*ಸೂರ್ಯನ ಕಿರಣಗಳು ದೇಹದಲ್ಲಿ "ಡಿ" ಜೀವಸತ್ವವನ್ನು ಉತ್ಪಾದಿಸಲು ಸಹಾಯ ಮಾಡುತ್ತದೆ.
*ಅಯೋಡಿನ್ ಲವಣದ ಕೊರತೆಯಿಂದ ಬರುವ ರೋಗವೇ ಗಳಗಂಡ
* ನಾವು ಬಳಸುವ ಅತಿ ಮುಖ್ಯ ಆಹಾರ ಧಾನ್ಯಗಳೆಂದರೆ ಅಕ್ಕಿ, ಗೋಧಿ, ಜೋಳ, ರಾಗಿ.
* ಸೂಕ್ಷ್ಮಾಣು ಜೀವಿಗಳು ಆಹಾರದಲ್ಲಿ ಸೇರಿದಾಗ ಆಹಾರ ಕೆಡುತ್ತದೆ ಅಥವಾ ಹಳಸುತ್ತದೆ. ಈ ಜೀವಿಗಳು ನಂಜಿನ ಪದಾರ್ಥಗಳನ್ನು ಉತ್ಪಾದಿಸುತ್ತದೆ. ಹೀಗಾಗಿ ಇಂತಹ ಆಹಾರವನ್ನು ಸೇವಿಸುವದರಿಂದ ಜಠರ ಹಾಗೂ ಕರುಳಿಗೆ ಸಂಬಂಧಿಸಿದ ರೋಗಗಳು ಬರುತ್ತವೆ. ಕೆಲವೊಮ್ಮೆ ರೋಗಗಳು ತೀವ್ರಗೊಂಡು ಸಾವು ಸಂಭವಿಸಬಹುದು.
*ಒಣಗಿಸುವುದು, ಉಪ್ಪು ಹಾಕುವುದು, ಹೊಗೆ ಹಾಕುವುದು, ತಂಪುಗೊಳಿಸುವುದು, ಕುದಿಸುವುದು ಇತ್ಯಾದಿ ವಿಧಾನಗಳಿಂದ ಮನೆಯಲ್ಲಿ ಆಹಾರವನ್ನು ಸಂರಕ್ಷಿಸುತ್ತಾರೆ. ಮಾರುಕಟ್ಟೆಯಲ್ಲಿ ಹಲವು ವಿಧಾನಗಳಿಂದ ಆಹಾರವನ್ನು ಸಂಸ್ಕರಿಸಿ, ಸಂರಕ್ಷಿಸಿ ಮಾರುತ್ತಾರೆ.
ಉದಾ: ತಂಪು ಪಾನೀಯಗಳು, ಬ್ರೆಡ್,
ಹಣ್ಣುಗಳ ರಸ, ಜ್ಯಾಮ್ ಇತ್ಯಾದಿ.
No comments:
Post a Comment