* ಮೊತ್ತಮೊದಲ ಬಟ್ಟೆಗಳು ಚರ್ಮ, ತುಪ್ಪಳ, ಎಲೆ, ಹುಲ್ಲುಗಳಿಂದ ಮಾಡಲ್ಪಟ್ಟಿದ್ದವು.
* ಸಸ್ಯನಾರಿನಿಂದ ರೇಷ್ಮೆ, ನೈಲಾನ್ ವರೆಗೂ ಅನೇಕ ವಿಧದ ನೂಲುಗಳಿವೆ. ಇವುಗಳಿಂದ ನಾನಾ ವಿಧದ ಬಟ್ಟೆಗಳು ತಯಾರಾಗುತ್ತವೆ. ಈ ಬಟ್ಟೆಗಳನ್ನು ಸಸ್ಯಗಳಿಂದ ಮತ್ತು ರಾಸಾಯನಿಕಗಳಿಂದ ತಯಾರಿಸಲಾದ ಬಣ್ಣ ಬಳಸಿ ಅಂದಗೊಳಿಸಲಾಗುತ್ತದೆ. ಮಾನವರ ಸೃಜನಶೀಲತೆಗೆ ಇದು ಒಂದು ಉದಾಹರಣೆ.
*ಕರ್ನಾಟಕವೆ ಭಾರತದ ಅತ್ಯಂತ ಹೆಚ್ಚು ರೇಷ್ಮೆ ಉತ್ಪಾದಿಸುವ ರಾಜ್ಯ. ಭಾರತದಲ್ಲಿ ಉತ್ಪನ್ನವಾಗುವ ರೇಷ್ಮೆಗಳ ಶೇ.೭೦ ಭಾಗ ಕರ್ನಾಟಕ ರಾಜ್ಯದಿಂದ ಬರುತ್ತದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ, ರಾಮನಗರ ಜಿಲ್ಲೆ ಹಾಗೂ ಮೈಸೂರು ಜಿಲ್ಲೆಗಳಲ್ಲಿ ಹೆಚ್ಚಿನ ರೇಷ್ಮೆ ಉತ್ಪನ್ನವಾಗುತ್ತದೆ .
* ಒಂದು ಬಗೆಯ ಕೀಟಗಳ ಸ್ರಾವವೇ ರೇಷ್ಮೆ. ಹೀಗೆ ಸ್ರಾವವನ್ನು ಸ್ರವಿಸುವ ಕೀಟಗಳೇ ರೇಷ್ಮೆ ಹುಳುಗಳು.
*ಬಾಗಲಕೋಟೆ ಜಿಲ್ಲೆಯಲ್ಲಿರುವ ಇಳಕಲ್ ಎಂಬ ಊರಿನಲ್ಲಿ ತಯಾರಾಗುವ ಸೀರೆಗಳು ಜಗತ್ಪ್ರಸಿದ್ಧ.
* ಕರ್ನಾಟಕದಲ್ಲಿ ರಾಜ್ಯದ ಸಾಂಪ್ರದಾಯಿಕ ಉಡುಗೆ
ಪುರುಷರ ಉಡುಗೆ: ಪಂಚೆ, ಶರ್ಟ್ ,ಅಂಗವಸ್ತ್ರ
ಸ್ತ್ರೀಯರ ಉಡುಗೆ: ಸೀರೆ, ಕುಪ್ಪಸ ಅಥವಾ ಲಂಗ,
ದಾವನಿ, ಕುಪ್ಪಸ.
No comments:
Post a Comment