ಸಾವಿರ ಉಳಿ ಏಟು ಬಿದ್ದರಲ್ಲವೇ ಶಿವಲಿಂಗವಾಗುವುದು?
ವಿವರಣೆ :-
ಶಿವ ಶೈವರೆಲ್ಲರ ಆರಾಧ್ಯದೈವ. ಈಶ್ವರ, ಮಹೇಶ್ವರ, ಪರಮೇಶ್ವರ ಮುಂತಾದ ನೂರಾರು ಹೆಸರುಗಳಿರುವ ಶಿವನ ರೂಪ, ಲಿಂಗ. ಸರ್ವಾಂತಯಾ೯ಮಿ, ಸವ೯ಶಕ್ತನಾದ ಶಿವ, ಸತ್ಯ ಸ್ವರೂಪ, ಸುಂದರ. ನಮ್ಮ ದೇಶದಲ್ಲಿರುವ ಶಿವಲಿಂಗ ಶ್ರದ್ದಾಭಕ್ತಿಯಿಂದ, ಕಲ್ಲಿನಿಂದ (ಲೋಹ, ಮರ, ಗಾಜು) ಕಡೆಯಲ್ಪಟ್ಟ ಸಾಂಕೇತಿಕ ಕಲಾಕೃತಿ. ಶಿವನ ಹಾಗೆಯೇ ಯಾವುದೇ ದೇವರ ಶಿಲ್ಪವನ್ನು ಕೆತ್ತಬೇಕಾದರೂ ಉಳಿಯ ಸಾವಿರ ಏಟುಗಳು ಬೀಳಬೇಕು. ಶಿಲ್ಪಿಯಾದವನು ಶ್ರದ್ದೆ, ಭಕ್ತಿಯಿಂದ ಈ ಕೆಲಸವನ್ನು ಮಾಡುತ್ತಾನೆ. ನಮ್ಮ ಬದುಕನ್ನು ಶಿಲ್ಪಕ್ಕೆ ಹೋಲಿಸಬಹುದು. ನಮಗೆ ಎದುರಾಗವ ಕಷ್ಟಗಳು ಉಳಿಯ ಏಟುಗಳಂತೆ. ದಿಟ್ಟತನದಿಂದ ಮನಸ್ಥೈಯ೯ವನ್ನು ಕಳೆದುಕೊಳ್ಳದೆ ಕಷ್ಟ ಗಳನ್ನು ಎದುರಿಸಿದರೆ ಬಾಳು ಹಸನವಾಗುತ್ತದೆ, ಸಾಥ೯ಕವಾಗುತ್ತದೆ. ಯಾವ ತೊಂದರೆ ತಾಪತ್ರಯಗಳು ಇಲ್ಲದ ಜೀವನವೇ ಇಲ್ಲ. ಕಷ್ಟ ಬಂದಾಗ ಕುಗ್ಗದೆ ಸುಖ ಬಂದಾಗ ಹಿಗ್ಗದೆ ಒಂದೇ ರೀತಿಯಲ್ಲಿ ಇರುವವನು ಜೀವನದಲ್ಲಿ ಏನನ್ನಾದರೂ ಸಾಧಿಸುತ್ತಾನೆ.
No comments:
Post a Comment