-: ಅರ್ಧವಿರಾಮ-(;) :-
ಅನೇಕ ಉಪವಾಕ್ಯಗಳು ಒಂದು ಪ್ರಧಾನ ವಾಕ್ಯಕ್ಕೆ ಅಧೀನ ವಾಗಿದ್ದಾಗ, ಉಪ ವಾಕ್ಯಗಳು ಮುಗಿದಲ್ಲೆಲ್ಲ ಅರ್ಧವಿರಾಮದ ‘;’ ಈ ಚಿಹ್ನೆಯನ್ನು ಉಪಯೋಗಿಸಬೇಕು.
ಉದಾಹರಣೆಗೆ:
ಅವನು ಕಾಶಿರಾಮೇಶ್ವರಗಳಿಗೆ ಹೋಗಿಬಂದನು; ಆದರೂ ಕೆಟ್ಟ ಬುದ್ಧಿಯನ್ನು ಬಿಡಲಿಲ್ಲ. ಆ ದಿನ ಮಳೆ ಬಂದಿತ್ತು; ಆದುದರಿಂದ ಆಟವಾಡಲಿಲ್ಲ; ಇದು ಆಟಗಾರರಿಗೆ ಸ್ವಲ್ಪ ನಿರಾಸೆಯನ್ನುಂಟುಮಾಡಿತು. ಮೇಲಿನ ಉದಾಹರಣೆಗಳಲ್ಲಿ ಮೊದಲನೆಯ ವಾಕ್ಯದಲ್ಲಿ ಒಂದು ಉಪವಾಕ್ಯವೂ ಎರಡನೆಯದರಲ್ಲಿ ಎರಡು ಉಪವಾಕ್ಯಗಳೂ ಇದ್ದು ಅಲ್ಲಿ ‘;’ ಈ ರೀತಿಯ ಅರ್ಧವಿರಾಮ ಚಿಹ್ನೆಯನ್ನು ಬರೆದಿದೆ. ಅದನ್ನು ಲಕ್ಷ್ಯದಲ್ಲಿಟ್ಟು ಅನುಸರಿಸಬೇಕು.
No comments:
Post a Comment