Saturday, 14 April 2018

ಗಾದೆಮಾತು : ಮರ್ಯಾದೆಯಿಲ್ಲದವನಿಗೆ ಮೂರು ಕಾಸಿನ ಬೆಲೆಯು ಇಲ್ಲ

ಮಯಾ೯ದೆಯಿಲ್ಲದವನಿಗೆ ಮೂರುಕಾಸಿನ ಬೆಲೆಯೂ ಇಲ್ಲ :-
         ಸಂಪಾದಿಸಿದ ಹಣ ಕಳೆದುಕೊಂಡರೆ ಏನೂ ನಷ್ಟವಿಲ್ಲ. ಆರೋಗ್ಯ ಕಳೆದುಕೊಂಡರೆ ಅಲ್ಪ ನಷ್ಟ. ಮಾನ ಕಳೆದುಕೊಂಡರೆ ಎಲ್ಲವೂ ಕಳೆದುಕೊಂಡತೆಯೇ. ಎನ್ನುವ ಸಾರವಚನವನ್ನು ಈ ಗಾದೆ ಸಂಕ್ಷಿಪ್ತವಾಗಿ ತಿಳಿಸುತ್ತದೆ. ವ್ಯವಹಾರಕ್ಕೆ ಮೂಲಾಧಾರವಾದ ಹಣಕ್ಕಿಂತ ದೈನಂದಿನ ಕಾಯ೯ಕ್ರಮಗಳನ್ನು ನಿರಾತಂಕವಾಗಿ ನಡೆಸಿಕೊಂಡು ಹೋಗಲು ಆರೋಗ್ಯಕ್ಕಿಂತ, ಸಮಾಜದಲ್ಲಿ ಸೂಕ್ತ ಸ್ಥಾನಮಾನಗಳನ್ನು ತಂದುಕೊಡಲು, ಅತ್ಯಗತ್ಯವಾದ ಮಯಾ೯ದೆಗೇ ಮೊದಲ ಸ್ಥಾನ ಎನ್ನುತ್ತದೆ ಈ ಗಾದೆ. ಘನತೆ, ಗೌರವ, ಸೇವಾಹಿರಿತನ, ವಯಸ್ಸಿಗೆ ತಕ್ಕ ಮಯಾ೯ದೆ ಇವು ಮಾನವ ಸಮಾಜದ ಗುತು೯ಗಳಷ್ಟೆ ಅಲ್ಲ. ಪ್ರಾಣಿ ವಗ೯ದಲ್ಲೂ ಇವು ಕಾಣಸಿಗುತ್ತವೆ. ಮಾನ ಮಯಾ೯ದೆ ಎನ್ನುವುದು ಹಣ ಕೊಟ್ಟು ಸಂಪಾದಿಸುವ ವಸ್ತು ಅಲ್ಲ. ನಮ್ಮ ದಿನನಿತ್ಯದ ನಡವಳಿಕೆ, ನೆರೆಹೊರೆ, ಸಹೋದ್ಯೋಗಿಗಳೊಂದಿಗಿನ ಸಂಬಂಧ ನಾವು ಗಳಿಸುವ ಮಯಾ೯ದೆಗೆ ಸಹಾಯ ಮಾಡುತ್ತವೆ. ಸುಳ್ಳು ಹೇಳುವುದು, ಕೊಟ್ಟಮಾತಿಗೆ ತಪ್ಪುವುದು, ಚಾಡಿಮಾತು ಹರಡುವುದು, ಸಾಲ ಪಡೆದು ಹಿಂದಿರುಗಿಸದಿರುವುದು, ಇಲ್ಲದ್ದನ್ನು ಇದೆ ಎಂದು ಸಾಧಿಸುವುದು ಮಾನ ಕಳೆದುಕೊಳ್ಳುವ ಕೆಲವು ದಾರಿಗಳು. ಮಯಾ೯ದೆ ಅಪಾರ ಆಸ್ತಿಗೆ ಸಮ. ಅದನ್ನು ಕಾಪಾಡಿಕೊಂಡು ಹೋಗಬೇಕು. ಒಂದು ಸಲ ಮಾನ ಹೋದರೇ ಮತ್ತೆ ಅದು ಬಾರದು. 

No comments:

Post a Comment