ಗುಪ್ತ ಸಾಮ್ರಾಜ್ಯವು ಕ್ಷೀಣಿಸಿದ ಕಾರಣ ಅದು ಹಲವಾರು ಸಣ್ಣ ಸಂಸ್ಥಾನಗಳಾಗಿ ಸಿಡಿಯಿತು. ಹಾಗೂ ಪ್ರಬಲವಾದ ಹರ್ಷವರ್ಧನನು ಕನೌಜ್ ನ ರಾಜನಾಗಿ ಕ್ರಿ. ಶ. ೬೦೬ರಲ್ಲಿ ಸಿಂಹಾಸನವೇರಿದನು. ಇವನು ಉತ್ತರಭಾರತವನ್ನು ಆಳಿದ ಕೊನೆಯ ಹಿಂದೂ ದೊರೆ. ಅವನು ತನ್ನ ಸಾಮ್ರಾಜ್ಯವನ್ನು ಬಂಗಾಳ, ಮಾಳ್ವ, ಪೂರ್ವ ರಾಜಸ್ತಾನ ಹಾಗೂ ಅಸ್ಸಾಂನವರೆಗಿನ ಗಂಗಾ ಪ್ರಸ್ಥಭೂಮಿಯನ್ನು ಗೆಲ್ಲುವ ಮೂಲಕ ವಿಸ್ತರಿಸಿದನು. ಅವನು ಕಲೆ ಹಾಗೂ ಸಾಹಿತ್ಯದ ಆರಾಧಕನಾಗಿದ್ದನು. 'ಹರ್ಷಚರಿತ' ಮತ್ತು 'ಕಾದಂಬರಿ' ಕೃತಿಗಳನ್ನು ಬರೆದ ಬಾಣಭಟ್ಟನು ಇವನ ಆಸ್ಥಾನದಲ್ಲಿದ್ದನು. ಚೀನಾದ ಪ್ರವಾಸಿ ಹ್ಯೂಯೆನ್ ತ್ಸಾಂಗನು ಇವನ ಅವಧಿಯಲ್ಲಿ ಭಾರತ ಪ್ರವಾಸ ಮಾಡಿದನು. ಹರ್ಷವರ್ಧನನು ಕ್ರಿ. ಶ. ೬೪೭ರಲ್ಲಿ ತೀರಿಕೊಂಡನು.
No comments:
Post a Comment