ಸಮಾನಾರ್ಥಕ ಚಿಹ್ನೆ - (=)
ಸಮಾನಾರ್ಥಕ ಚಿಹ್ನೆ - (=): - ಎರಡು ಪದಗಳ ಅರ್ಥ ಸಮಾನವೆನ್ನುವಾಗ, ಇವೆರಡು ಸೇರಿ ಇದಕ್ಕೆ ಸಮಾನವೆನ್ನುವಾಗ ಸಾಮಾನ್ಯವಾಗಿ ‘=’ ಈ ಚಿಹ್ನೆ ಉಪಯೋಗಿಸುವುದುಂಟು. ಇದಕ್ಕೆ ‘ಸಮಾನಾರ್ಥಕ ಚಿಹ್ನೆ’ ಎನ್ನುವರು. ಉದಾಹರಣೆಗೆ:-
(i) ಅರ್ಥಸಮಾನತೆ ಹೇಳುವುದಕ್ಕೆ ಅಸುರ = ರಾಕ್ಷಸ. ಇಲ್ಲಿ ‘ಅಸುರ’ ಎಂಬ ಪದದ ಅರ್ಥ ಮುಂದಿರುವ ರಾಕ್ಷಸ ಎಂಬ ಪದದ ಅರ್ಥಕ್ಕೆ ಸಮಾನ – ಎಂದು ತಿಳಿಯಬೇಕು.
(ii) ಎರಡೂ ಸೇರಿ ಮುಂದಿನ ಪದಕ್ಕೆ ಸಮಾನ ಎಂಬರ್ಥದಲ್ಲಿ (ಅ) ಅರಸನ + ಮನೆ = ಅರಮನೆ (ಆ) ೮ + ೪ = ೧೨. ಇಲ್ಲಿ ಅರಸನ ಪದವೂ, ಮನೆ ಪದವೂ ಸೇರಿ ಅರಮನೆ ಎಂಬ ಪದದ ಅರ್ಥಕ್ಕೆ ಸಮಾನ ಎಂಬರ್ಥದಲ್ಲಿ ‘=’ ಈ ಚಿಹ್ನೆ ಬರೆಯಲಾಗಿದೆ, ಇದರಂತೆ ಎರಡನೆಯ ಉದಾಹರಣೆಯಲ್ಲಿ ೮ + ೪ ಎರಡೂ ಸೇರಿ ೧೨ ಕ್ಕೆ ಸಮಾನ ಎಂಬರ್ಥದಲ್ಲಿ ಬರುತ್ತದೆ.
No comments:
Post a Comment