ತಲಕಾಡಿನ ಗಂಗರು :-
ಕರ್ನಾಟಕದ ಇತಿಹಾಸದಲ್ಲಿ ಗಂಗರು ಪ್ರಮುಖ ಸ್ಥಾನ ಪಡೆದಿದ್ದು ಅವರು ಕ್ರಿ. ಶ. ೩೫೦ ರಿಂದ ಕ್ರಿ. ಶ. ೯೯೯ರ ತನಕ ಆಳ್ವಿಕೆ ನಡೆಸಿದರು. ಅವರು ಕ್ರಿ. ಶ. ೬೧೦ ರಿಂದ ೭೫೭ರ ವರೆಗೆ ಚಾಲುಕ್ಯರ ಸಾಮಂತರಾಗಿಯು,ಕ್ರಿ. ಶ. ೭೫೭ರಿಂದ ೯೭೩ರ ವರೆಗೆ ರಾಷ್ಟ್ರಕೂಟರ ಸಾಮಂತರಾಗಿ ಹಾಗೂ ಕಲ್ಯಾಣ ಚಾಲುಕ್ಯರ ಸಾಮಂತರಾಗಿ ಕ್ರಿ. ಶ. ೯೭೩ ರಿಂದ ೯೯೯ರ ವರೆಗೆ ರಾಜ್ಯಭಾರ ಮಾಡಿದನು. ಕುವಲಾಲ(ಕೋಲ್ಹಾರ) ಇದು ಮೊದಲ ರಾಜಧಾನಿ ಎರಡನೇ ರಾಜಧಾನಿ ತಲಕಾಡು ಹಾಗೂ ಮೂರನೇ ರಾಜಧಾನಿ ಮುಕುಂದ (ಚನ್ನಪಟ್ಟಣದ ಬಳಿ) ಆಗಿತ್ತು. ತಲಕಾಡಿನ ಗಂಗರ ಲಾಂಛನ ಅಥವಾ ಮುದ್ರೆ "ಮದಗಜ" ವಾಗಿತ್ತು.
ದಡಿಗ ಅಥವಾ ಕೊಂಗಣಿ ವರ್ಮ(ಕ್ರಿ. ಶ. ೩೫೦-೪೦೦) ಗಂಗ ವಂಶದ ಮೂಲ ಪುರುಷನಾಗಿದ್ದು, ಗಂಗ ಸಾಮ್ರಾಜ್ಯದ ಸ್ಥಾಪಕನಾಗಿದ್ದಾನೆ. ಬಾಣರನ್ನು ಸೋಲಿಸಿದ ಈತನು 'ಬಾಣವಂಶದ ದಾವನಲ' ಎಂಬ ಬಿರುದು ಪಡೆದಿದ್ದನು. ಇವನು ಸುಮಾರು ೫೦ ವರ್ಷಗಳ ಕಾಲ ರಾಜ್ಯವನ್ನಾಳಿದನು. ದುರ್ವಿನೀತ (೫೪೦-೬೦೦) ಗಂಗರ ಅತ್ಯಂತ ಪ್ರಮುಖ ದೊರೆ. ಇವನು ಮಹಾಯೋಧ ಮತ್ತು ಮಹಾ ವಿದ್ವಾಂಸ. ಹಲವಾರು ಪ್ರದೇಶಗಳನ್ನು ಗೆದ್ದು ಸಾಮ್ರಾಜ್ಯವನ್ನು ವಿಸ್ತರಿಸಿದನು. ಇವನು ಶಬ್ದಾವತಾರ ಗ್ರಂಥವನ್ನು ರಚಿಸಿದಲ್ಲದೆ, ಗುಣಾಢ್ಯನ' ಬೃಹತ್ಕಥನ' ಗ್ರಂಥವನ್ನು ಸಂಸ್ಕೃತಕ್ಕೆ ಭಾಷಾಂತರಿಸಿದನು.
ಚಾವುಂಡರಾಯ :-
ಇತನು ಎರಡನೇ ಮಾರಸಿಂಹ (೯೬೩-೭೫) ಎಂಬ ಗಂಗರ ರಾಜನ ಕಾಲದಲ್ಲಿ ಮಂತ್ರಿ ಹಾಗೂ ದಂಡನಾಯಕನಾಗಿದ್ದನು. ಚಾವುಂಡರಾಯ ಅಪ್ರತಿಮ ವೀರ, ಮುತ್ಸದ್ದಿ ಆಡಳಿತಗಾರ, ಧರ್ಮಬೀರು ಹಾಗೂ ವಿದ್ವಾಂಸನೂ ಹೌದು. ಹಾಗಾಗಿ ಪ್ರಸಿದ್ಧನಾಗಿದ್ದಾನೆ. ಈತನಿಗೆ 'ಸತ್ಯ ಯುಧಿಷ್ಠಿರ ಎಂಬ ಬಿರುದು ಇತ್ತು. ಚಾವುಂಡರಾಯನು ಸಂಸ್ಕೃತದಲ್ಲಿ' ಚರಿತ್ರಸಾರ' ಎಂಬ ಗ್ರಂಥವನ್ನು, ಕನ್ನಡದಲ್ಲಿ ೨೪ ಜನ ತೀರ್ಥಂಕರ ರ ಜೀವನ ಕುರಿತು ' ಚಾವುಂಡರಾಯ ಪುರಾಣ ' ಅಥವಾ 'ತ್ರಿಷಷ್ಠಿ ಲಕ್ಷಣ ಮಹಾ ಪುರಾಣ ' ಎಂಬ ಗ್ರಂಥವನ್ನು ರಚಿಸಿದ್ದಾನೆ. ಕ್ರಿ. ಶ. ೯೮೧-೮೨ ರಲ್ಲಿ ಶ್ರವಣಬೆಳಗೊಳದಲ್ಲಿ ವಿಶ್ವವಿಖ್ಯಾತ ೫೮ ಅಡಿ ಎತ್ತರದ ಬಾಹುಬಲಿ ವಿಗ್ರಹವನ್ನು ಸ್ಥಾಪಿಸಿದನು.
ಗಂಗರು ಸುಮಾರು ೬ ಶತಮಾನಗಳ ಕಾಲ ಕನ್ನಡನಾಡನ್ನು ಆಳಿದರು. ಕ್ರಿ. ಶ. ೯೯೯ರಲ್ಲಿ ಚೋಳರ ರಾಜನಾದ ರಾಜೇಂದ್ರ ಚೋಳನು ತಲಕಾಡನ್ನು ವಶಪಡಿಸಿಕೊಳ್ಳುವುದರ ಮೂಲಕ ಗಂಗರ ಆಳ್ವಿಕೆ ಕೊನೆಗೊಂಡಿತು.
No comments:
Post a Comment