ಭಾವಸೂಚಕಾವ್ಯಯ
-: ಭಾವಸೂಚಕಾವ್ಯಯ :-
ಮನಸ್ಸಿನಲ್ಲಿ ಹುಟ್ಟುವ ಕೋಪ, ಹರ್ಷ, ದುಃಖ, ಮೆಚ್ಚುಗೆ, ಆಕ್ಷೇಪ, ತಿರಸ್ಕಾರ ಮೊದಲಾದವುಗಳನ್ನು ವ್ಯಕ್ತಪಡಿಸಲು ಕೆಲವು ಅರ್ಥವಿಲ್ಲದ ಶಬ್ದಗಳನ್ನು ಬಳಸಲಾಗುತ್ತದೆ. ಇಂಥಹ ಶಬ್ದಗಳನ್ನು ’ಭಾವಸೂಚಕಾವ್ಯಯಗಳು’ ಎನ್ನುವರು.
ಉದಾ :
ಓಹೋ! ಅವನು ಅಂಥವನೇನು!ಅಬ್ಬಾ! ಅಷ್ಟು ದೊಡ್ಡ ಹಾವೇ!ಅಯ್ಯೋ! ಎಂಥ ಕಷ್ಟ ಬಂತು.ಛೇ! ಸಾಕಾಯ್ತು ನಿನ್ನ ಸಹವಾಸ.
ಕೆಲವು ಭಾವಸೂಚಕ ಪದಗಳು :-
ಸಿಟ್ಟು : ಊಂ, ಆಂ, ಏ,
ಸಂಭ್ರಮ : ಆಹಾ, ಓಹೋ, ಭೇಷ, ಹೌದೌದು, ವ್ಹಾ ವ್ಹಾ,
ದುಃಖ :- ಅಮ್ಮಾ, ಅಯ್ಯೋ, ಅವ್ವಾ, ಅಪ್ಪಾ
ಆಶ್ಚರ್ಯ :- ಅಬ್ಬಾ! ಓಹೋ! ವಾರೇವ್ಹಾ!
ಕೇದ:- ಛೇಛೇ, ತೂತೂ, ಛೀಛೀ ಇತ್ಯಾದಿ
No comments:
Post a Comment