ಗಾಂಧೀಜಿಯವರು ಅಸ್ಪೃಶ್ಯರಿಗೆ ನೀಡಿದ ಪ್ರತ್ಯೇಕ ಮತೀಯ ಪ್ರಾತಿನಿಧ್ಯದ ವಿರುದ್ಧ ತಾನು ಇದ್ದ ಪೂನಾದ ಯರವಾಡ ಜೈಲಿನಲ್ಲಿ ಉಪವಾಸ ಸತ್ಯಾಗ್ರಹ ಕೈಗೊಂಡರು. ಗಾಂಧೀಜಿ ಹರಿಜನರನ್ನು ಹಿಂದೂಗಳಿಂದ ಪ್ರತ್ಯೇಕಿಸುವ ಬ್ರಿಟಿಷರ ಕುಟಿಲ ನೀತಿಯನ್ನು ಸಹಿಸಲಿಲ್ಲ. ಕೊನೆಗೆ ಗಾಂಧಿ ಮತ್ತು ಅಂಬೇಡ್ಕರರ ನಡುವೆ ೧೯೩೨ರಲ್ಲಿ ಪೂನಾ ಒಪ್ಪಂದವಾಗಿ ಗಾಂಧೀಜಿ ಉಪವಾಸವನ್ನು ನಿಲ್ಲಿಸಿದರು. ಪೂನಾ ಒಪ್ಪಂದದಂತೆ ಹರಿಜನರಿಗೆ ಜಂಟಿ ಮತ ಕ್ಷೇತ್ರ ಇರುವಂತೆ ಒಪ್ಪಲಾಯಿತು. ಶಾಸಕಾಂಗಗಳಲ್ಲಿ ಅಸ್ಪೃಶ್ಯರಿಗೆ ಕೊಟ್ಟಿದ್ದ ಪ್ರಾಂತ್ಯ ವಿಧಾನಸಭೆಗಳ ಮೀಸಲು ಸ್ಥಾನಗಳನ್ನು ೭೧ ರಿಂದ ೧೪೮ಕ್ಕೆ ಹೆಚ್ಚಿಸಿ ಪ್ರತಿಯಾಗಿ ಅವರಿಗೆ ನೀಡಿದ್ದ ಪ್ರತ್ಯೇಕ ಚುನಾವಣಾ ಕ್ಷೇತ್ರವನ್ನು ಕೈ ಬಿಡಲಾಯಿತು.
೧೯೩೨ರಲ್ಲಿ ಲಂಡನ್ನಲ್ಲಿ ೩ನೇ ಚಕ್ರಗೋಷ್ಠಿ ನಡೆಯಿತು. ಇದರಲ್ಲಿ ಕಾಂಗ್ರೆಸ್ ಭಾಗವಹಿಸಲಿಲ್ಲ. ಅದು ಭಾರತದ ಸಂವಿಧಾನಕ್ಕೆ ಸಂಬಂಧಿಸಿದ ಶ್ವೇತ ಪತ್ರವನ್ನು ಸಿದ್ಧಪಡಿಸಿ ಬ್ರಿಟಿಷ್ ಪಾರ್ಲಿಮೆಂಟುಗೆ ಒಪ್ಪಿಸಿತು. ಅದಕ್ಕೆ ಪಾರ್ಲಿಮೆಂಟ್ ಒಪ್ಪಿಗೆ ಕೊಟ್ಟ ನಂತರ ಅದು ೧೯೩೫ರ ಭಾರತ ಸರ್ಕಾರಿ ಕಾಯ್ದೆಯಾಗಿ ಹೊರ ಬಂದಿತು.
Monday, 19 March 2018
ಪೂನಾ ಒಪ್ಪಂದ (೧೯೩೨)
Subscribe to:
Post Comments (Atom)
-
ಅನುಕರಣಾವ್ಯಯ :- ಅನುಕರಣಾವ್ಯಯ :- ನಮಗೆ ಕೇಳಿಸಿದಂತಹ ಮತ್ತು ಕಾಣಿಸಿದಂತಹ ಧ್ವನಿ ಮತ್ತು ವಸ್ತುಗಳನ್ನು ಕೇಳಿಸಿದಂತೆ, ಕಾಣಿಸಿದಂತೆ ಪುನಃ ಅನುಕ...
-
ನಾಳೆ ಎಂದವನ ಮನೆ ಹಾಳು:- ಕೆಲವರಿಗೆ ಯಾವುದೇ ಕೆಲಸ ಕೊಟ್ಟರು ಅದನ್ನು ಅಂದೆ ಮಾಡದೆ ನಾಳೆಗೆ ಮುಂದೂಡುವ ಪ್ರವೃತ್ತಿಯನ್ನು ಬೆಳೆಸಿಕೊಂಡಿರುತ್ತಾರೆ. ಹೀಗಾಗ...
-
ಕಮಿಷನರುಗಳ ಆಳ್ವಿಕೆ :- ಕ್ರಿ.ಶ. ೧೮೩೧ ರಿಂದ ಸುಮಾರು ೫೦ ವರ್ಷಗಳ ಕಾಲ ಮೈಸೂರು ರಾಜ್ಯದ ಆಡಳಿತವನ್ನು ಬ್ರಿಟಿಷ್ ಕಮಿಷನರ್ ಗಳು ಮಾಡಿದರು. ಪ್ರಾರಂಭದಲ್ಲಿ...
No comments:
Post a Comment