ಭಾರತಕ್ಕೆ ಜಲಮಾರ್ಗ ಕಂಡು ಹಿಡಿದ ನಾವಿಕನೇ ವಾಸ್ಕೋ ಡ ಗಾಮ. ಪೋರ್ಚುಗಲ್ ನಾವಿಕನಾದ ಈತ ಜುಲೈ ೮,೧೪೯೭ರಲ್ಲಿ ಲಿಸ್ಟನ್ ನಿಂದ ಪ್ರಯಾಣ ಆರಂಭಿಸಿ ಕೇಪ್ ಆಫ್ ಗುಡ್ ಹೋಪ್ ಭೂಶಿರವನ್ನು ತಲುಪಿದನು. ನಂತರ ಮೊಜಾಂಬಿಕ್ ತಲುಪಿ ಅಲ್ಲಿಂದ ಪೂರ್ವಕ್ಕೆ ಸಂಚರಿಸಿ ಅರಬ್ಬ್ ನಾವಿಕನೊಬ್ಬನ ಸಹಾಯದಿಂದ ಅರಬ್ಬೀ ಸಮುದ್ರದ ಮೂಲಕ ಮೇ ೧೭,೧೪೯೮ರಂದು ಭಾರತದ ಕೇರಳದ ಕಲ್ಲಿಕೋಟೆಯನ್ನು ಬಂದು ತಲುಪಿದನು. ಕಲ್ಲಿಕೋಟೆಯ ಹಿಂದೂ ರಾಜ
ಜಾಮೋರಿನ್ನು ವಾಸ್ಕೋ ಡ ಗಾಮನನ್ನು ಅದರಿಂದ ಬರಮಾಡಿಕೊಂಡು ಪೋರ್ಚುಗೀಸರಿಗೆ ವ್ಯಾಪಾರ ಅನುಮತಿ ಕೊಟ್ಟನು. ಆಗ ಮಲಬಾರಿನಲ್ಲಿ ಸಿಗುವ ವಸ್ತುಗಳನ್ನು ಸಮೀಕ್ಷಿಸಿದ ವಾಸ್ಕೋ ಡ ಗಾಮನು ಕಲ್ಲಿಕೋಟೆಯಲ್ಲಿ ಒಂದು ವ್ಯಾಪಾರ ಕೋಟೆಯನ್ನು ತೆರೆದನು. ೬ ತಿಂಗಳ ನಂತರ ತನ್ನ ಪ್ರಯಾಣ ವೆಚ್ಚದ ೬೦ ಪಟ್ಟು ಅಧಿಕ ಸಂಪತ್ತಿನೊಂದಿಗೆ ಸ್ವದೇಶಕ್ಕೆ ಹಿಂತಿರುಗಿದನು.
Tuesday, 20 March 2018
ವಾಸ್ಕೋ ಡ ಗಾಮ(೧೪೬೯-೧೫೨೪)
Subscribe to:
Post Comments (Atom)
-
ಅನುಕರಣಾವ್ಯಯ :- ಅನುಕರಣಾವ್ಯಯ :- ನಮಗೆ ಕೇಳಿಸಿದಂತಹ ಮತ್ತು ಕಾಣಿಸಿದಂತಹ ಧ್ವನಿ ಮತ್ತು ವಸ್ತುಗಳನ್ನು ಕೇಳಿಸಿದಂತೆ, ಕಾಣಿಸಿದಂತೆ ಪುನಃ ಅನುಕ...
-
ನಾಳೆ ಎಂದವನ ಮನೆ ಹಾಳು:- ಕೆಲವರಿಗೆ ಯಾವುದೇ ಕೆಲಸ ಕೊಟ್ಟರು ಅದನ್ನು ಅಂದೆ ಮಾಡದೆ ನಾಳೆಗೆ ಮುಂದೂಡುವ ಪ್ರವೃತ್ತಿಯನ್ನು ಬೆಳೆಸಿಕೊಂಡಿರುತ್ತಾರೆ. ಹೀಗಾಗ...
-
ಕಮಿಷನರುಗಳ ಆಳ್ವಿಕೆ :- ಕ್ರಿ.ಶ. ೧೮೩೧ ರಿಂದ ಸುಮಾರು ೫೦ ವರ್ಷಗಳ ಕಾಲ ಮೈಸೂರು ರಾಜ್ಯದ ಆಡಳಿತವನ್ನು ಬ್ರಿಟಿಷ್ ಕಮಿಷನರ್ ಗಳು ಮಾಡಿದರು. ಪ್ರಾರಂಭದಲ್ಲಿ...
No comments:
Post a Comment