ಸಾಥ೯ಕ ಬದುಕು ದೀಘಾ೯ಯುಷ್ಯಕ್ಕಿಂತ ದೊಡ್ಡದು:-
ಬೆಳಗಿನಿಂದ ಸಂಜೆಯವರೆಗೂ, ಬಿಡುವಿಲ್ಲದೆ ಅನೇಕರು ದುಡಿಯುತ್ತಾರೆ. ಕೆಲವರು ಕೆಲವೇ ಘಂಟೆಗಳು ದುಡಿಯುತ್ತಾರೆ. ಬಿಡುವಿಲ್ಲದೆ ಹೆಚ್ಚು ವೇಳೆ ದುಡಿದವರಿಗಿಂತ ಹೆಚ್ಚು ಪಲವನ್ನು ಕಡಿಮೆ ಘಂಟೆಯಲ್ಲಿ ಚಾಣಾಕ್ಷತನದಿಂದ ದುಡಿಯುವವರು ಪಡೆಯುತ್ತಾರೆ. ಇದೇ ರೀತಿ ಕೆಲವರು ಅನೇಕ ವಷ೯ಗಳು ಬದುಕುತ್ತಾರೆ, ಆದರೆ ಯಾವ ಗಮನಾಹ೯ ಸಾಧನೆಯನ್ನು ಮಾಡುವುದಿಲ್ಲ. ಆದರೆ ಶ್ರೀನಿವಾಸ ರಾಮಾನುಜನ್, ಮುದ್ದಣ, ಆದಿ ಶಂಕರಾಚಾಯ೯, ಸ್ವಾಮಿ ವಿವೇಕಾನಂದರಂತಹವರು ಅಲ್ಪಾಯುಷ್ಯದಲ್ಲಿ ಮಹತ್ತರ ಸಾಧನೆಯನ್ನು ಮಾಡುತ್ತಾರೆ. ಇಂತಹ ಬದುಕು ಸಾಥ೯ಕವಾದದ್ದು. ಪರೋಪಕಾರವೆಂಬ ಪುಣ್ಯದ ಕೆಲಸವನ್ನು ಮಾಡುವುದು, ನಮಗಾಗಿ ಬೇರೆಯವರನ್ನು ಪೀಡಿಸದೆ ಇರುವುದು ಸಾಥ೯ಕ ಜೀವಿಗಳ ತಾರಕಮಂತ್ರ ಆಗಿರುತ್ತದೆ. ಬದುಕಿನ ಒಂದು ಉನ್ನತವಾದ ಗುರಿ ಇಟ್ಟುಕೊಂಡು ಅದರ ಸಾಧನೆಗೇ ಕೆಲಸ ಮಾಡುತ್ತಿರುವವರೇ ನಿಜವಾದ ಸಾಧಕರು. ಇಂತಹವರೇ ಮನುಷ್ಯ ಜನ್ಮ ಬಲು ದೊಡ್ಡದಯ್ಯ ಎನ್ನುವ ದಾಸರ ಮಾತಿಗೆ ಉದಾಹರಣೆಗಳು.
Wednesday, 4 April 2018
ಗಾದೆಮಾತು :-ಸಾರ್ಥಕ ಬದುಕು ದೀರ್ಘಾಯುಷ್ಯಕ್ಕಿಂತ ದೊಡ್ಡದು
Subscribe to:
Post Comments (Atom)
-
ಅನುಕರಣಾವ್ಯಯ :- ಅನುಕರಣಾವ್ಯಯ :- ನಮಗೆ ಕೇಳಿಸಿದಂತಹ ಮತ್ತು ಕಾಣಿಸಿದಂತಹ ಧ್ವನಿ ಮತ್ತು ವಸ್ತುಗಳನ್ನು ಕೇಳಿಸಿದಂತೆ, ಕಾಣಿಸಿದಂತೆ ಪುನಃ ಅನುಕ...
-
ನಾಳೆ ಎಂದವನ ಮನೆ ಹಾಳು:- ಕೆಲವರಿಗೆ ಯಾವುದೇ ಕೆಲಸ ಕೊಟ್ಟರು ಅದನ್ನು ಅಂದೆ ಮಾಡದೆ ನಾಳೆಗೆ ಮುಂದೂಡುವ ಪ್ರವೃತ್ತಿಯನ್ನು ಬೆಳೆಸಿಕೊಂಡಿರುತ್ತಾರೆ. ಹೀಗಾಗ...
-
ಕಮಿಷನರುಗಳ ಆಳ್ವಿಕೆ :- ಕ್ರಿ.ಶ. ೧೮೩೧ ರಿಂದ ಸುಮಾರು ೫೦ ವರ್ಷಗಳ ಕಾಲ ಮೈಸೂರು ರಾಜ್ಯದ ಆಡಳಿತವನ್ನು ಬ್ರಿಟಿಷ್ ಕಮಿಷನರ್ ಗಳು ಮಾಡಿದರು. ಪ್ರಾರಂಭದಲ್ಲಿ...
No comments:
Post a Comment