Sunday, 25 March 2018

ಗಾದೆಮಾತು :ಉಕ್ಕಿ ಹೋದ ಹಾಲಿಗೆ ಬಿಕ್ಕಿ ಅತ್ತರೇನು ಫಲ

ಉಕ್ಕಿಹೋದ ಹಾಲಿಗೆ ಬಿಕ್ಕಿ ಅತ್ತರೇನು ಫಲ?

ವಿವರಣೆ :-
              ಯಾವುದೇ ಕೆಲಸವನ್ನು ಮಾಡಬೇಕಾದರೂ ಯೋಚಿಸಿ ಮಾಡಬೇಕು. ತರಾತುರಿಯಲ್ಲಿ, ಗಾಬರಿಯಿಂದ ಮಾಡಿದ ಕೆಲಸ ಎಡವಟ್ಟಾಗುವುದರಲ್ಲಿ ಸಂದೇಹವೇ ಇಲ್ಲ. ಆತುರಗಾರನಿಗೆ ಬುದ್ದಿಮಟ್ಟ ಎನ್ನುವ ಮಾತೂ ಇದೇ ಅಭಿಪ್ರಾಯವನ್ನು ಸೂಚಿಸುತ್ತದೆ ಥಟ್ ಅಂತ ಏನನ್ನಾದರೂ ಮಾಡಿ, ನಿಧಾನವಾಗಿ ಪಶ್ಚಾತ್ತಾಪ ಪಡು ಎನ್ನುವ ಇಂಗ್ಲಿಷ್ ಗಾದೆಯೂ ಇದೇ ಅಥ೯ವನ್ನು ಕೊಡುತ್ತದೆ. ದಿನನಿತ್ಯದ ಆಗುಹೋಗುಗಳನ್ನು ಉದಾಹರಣೆಯಾಗಿಟ್ಟುಕೊಂಡು, ಮನನ ಯೋಗ್ಯ ಮಾತನ್ನು ಹೇಳುವುದು ಗಾದೆಗಳ ಸೊಗಸುಗಳಲ್ಲಿ ಒಂದು. ಹಾಲು ಕಾಯಿಸುವುದು, ಉಕ್ಕಿಸುವುದು ದೈನಂದಿನ ಘಟನೆ. ಉಕ್ಕಿ ಹರಿದುಹೋಗದ ಹಾಗೆ ಎಚ್ಚರವಹಿಸಬೇಕಾದದ್ದು ಅಗತ್ಯ.ಆದರೆ ಕೆಲವೊಮ್ಮೆ ಅಚಾತುಯ೯ದಿಂದ ಎಚ್ಚರವಿಲ್ಲದ್ದರಿಂದ ಹಾಲು ಉಕ್ಕುತ್ತದೆ. ನಂತರ ಅದಕ್ಕಾಗಿ ಅತ್ತು ಪ್ರಯೋಜನವಿಲ್ಲ. ಈ ಸರಳ ಘಟನೆಯಿಂದ ನಾವು ಕಲಿಯಬೇಕಾದ ಪಾಠ ಇದು – ಏನನ್ನೇ ಮಾಡಬೇಕಾದರೂ ಆಲೋಚನೆ ಅತ್ಯಗತ್ಯ. ಮಾಡಿದ ಮೇಲೆ ಮರುಗುವದಕ್ಕಿಂತ ಮಾಡದಿರುವುದೇ ಲೇಸಲ್ಲವೇ?

No comments:

Post a Comment