Friday, 6 April 2018

ಜಾರ್ಜ್ ವಾಷಿಂಗ್ಟನ್ (೧೭೩೨-೧೭೯೯)

ಜಾರ್ಜ್ ವಾಷಿಂಗ್ಟನ್ :-
               ಅಮೇರಿಕಾ ಕ್ರಾಂತಿ ಪುರುಷ ಜಾರ್ಜ್ ವಾಷಿಂಗ್ಟನ್ ನು ಒಬ್ಬ ವೀರಯೋಧ, ಯುದ್ಧ ನಿಪುಣ, ಸೋಲರಿಯದ ಸರದಾರ, ದಕ್ಷ ಆಡಳಿತಗಾರ ಮತ್ತು ರಾಜನೀತಿ ನಿಪುಣ. ತನ್ನ ಪ್ರಾಮಾಣಿಕತೆ, ಪ್ರಚೋದನಾಶಕ್ತಿ ಮತ್ತು ಸಾಧನಾಶಕ್ತಿಗಳಿಂದ ಅಮೇರಿಕಾದ ಕೀರ್ತಿ ಪ್ರತಿಷ್ಠೆಯನ್ನು ಉತ್ತುಂಗ ಶಿಖರಕ್ಕೆರಿಸಿದನು. ಅವನು ಫೆಬ್ರುವರಿ ೨೨,೧೭೩೨ ರಲ್ಲಿ ವರ್ಜೀನಿಯಾ ಪ್ರಾಂತ್ಯದಲ್ಲಿ ರೈತನ ಮಗನಾಗಿ ಜನಿಸಿದನು. ಆತನು ಚಿಕ್ಕವಯಸ್ಸಿನಲ್ಲೇ ತಂದೆಯನ್ನು ಕಳೆದುಕೊಂಡಿದ್ದನು. ಅವನು ಭೂ ಸರ್ವೆಯರ್ ಆಗಿ ಕಾರ್ಯ ನಿರ್ವಹಿಸಿ ಸುಮಾರು ೮೦೦೦ ಎಕರೆಗಳ ಮಾಲೀಕನಾದನು. ಆತ ೧೭೫೯-೭೪ರ ನಡುವೆ ವರ್ಜೀನಿಯಾದ ಪ್ರತಿನಿಧಿ ಸಭೆಯ ಸದಸ್ಯನಾಗಿ ಸೇವೆ ಸಲ್ಲಿಸಿದನು. ಫ್ರಾನ್ಸ್ ದೇಶ ಸಪ್ತವಾರ್ಷಿಕ ಯುದ್ಧದಲ್ಲಿ ವರ್ಜೀನಿಯಾವನ್ನು ಆಕ್ರಮಿಸಿದಾಗ ಇಂಗ್ಲೆಂಡ್ ಪರ ಸೇರಿ ತಾಯ್ನಾಡಿಗಾಗಿ ಹೋರಾಡಿದನು ಮತ್ತು ಅಪಾರ ಯುದ್ಧ ಅನುಭವವನ್ನು ಪಡೆದನು. ೧೭೫೫ ರ ೨ನೇ ಕಾಂಟಿನಂಟಲ್ ಕಾಂಗ್ರೆಸ್ ಅವನನ್ನು ಅಮೇರಿಕ ಸ್ವತಂತ್ರ ಸಂಗ್ರಾಮದ ಮಹಾದಂಡನಾಯಕನನ್ನಾಗಿ ನೇಮಿಸಿತು. ಆ ನೇಮಕವು ನ್ಯಾಯಯುತವೂ, ವಿವೇಕಯೂತವು ಆಗಿತ್ತು. ಆ ಪರಿಸ್ಥಿತಿಯಲ್ಲಿ ಆ ಸ್ಥಾನವನ್ನು ಅಲಂಕರಿಸುವವರು ಯಾರೂ ಇರಲಿಲ್ಲ. ಆಗ ತನ್ನ ದೇಶಕ್ಕಾಗಿ ಸರ್ವತ್ಯಾಗಕ್ಕೆ ಸಿದ್ಧನಾಗಿ ಪ್ರಜೆಗಳ ಆಶೋತ್ತರಗಳನ್ನು ಈಡೇರಿಸಲು ಕಾರ್ಯಮಗ್ನನಾದನು.
              ಆಗ ಅಮೇರಿಕಾಕ್ಕೆ ಹೋರಾಡಲು ನಿಯಮಬದ್ಧ ಸೈನ್ಯವೊಂದು ಇರಲಿಲ್ಲ. ಅದರಲ್ಲಿ ಇದ್ದಬದ್ದ ೧೪,೦೦೦ ರೈತ ಮತ್ತು ಅರಣ್ಯವಾಸಿಗಳನ್ನು ಕೂಡಿಸಿ ತನ್ನ ವಿನಯ, ಧೈರ್ಯ, ಸ್ಥೈರ್ಯ ಮತ್ತು ನಿಸ್ವಾರ್ಥಭಾವಗಳಿಂದ ಅವರಿಗೆ ತರಬೇತಿ ಕೊಟ್ಟು ಶಿಸ್ತಿನ ಸಿಪಾಯಿಗಳನ್ನಾಗಿ ಮಾಡಿದನು. ಪ್ರಥಮ ಹಂತದ ಬೋಸ್ಟನ್ ನಲ್ಲಿ ಹೋವ್ ನಿಂದ ಬಂಕರ್ ಹಿಲ್ ಕದನದಲ್ಲಿ ಜಾರ್ಜ್ ನು ಸೋತನು. ಅನಂತರ ಟ್ರಿಂಟನ್ ಮತ್ತು ಪ್ರಿನ್ಸ್ ಟನ್ ಗಳಲ್ಲಿ ನಡೆದ ಕದನಗಳಲ್ಲಿ ಜಾರ್ಜ್ ವಾಷಿಂಗ್ಟನ್ ಜಯಗಳಿಸಿದನು. ೧೭೭೭ ರಲ್ಲಿ ೮೦೦೦ ಸೈನಿಕರನ್ನು ಹೊಂದಿದ್ದ ಬ್ರಿಟಿಷ್ ಸೇನಾನಿ ಕಾರ್ನವಾಲಿಸನು ೧೭೮೧ ರಲ್ಲಿ ಯಾರ್ಕ್ ಟನ್ ನಲ್ಲಿ ವಾಷಿಂಗ್ಟನ್ ನಿಗೆ ಶರಣಾಗಿ ಬರುವುದರೊಂದಿಗೆ ಅಮೇರಿಕಾಗೆ ಸ್ವತಂತ್ರ ತಂದು ಕೊಟ್ಟನು.  ಜನತೆಯು ಅವನ ಮೇಲೆ ಇಟ್ಟ ಪ್ರೀತಿ ವಾತ್ಸಲ್ಯದ ಪ್ರತೀಕ ಎಂಬಂತೆ ೧೭೮೯ ರ ಪ್ರಥಮ ಸಾರ್ವತ್ರಿಕ ಚುನಾವಣೆಗಳಲ್ಲಿ ಪ್ರಚಂಡ ಬಹುಮತಗಳೊಂದಿಗೆ ಅಮೇರಿಕಾದ ಪ್ರಥಮ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾದನು. ೨ನೇ ಬಾರಿಗೂ ಪುನಃ ಜಾರ್ಜ್ ನು ಅಧ್ಯಕ್ಷನಾಗಿ ಆಯ್ಕೆಯಾದನು. ಆದರೆ ೩ನೇ ಬಾರಿ ನಿರಾಕರಿಸಿದನು. ಅವನು ಫೆಡರಲ್ ಪಕ್ಷದ ನಾಯಕನಾಗಿ ಕೇಂದ್ರ ಸರ್ಕಾರವನ್ನು ಬಲಪಡಿಸಿದನು. ಅವನ ಜ್ಞಾಪಕಾರ್ಥವಾಗಿ ಅಮೇರಿಕಾದ ಹೊಸ ರಾಜಧಾನಿಯನ್ನು ವಾಷಿಂಗ್ಟನ್ ಎಂದು ನಾಮಕರಣ ಮಾಡಲಾಗಿದೆ. ದಕ್ಷ ಆಡಳಿತಗಾರನಾಗಿದ್ದ ಆತ ಮಾರ್ಥಾಕಸ್ಟಿಸ್ ಎಂಬ ಶ್ರೀಮಂತ ವಿಧವೆಯನ್ನು ವಿವಾಹವಾಗಿ ಸರಳ ಜೀವನ ನಡೆಸಿದ ಸತ್ಪುರುಷ. ಹೀಗಾಗಿ ಆತನನ್ನು "ಆಧುನಿಕ ಅಮೇರಿಕಾದ ಪಿತಾಮಹ " ಎಂದು ಕರೆಯಲಾಗುತ್ತದೆ.

No comments:

Post a Comment