Monday, 19 March 2018

ವೇದಗಳ ಕಾಲ: ಆರ್ಯನ್ನರು

                   ಭಾರತಕ್ಕೆ ವಲಸೆ ಬಂದ ಜನಾಂಗದವರಲ್ಲಿ ಅತಿ ಮುಖ್ಯವಾದವರು ಆರ್ಯನ್ನರು. ಆರ್ಯನ್ನರು ಮಧ್ಯೆ ಏಷ್ಯಾದಿಂದ ಭಾರತಕ್ಕೆ ಸುಮಾರು ಕ್ರಿ. ಪೂ. ೨೦೦೦ ದ ಅವಧಿಯಲ್ಲಿ ಬಂದರು ಎಂದು ನಂಬಲಾಗಿದೆ. ಅವರು ಮೊದಲಿಗೆ ಪಂಜಾಬನ್ನು ವಶಪಡಿಸಿಕೊಂಡು ವಾಸಿಸಲು ಪ್ರಾರಂಭಿಸಿ ನಂತರ ಗಂಗಾ ಮತ್ತು ಬ್ರಹ್ಮಪುತ್ರ ನದಿಯ ತೀರದಾದ್ಯಂತ ವಾಸಿಸಲಾರಂಭಿಸಿ ಇಡೀ ಉತ್ತರ ಭಾರತವನ್ನು ಆಕ್ರಮಿಸಿಕೊಂಡರು. ಅವರು ಸೂರ್ಯ, ನೀರು, ಬೆಂಕಿ, ಇತ್ಯಾದಿಯ ಆರಾಧಕರಾಗಿದ್ದರು. ಆರ್ಯರೇ ಹಿಂದೂ ಧರ್ಮದ ಸ್ಥಾಪಕರಿರಬಹುದೆಂದು ನಂಬಲಾಗಿದೆ. ಆರ್ಯರ ಕಾಲದ ಆರು ಧಾರ್ಮಿಕ ಪುಸ್ತಕಗಳು ಅವರ ಸಂಸ್ಕೃತಿ, ನಂಬಿಕೆಗಳು ಹಾಗೂ ಸಂಪ್ರದಾಯದ ಬಗೆಗೆ ಬೆಳಕು ಚೆಲ್ಲುತ್ತದೆ.

ವೇದಗಳು:
           ವೇದಗಳು ಅತ್ಯಂತ ಹಳೆಯ ಹಿಂದೂ ಧಾರ್ಮಿಕ ಗ್ರಂಥಗಳಾಗಿವೆ. ಒಟ್ಟು ವೇದಗಳ ಸಂಖ್ಯೆ ನಾಲ್ಕು. ಅವೆಂದರೆ :
೧.ಋಗ್ವೇದ: ಋಗ್ವೇದವು ೪ ವೇದಗಳಲ್ಲೆಲ್ಲಾ ಅತ್ಯಂತ ಹಳೆಯ ವೇದವಾಗಿದ್ದು, ಇದು ದೇಶದಲ್ಲಿ ಮೊದಲ ಹಂತದಲ್ಲಿ ವಾಸವಾಗಿದ್ದ ಆರ್ಯನ್ನರ ಜೀವನ ಮತ್ತು ನಾಗರಿಕತೆಯ ಬಗೆಗೆ ವಿವರ ನೀಡುತ್ತದೆ. ಇದು ಒಟ್ಟು ೧೦೨೮ ದೇವರ ಸ್ತೋತ್ರಗಳನ್ನು ಒಳಗೊಂಡಿದೆ.

೨.ಸಾಮವೇದ: ಈ ವೇದವು ಮುಖ್ಯವಾಗಿ ಸಂಗೀತಕ್ಕೆ ಅರ್ಪತವಾಗಿದ್ದು, ೧೫೪೯ ದೇವರ ಸ್ತೋತ್ರಗಳನ್ನು ಒಳಗೊಂಡಿದೆ.

೩.ಯಜುರ್ವೇದ: ಈ ವೇದವು ಯಜ್ಞ, ನರಬಲಿ, ಇತ್ಯಾದಿಗಳನ್ನು ನೆರವೇರಿಸುವ ಬಗೆಗಿನ ಮಂತ್ರಗಳನ್ನು ಒಳಗೊಂಡಿದೆ.

೪. ಅಥರ್ವಣ ವೇದ: ಅಥರ್ವಣ ವೇದವು ೨೦ ಪುಸ್ತಕಗಳಾಗಿ ವಿಭಾಗಿಸಲ್ಪಟ್ಟಿದ್ದು, ೭೩ ಸ್ತೋತ್ರಗಳನ್ನು ಒಳಗೊಂಡಿದೆ.

ಬ್ರಾಹ್ಮಣಗಳು:
           ಇವು ಆರ್ಯನ್ನರ ಸಾಮಾಜಿಕ - ರಾಜಕೀಯ ಜೀವನದ ಮೇಲೆ ಬೆಳಕು ಚೆಲ್ಲುತ್ತವೆ.

ಅರಣ್ಯಕಗಳು:
           ಅರಣ್ಯಕಗಳು ಬ್ರಾಹ್ಮಣಗಳ ಮುಕ್ತಾಯದ ಭಾಗಗಳಾಗಿದ್ದು, ಇವು ಆಧ್ಯಾತ್ಮಯೋಗ ಹಾಗೂ ತಾತ್ವಿಕ ವಿಚಾರಗಳನ್ನು ಒಳಗೊಂಡಿವೆ.

ಉಪನಿಷತ್ ಗಳು:
            ಉಪನಿಷತ್ತುಗಳು ಹಿಂದೂ ತಾತ್ವಿಕತೆಯ ತಳಹದಿಯಾಗಿದ್ದು, ಇವು ದೇವರು, ಆತ್ಮ, ವಸ್ತು, ಹುಟ್ಟು, ಸಾವು, ಪುನರ್ಜನ್ಮ ಇತ್ಯಾದಿಗಳ ಬಗೆಗೆ ಆಳವಾದ ಜ್ಞಾನ ಹಾಗೂ ವಿಚಾರಗಳನ್ನು ತಿಳಿಸುತ್ತದೆ.

ಮನುಸ್ಮೃತಿ:
             ಮನುಸ್ಮೃತಿಯನ್ನು ಬರೆದವರು ಮನು ಎಂಬಾತನಾಗಿದ್ದು, ಈತ ಆರ್ಯರ ಕಾಲದ ಮಹಾನ್ ಕಾನೂನು ರೂಪಕನಾಗಿದ್ದಾನೆ. ಮನುಸ್ಮೃತಿಯ ರಾಜರ ಕರ್ತವ್ಯಗಳು, ನಾಲ್ಕು ಆಶ್ರಮಗಳಾದ ಬ್ರಹ್ಮಚರ್ಯ, ಗೃಹಸ್ಥ, ವಾನಪ್ರಸ್ಥ ಹಾಗೂ ಸನ್ಯಾಸದ ಬಗೆಗೆ ವಿವರ ನೀಡುತ್ತದೆ.

ಪುರಾಣಗಳು:
              ಪುರಾಣಗಳು ಆರ್ಯನ್ನರ ಧಾರ್ಮಿಕ ಹಾಗೂ ಐತಿಹಾಸಿಕ ವಿವರಗಳನ್ನು ನೀಡುತ್ತವೆ. ಒಟ್ಟು ಹದಿನೆಂಟು ಪುರಾಣಗಳು ಇದ್ದು, ಅವುಗಳಲ್ಲಿ ಭಗವತ್ ಪುರಾಣವು ಪ್ರಮುಖವಾಗಿದೆ.

No comments:

Post a Comment