”ಸಾವಿಲ್ಲದ ಮನೆಯಿಂದ ಸಾಸಿವೆತಂದಂತೆ”
ಸಾವಿಲ್ಲದ ಮನೆಯಿಂದ ಸಾಸಿವೆ ತೆಗೆದುಕೊಂಡು ಬಾ ಎಂದು ಹೇಳಿದ ಬುದ್ದನ ಕಥೆ ಎಲ್ಲರಿಗೂ ತಿಳಿದಿರುವುದೇ. ಸತ್ತಮಗನನ್ನು ಬದುಕಿಸಿಕೊಡು ಎಂದು ಹೆಂಗಸೊಬ್ಬಳು ಗೌತಮಬುದ್ದನನ್ನು ಕೇಳಿಕೊಳ್ಳುತ್ತಾಳೆ. ಇದು ಸಾಧ್ಯವಿಲ್ಲ ಎಂದು ನೇರವಾಗಿ ಹೇಳುವ ಬದಲು ಬುದ್ದ ಈ ಮಾತನ್ನು ಹೇಳುತ್ತಾನೆ. ಮಗನನ್ನು ಕಳೆದುಕೊಂಡ ತಾಯಿ ಮನೆ ಮನೆಗೆ ತಿರುಗಿ ಬರಿಗೈಯಲ್ಲಿ ಹಿಂದಿರುಗುತ್ತಾಳೆ. ಜೀವಿಗಳಿಗೆ ಸಾವು ಅನಿವಾಯ೯ ಎಂದು ತಿಳಿದುಕೊಳ್ಳುತ್ತಾಳೆ. ಬುದ್ದನ ಮಾತು ನಮಗೂ ಪಾಠವಾಗಬೇಕು. ನಮ್ಮ ಜೀವನ ಸಾವಿನಲ್ಲಿ ಪರ್ಯಾವಸಾನವಾಗುತ್ತದೆ. ನಾವು ಏನೇ ಮಾಡಿದರೂ ಸಾವಿನ ದವಡೆಯಿಂದ ಪಾರಾಗುವುದಿಲ್ಲ ಎನ್ನುವ ಸತ್ಯವನ್ನು ಆಧುನಿಕ ಮಾನವ ಮುಂದೂಡಲು ಪ್ರಯತ್ನಿಸುತ್ತಿದ್ದಾನೆ. ಸಾವನ್ನು ಮುಂದೂಡುವುದು ಹೇಗೆ? ಎಂದು ಪ್ರಯೋಗಗಳನ್ನು ಮಾಡುತ್ತಿದ್ದಾನೆ. ಸಾವಿನ ಬಗ್ಗೆ ವಿಶೇಷ ಅಧ್ಯಯನ ನಡೆಸುತ್ತಿದ್ದಾನೆ. ಇದು ಒಂದು ರೀತಿ ಸಾವಿಲ್ಲದ ಮನೆಯಿಂದ ಸಾಸಿವೆ ತಂದಂತೆ ಎನ್ನುವ ಗಾದೆ ತುಂಬಾ ಅಥ೯ಪೂಣ೯ವಾಗಿದೆ.
No comments:
Post a Comment