Sunday, 25 March 2018

ಲೇಖನ ಚಿನ್ಹೆಗಳು: ಆವರಣ ಅಥವಾ ಕಂಸ( )

ಕಂಸ ಅಥವಾ ಆವರಣ ಚಿಹ್ನೆ- ( )  

ಆವರಣ ಚಿಹ್ನೆ-() – ಒಂದು ಶಬ್ದವನ್ನೋ ಅಥವಾ ವಾಕ್ಯವನ್ನೋ ಹೇಳಿ, ಅದಕ್ಕೆ ಸಮಾನಾರ್ಥಕ ಶಬ್ದವನ್ನೋ ವಾಕ್ಯವನ್ನೋ ಹೇಳುವಾಗ ಈ ಆವರಣ ಚಿಹ್ನೆಯನ್ನು ಉಪಯೋಗಿಸಬೇಕು. ಉದಾಹರಣೆ:- ಒಂದು ದಿನ ಒಂದು ನರಿಯು ಕೊಕ್ಕರೆಯನ್ನು (ನೀರು ಹಕ್ಕಿಯನ್ನು) ತನ್ನ ಮನೆಗೆ ಊಟಕ್ಕೆ ಕರೆಯಿತು.ನೀರನ್ನು ವಿಭಜಿಸಿದರೆ ಆಮ್ಲಜನಕ (ಆಕ್ಸಿಜನ್), ಜಲಜನಕ (ಹೈಡ್ರೋಜನ್) ಗಳು ಉತ್ಪತ್ತಿಯಾಗುತ್ತವೆ.ಶಾಂತಿ (ನನ್ನ ತಂಗಿಯ ಮಗಳು) ಈಗ ಅಮೇರಿಕದಲ್ಲಿ ನೆಲೆಸಿದ್ದಾಳೆ.ಮನೆಯ ಮುಂದೆ ಹೀಗೆ ಬರೆದಿದೆ: ಸರ್ವೇಜನಾಃ ಸುಖಿನೋಭವಂತು (ಎಲ್ಲರೂ ಸುಖಿಗಳಾಗಿರಲಿ).

No comments:

Post a Comment