-:ದೇಶಕ್ಕೆ ಮಹಾರಾಜನಾದರೂ ಅಮ್ಮನಿಗೆ ಮಗನೇ:-
ಪ್ರತಿಯೊಬ್ಬರ ಬದುಕಿನಲ್ಲೂ ಬೇರೆ ಬೇರೆ ರೀತಿಯ ಸಂಬಂದಗಳಿರುತ್ತವೆ. ತಂದೆ ತಾಯಿ ಮಗುವಿನ ಸಂಬಂಧ, ಗಂಡ ಹೆಂಡತಿ ಸಂಬಂಧ, ಸ್ನೇಹಿತರ ನಡುವಿನ ಆತ್ಮೀಯತೆ, ಗುರುಶಿಷ್ಯ ಸಂಬಂಧ, ದೇವರು ಭಕ್ತರ ಸಂಬಂಧ, ಸಹೋದ್ಯೋಗಿ ಮೇಲಾಧಿಕಾರಿಗಳ ಸಂಬಂಧ ಮುಂತಾದವು. ಈ ಎಲ್ಲಾ ಸಂಬಂಧಗಳ ಪೈಕಿ ತಾಯಿ ಮಗುವಿನ ಸಂಬಂಧ ಪವಿತ್ರವಾದದ್ದು. ಮಗುವನ್ನು ಭೂಮಿಗೆ ತಂದ ತಾಯಿಗಿಂತ ಹಿರಿಯರು, ಮಾಗ೯ದಶ೯ಕರು, ಹಿತೈಷಿಗಳು ಬೇರಾರು ಇಲ್ಲ. ರಾಜನಿಗೆ ಪ್ರಜೆಗಳೆಲ್ಲರೂ ಮಕ್ಕಳೆ. ಅವರ ಪಾಲನೆಯೇ ಅವನ ಕತ೯ವ್ಯ. ಏನೇ ಆದರೂ ರಾಜ, ಅವನ ತಾಯಿಗೆ ಮಗ ಅಷ್ಟೆ. ಅವಳಿಗೆ ಅವನ ಅಧಿಕಾರ, ಅಂತಸ್ತು, ಐಶ್ವಯ೯ ಯಾವುದು ಮುಖ್ಯವಲ್ಲ. ಅವನ ಯೋಗಕ್ಷೇಮವಷ್ಟೇ ಅವಳು ವಿಚಾರಿಸುತ್ತಾಳೆ. ತಾಯಿ ಮಗುವಿನ ಅನುಬಂಧ ಮನುಷ್ಯರಲ್ಲಿ ಮಾತ್ರವೇ ಅಲ್ಲದೆ ಇತರೆ ಪ್ರಾಣಿವಗ೯ದಲ್ಲೂ ಕಾಣಸಿಗುತ್ತದೆ. ಇಂತಹ ಸಂಬಂಧದ ಮಹತ್ವವನ್ನು ತಿಳಿಸುತ್ತದೆ.
Sunday, 25 March 2018
ಗಾದೆಮಾತು : ದೇಶಕ್ಕೆ ಮಹಾರಾಜನಾದರೂ ಅಮ್ಮನಿಗೆ ಮಗನೇ:
Subscribe to:
Post Comments (Atom)
-
ಅನುಕರಣಾವ್ಯಯ :- ಅನುಕರಣಾವ್ಯಯ :- ನಮಗೆ ಕೇಳಿಸಿದಂತಹ ಮತ್ತು ಕಾಣಿಸಿದಂತಹ ಧ್ವನಿ ಮತ್ತು ವಸ್ತುಗಳನ್ನು ಕೇಳಿಸಿದಂತೆ, ಕಾಣಿಸಿದಂತೆ ಪುನಃ ಅನುಕ...
-
ನಾಳೆ ಎಂದವನ ಮನೆ ಹಾಳು:- ಕೆಲವರಿಗೆ ಯಾವುದೇ ಕೆಲಸ ಕೊಟ್ಟರು ಅದನ್ನು ಅಂದೆ ಮಾಡದೆ ನಾಳೆಗೆ ಮುಂದೂಡುವ ಪ್ರವೃತ್ತಿಯನ್ನು ಬೆಳೆಸಿಕೊಂಡಿರುತ್ತಾರೆ. ಹೀಗಾಗ...
-
ಕಮಿಷನರುಗಳ ಆಳ್ವಿಕೆ :- ಕ್ರಿ.ಶ. ೧೮೩೧ ರಿಂದ ಸುಮಾರು ೫೦ ವರ್ಷಗಳ ಕಾಲ ಮೈಸೂರು ರಾಜ್ಯದ ಆಡಳಿತವನ್ನು ಬ್ರಿಟಿಷ್ ಕಮಿಷನರ್ ಗಳು ಮಾಡಿದರು. ಪ್ರಾರಂಭದಲ್ಲಿ...
No comments:
Post a Comment