ಸಾಮಾನ್ಯಾವ್ಯಯ:-
ಸಾಮಾನ್ಯಾವ್ಯಯ :-
ಕ್ರಿಯೆಯ ಸ್ಥಳ, ಕಾಲ ಮತ್ತು ರೀತಿಯನ್ನು ಹೇಳುವ ಪದಗಳು ’ಸಾಮಾನ್ಯಾವ್ಯಯ’ಗಳಾಗಿರುತ್ತವೆ. ಇವು ಕ್ರಿಯಾಪದಕ್ಕೆ ವಿಶೇಷಣಗಳಾಗಿರುತ್ತವೆ. (ಕ್ರಿಯಾವಿಶೇಷಣ).
ಉದಾ: ಅವನು ಆಮೇಲೆ ಬರುವನು. (ಕಾಲ)ಅದು ಅತ್ತ ಹೋಯಿತು. (ಸ್ಥಾನ)ಅವಳು ಚೆನ್ನಾಗಿ ಹಾಡುತ್ತಾಳೆ. (ರೀತಿ) ಕೆಲವು
ಸಾಮಾನ್ಯಾವ್ಯಯಗಳು :-
ಸ್ಥಳ :- ಅಲ್ಲಿ, ಇಲ್ಲಿ, ಹಿಂದು, ಮುಂದೆ, ಎಲ್ಲಿ...
ಕಾಲ:-ಅಂದು, ಇಂದು, ಎಂದು, ಬಳಿಕ, ಬೇಗ, ತರುವಾಯ, ಕೂಡಲೇ, ಒಡನೇ, ಆಗ, ಈಗ, ಯಾವಾಗ
ರೀತಿ :- ಹೀಗೆ, ಹಾಗೆ, ಥಟ್ಟನೆ, ಮೆಲ್ಲನೆ, ಸುಮ್ಮನೆ, ನಿಧಾನ, ಅವಸರ, ಜೋರಾಗಿ ಇತ್ಯಾದಿ
No comments:
Post a Comment