ಅಡಕೆಗೆ ಹೋದ ಮಾನ ಆನೆ ಕೊಟ್ಟರೂ ಬಾರದು:-
ವಿವರಣೆ :-
ಆಸೆ ಬುರುಕುತನ ಅನೇಕರ ದೌಬ೯ಲ್ಯ. ಕಂಡದ್ದನ್ನೆಲ್ಲಾ ಕೊಳ್ಳಬೇಕು, ತನಗೆ ತಿಳಿದವರಿಗಿಂತ ಮೇಲ್ದಜೆ೯ಯ ಜೀವನ ನಡೆಸಬೇಕು ಎಂದು ಹಂಬಲಿಸುವವರು ಒಂದಲ್ಲ ಒಂದು ಬಾರಿ ಪ್ರಲೋಭನೆಗೆ ಒಳಗಾಗಿ ಸಣ್ಣ ತಪ್ಪು ಮಾಡುತ್ತಾರೆ. ಇದರಿಂದ ತಾತ್ಕಾಲಿಕ ಲಾಭವನ್ನು ಪಡೆಯುತ್ತಾರೆ. ಇದು ಅವರಲ್ಲಿ ಅಪರಾಧಿ ಮನೋಭಾವವನ್ನು ಹುಟ್ಟುಹಾಕುತ್ತದೆ. ಹೀಗಿದ್ದಾಗ ಮತ್ತೆ ದುಷ್ಟಸಾಹಸಕ್ಕೆ ಕೈ ಹಾಕಬಹುದು. ಯಾವಾಗಲಾದರೂ ಒಮ್ಮೆ ಸಿಕ್ಕಿ ಹಾಕಿಕೊಳ್ಳುತ್ತಾರೆ. ಇದನ್ನೇ ಈ ಗಾದೆ ಅಡಿಕೆಗೆ ಹೋದ ಮಾನ ಎನ್ನುತ್ತದೆ. ತಾನು ನಿರಪರಾಧಿ ತಪ್ಪು ಬೇರೆ ಯಾರೋ ಮಾಡಿ ನನ್ನ ಮೇಲೆ ಹಾಕಿದ್ದಾರೆ ಎನ್ನುತ್ತಾ ತನ್ನನ್ನು ತಾನು ರಕ್ಷಿಸಿಕೊಳ್ಳಲು ಹೆಣಗಾಡುತ್ತಾರೆ. ಇಂತಹ ಜನರ ಬಗ್ಗೆ ನಾವು ದಿನನಿತ್ಯ ಪತ್ರಿಕೆಗಳಲ್ಲಿ, ಟಿವಿಯಲ್ಲಿ ನೋಡುತ್ತೇವೆ. ಸಣ್ಣ ಆಸೆಗೆ ಬಲಿಯಾಗಿ, ಹಿಂದಕ್ಕೆ ಪಡೆಯಲಾಗದ ಮಾನವನ್ನು ಕಳೆದುಕೊಳ್ಳುವುದು ತಪ್ಪು ಎನ್ನುತ್ತದೆ ಈ ಗಾದೆ.
No comments:
Post a Comment