ಮನೆ ಸಣ್ಣದಿರಲಿ, ಮನ ದೊಡ್ಡದಿರಲಿ:-
ಮನೆಯ ನಿಮಾ೯ಣ, ಹಣ ಖಚು೯ ಮಾಡಿದಂತೆ ಸುಂದರವೂ, ವಿಶಾಲವೂ ಆಗಿರುತ್ತದೆ. ಆದರೆ ಆ ಮನೆಯಲ್ಲಿ ವಾಸ ಮಾಡುವ ವ್ಯಕ್ತಿಯ ಮನಸ್ಸು ಅಷ್ಟೇ ವಿಶಾಲವಾಗಿರುತ್ತದೆ. ಎಂದು ಹೇಳಲಾಗುವುದಿಲ್ಲ. ಮನೆಗೂ ಮತ್ತು ಮನಸ್ಸಿಗೂ ಸಂಬಂದವಿಲ್ಲ. ಮನೆ ದೊಡ್ಡದಾಗಿದ್ದು ಮನಸ್ಸು ಸಣ್ಣತನದ್ದಾಗಿರಬಹುದು ಅಥವಾ ಮನೆ ಚಿಕ್ಕದಾಗಿದ್ದರೂ ಮನಸ್ಸು ವಿಶಾಲ ಮತ್ತು ದೊಡ್ಡದಾಗಿರಬಹುದು. ಅದರಂತೆ ಕೆಲವೊಂದು ಉದಾಹರಣೆಗಳಲ್ಲಿ ಮನ, ಮನಸ್ಸುಗಳು ಎರಡು ಚಿಕ್ಕದಾಗಿರಬಹುದು. ಸಾಮಾನ್ಯವಾಗಿ ಮನುಷ್ಯನ ಮನಸ್ಸು ಹೇಗಿರಬೇಕು ಎಂಬ ಸೂತ್ರವನ್ನು ಈ ಗಾದೆ ಸಾರುತ್ತದೆ. ಮನೆ ಚಿಕ್ಕದಾಗಿರಲಿ, ಆದರೆ ಮನಸ್ಸು ದೊಡ್ಡದಾಗಿರಲಿ. ಅಂದರೆ ಪರಸ್ಪರರಲ್ಲಿ ಪ್ರೀತಿ, ಪ್ರೇಮ ಸೌಹಾದ೯ತೆ ಬೆಳೆಯುತ್ತದೆ. ಮನೆ ಚಿಕ್ಕದಿದೆಯೆಂದು ಮನೆಗೆ ಬಂದ ನೆಂಟರನ್ನು ಅತಿಥಿಗಳನ್ನು ಮೂಗು ಮುರಿದು ಹೊರಗೆ ದೂಡಬೇಡ. ಆತ್ಮೀಯ ಸ್ವಾಗತ ಕೋರಿ, ಆದರ ಆತಿಥ್ಯವನ್ನು ಮಾಡಿ ಕಳುಹಿಸು.ಆಗ ಅವರ ಮನಸ್ಸಿನೊಂದಿಗೆ ನಿನ್ನ ಮನಸ್ಸೂ ಸಂತೋಷದಿಂದ ನಲಿದಾಡುತ್ತದೆ. ವಿಶ್ವವೇ ನನ್ನ ಮನೆ, ವಿಶ್ವದ ಸಕಲ ಜನಗಳೇ ನನ್ನ ಕುಟುಂಬ ಎಂಬ ವಿಶಾಲವಾದ ಸೋದರ ಭಾವ ಎಲ್ಲರ ಮನದಲ್ಲಿ ಮೂಡಬೇಕು. ಇದಕ್ಕೆ ನೀನು ಹೊಂದಿರುವ ಮನೆ ಚಿಕ್ಕದು, ದೊಡ್ಡದು ಎಂಬ ಚಿಂತೆ ಬೇಡ. ದೊಡ್ಡ ಮನೆ ನಿಮಿ೯ಸಿ, ಒಳಗೆ ಒಂದು ನೊಣವೂ ಬಾರದಂತೆ ವಾಸಿಸುವ ಜಿಪುಣನು ಸಮಾಜಕ್ಕೆ ಯಾವ ಹಿತವನ್ನು ತಾನೇ ಬಯಸಬಲ್ಲ? ಆದ್ದರಿಂದ ಮನೆ ಹೇಗೇಯೇ ಇರಲಿ ಮನಸ್ಸು ಮಾತ್ರ ವಿಶಾಲವಾಗಿರಲಿ ಎಂದು ಸಾರಿ ಹೇಳುತ್ತದೆ ಈ ಗಾದೆ.
Friday, 6 April 2018
ಗಾದೆಮಾತು : ಮನೆ ಸಣ್ಣದಿರಲಿ, ಮನ ದೊಡ್ಡದಿರಲಿ
Subscribe to:
Post Comments (Atom)
-
ಅನುಕರಣಾವ್ಯಯ :- ಅನುಕರಣಾವ್ಯಯ :- ನಮಗೆ ಕೇಳಿಸಿದಂತಹ ಮತ್ತು ಕಾಣಿಸಿದಂತಹ ಧ್ವನಿ ಮತ್ತು ವಸ್ತುಗಳನ್ನು ಕೇಳಿಸಿದಂತೆ, ಕಾಣಿಸಿದಂತೆ ಪುನಃ ಅನುಕ...
-
ನಾಳೆ ಎಂದವನ ಮನೆ ಹಾಳು:- ಕೆಲವರಿಗೆ ಯಾವುದೇ ಕೆಲಸ ಕೊಟ್ಟರು ಅದನ್ನು ಅಂದೆ ಮಾಡದೆ ನಾಳೆಗೆ ಮುಂದೂಡುವ ಪ್ರವೃತ್ತಿಯನ್ನು ಬೆಳೆಸಿಕೊಂಡಿರುತ್ತಾರೆ. ಹೀಗಾಗ...
-
ಕಮಿಷನರುಗಳ ಆಳ್ವಿಕೆ :- ಕ್ರಿ.ಶ. ೧೮೩೧ ರಿಂದ ಸುಮಾರು ೫೦ ವರ್ಷಗಳ ಕಾಲ ಮೈಸೂರು ರಾಜ್ಯದ ಆಡಳಿತವನ್ನು ಬ್ರಿಟಿಷ್ ಕಮಿಷನರ್ ಗಳು ಮಾಡಿದರು. ಪ್ರಾರಂಭದಲ್ಲಿ...
No comments:
Post a Comment