Monday, 26 March 2018

ಕಲಚೂರ್ಯರು(ಕ್ರಿ. ಶ. ೧೧೫೬-೧೧೮೩):-

ಕಲಚೂರ್ಯರು:-
           ಕಲಚೂರ್ಯರು ಕಲ್ಯಾಣದ ಚಾಲುಕ್ಯರ ಸಾಮಂತರಾಗಿದ್ದರು. ಆದರೆ ಪೆರ್ಮಾಡಿಯ ಮಗನಾದ ಎರಡನೇ ಬಿಜ್ಜಳನು ಕಲ್ಯಾಣ ಚಾಲುಕ್ಯರ ದೊರೆಯಾದ ತೈಲಪನನ್ನು ಹತ್ತಿಕ್ಕಿ ಅಧಿಕಾರವನ್ನು ತನ್ನ ವಶಕ್ಕೆ ಪಡೆದುಕೊಂಡನು. ಈತನ ಕಾಲ ಧಾರ್ಮಿಕ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ಮಹತ್ತರ ಬದಲಾವಣೆಗಳನ್ನು ಕಂಡಿತು. ಧಾರ್ಮಿಕ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ಕ್ರಾಂತಿಯನ್ನುಂಟು ಮಾಡಿದ ಬಸವಣ್ಣನವರು ಬಿಜ್ಜಳನ ಆಸ್ಥಾನದಲ್ಲಿ ಮಹಾಮಂತ್ರಿಯಾಗಿದ್ದರು. ಚಾಲುಕ್ಯ ಸಾಮ್ರಾಜ್ಯದ ಉತ್ತರಾಧಿಕಾರಿಯಾಗಿ ಅಧಿಕಾರ ನಡೆಸಿದ ಬಿಜ್ಜಳನಿಗೆ  'ಭುಜಬಲ ಚಕ್ರವರ್ತಿ', 'ತ್ರಿಭುವನಮಲ್ಲ', 'ಕಲಚೂರಿ ಚಕ್ರವರ್ತಿ' ಇತ್ಯಾದಿ ಬಿರುದುಗಳಿದ್ದವು. ಬಿಜ್ಜಳನ ನಂತರ ಅವನ ಮೊದಲ ಮಗ ಸೋಮೇಶ್ವರ ಕ್ರಿ. ಶ. ೧೧೬೮ ರಲ್ಲಿ ಪಟ್ಟವೇರಿದನು. ಕ್ರಿ. ಶ. ೧೧೮೪ ರಲ್ಲಿ ಸಿಂಹಾಸನವೇರಿದ ಬಿಜ್ಜಳನ ಕಿರಿಯ ಪುತ್ರ ಸಿಂಘಣನಿಂದ ಕಲ್ಯಾಣದ ಚಾಲುಕ್ಯರ ಕೊನೆಯ ದೊರೆ ನಾಲ್ಕನೇ ಸೋಮೇಶ್ವರನು ಸಿಂಹಾಸನವನ್ನು ಕಿತ್ತುಕೊಂಡನು. ಹೀಗೆ ಕೆಲವು ಕಾಲ ಶತಮಾನಕ್ಕೆ ಕಲಚೂರಿಗಳ ಆಳ್ವಿಕೆ ಕೊನೆಗೊಂಡರೂ, ಅವರ ಆಡಳಿತ ದಕ್ಷಿಣ ಭಾರತದಲ್ಲಿ ಮಹತ್ವದ್ದೆನಿಸಿತ್ತು.

No comments:

Post a Comment