಿದು ಗೊತ್ತೆ?

* ೨೦೦೭ರಲ್ಲಿ ಬ್ರಿಟನ್ನಿನ ರೈತನೊಬ್ಬ ೧೯ ಅಡಿ ಉದ್ದದ ಕ್ಯಾರೆಟ್ ಬೆಳೆದ ದಾಖಲೆ ಇದೆ.

*ಹುಲ್ಲಿನ ಜಾತಿಗೆ ಸೇರಿದ ಸಸ್ಯವೊಂದರ ಬೇರಿನ ಉದ್ದದ ದಾಖಲೆ ೬೦೦ಕೆ.ಎಮ್. ಇದು ಬೆಂಗಳೂರಿನಿಂದ ಕಲಬುರಗಿಯ ನಡುವಿನ ಅಂತರದಷ್ಟು.

* ಆಲದ ಮರ ತನ್ನ ಬಿಳಿಲು ಬೇರಿನ ಸಹಾಯದಿಂದ ಸುಮಾರು ೫ ಎಕರೆಗೂ ಹೆಚ್ಚು ವಿಸ್ತಾರವಾಗಿ ಬೆಳೆದ ದಾಖಲೆಗಳಿವೆ‌.
ಉದಾಹರಣೆಗೆ: ಬೆಂಗಳೂರಿನಲ್ಲಿರುವ ದೊಡ್ಡ ಆಲದ ಮರ.

*ಮರಗಳ ಮೇಲೆ ಬೆಳೆಯುವ ಕೆಲವು ಸಸ್ಯಗಳ ( ಅಪ್ಪು ಸಸ್ಯಗಳು) ಬೇರುಗಳು ಹಸಿರಾಗಿದ್ದು ಗಾಳಿಗೆ ತೆರೆದುಕೊಂಡಿರುತ್ತವೆ‌. ಇವು ಗಾಳಿಯಲ್ಲಿನ ನೀರಾವಿಯನ್ನು ಹೀರಿಕೊಳ್ಳುತ್ತದೆ.

*ಮಳೆ ಕಡಿಮೆ ಬೀಳುವ ಪ್ರದೇಶಗಳಲ್ಲಿ ಬೆಳೆಯುವ ಸಸ್ಯಗಳಲ್ಲಿ ಹಲವು ಸಸ್ಯಗಳ ಬೇರುಗಳು ನೀರನ್ನು ಸಂಗ್ರಹಿಸಿಟ್ಟುಕೊಳ್ಳುತ್ತವೆ ಮತ್ತು ಸಸ್ಯಕ್ಕೆ ಬೇಕಾದಾಗ ಒದಗಿಸುತ್ತವೆ. ಕೆಲವು ಜನಾಂಗಗಳು ಬೇರಿನಲ್ಲಿರುವ ನೀರನ್ನು ಕುಡಿಯಲು ಕೂಡ ಉಪಯೋಗಿಸುವುದುಂಟು. ಸುಮಾರು ೭೦ ಕೆಜಿ ಯಷ್ಟು ನೀರನ್ನು ಸಂಗ್ರಹಿಸಿಟ್ಟ ಬೇರುಗಳ ದಾಖಲೆಯೂ ಇದೆ‌‌‌.

No comments:

Post a Comment