Wednesday, 28 March 2018

ಚಿತ್ರದುರ್ಗದ ಪಾಳೆಯಗಾರರು

ಚಿತ್ರದುರ್ಗದ ಪಾಳೆಯಗಾರರು:-
               ಚಿತ್ರದುರ್ಗದ ಪಾಳೆಪಟ್ಟಿನ ಸ್ಥಾಪಕ ತಿಮ್ಮಣ್ಣನಾಯಕ ಎಂಬುವನು. ಇವನು ತಿರುಪತಿಯ ಮೇದಕೇರಿಯಿಂದ ಬಂದವನು ಎಂದು ನಂಬಲಾಗಿದೆ. ಹೀಗಾಗಿ ಚಿತ್ರದುರ್ಗದ ಅರಸರಿಗೆ ಮದಕರಿನಾಯಕರೆಂಬ ಹೆಸರು ಬಂತೆಂದು ಪ್ರತೀತಿ. ತಿಮ್ಮಣ್ಣನಾಯಕನು ಸುತ್ತಮುತ್ತಲಿನ ನಾಯಕರನ್ನು ಸೋಲಿಸಿ ಆಳುತಿದ್ದು ನಂತರ ವಿಜಯನಗರದ ಅರಸ ಸಾಳುವ ನರಸಿಂಹನ ಕಾಲದಲ್ಲಿ ವಿಜಯನಗರದ ಸಾಮಂತನಾದನು. ಚಿತ್ರದುರ್ಗದ ಕೋಟೆಯನ್ನು ನಿರ್ಮಿಸಿ ಕ್ರಿ. ಶ. ೧೪೯೫ ರಲ್ಲಿ ಅಲ್ಲಿಯ ನಾಯಕನಾಗಿ ಆಳಲಾರಂಬಿಸಿದನು. ನಂತರ ಇವನ ಮಗ ಓಬಣ್ಣನಾಯಕ( ಕ್ರಿ. ಶ. ೧೫೧೦-೨೫) ಅಧಿಕಾರಕ್ಕೆ ಬಂದನು. ಅನಂತರದ ಕಸ್ತೂರಿ ರಂಗಪ್ಪನಾಯಕ (ಕ್ರಿ. ಶ.೧೫೨೫-೭೪) ಎರಡನೇ ಮದಕರಿನಾಯಕ, ಓಬಣ್ಣನಾಯಕ, ಮೂರನೇ ಮದಕರಿನಾಯಕ ಮುಂತಾದವರು ಅಧಿಕಾರ ನಡೆಸಿದರು. ೧೭೫೫ ರಲ್ಲಿ ಸಿಂಹಾಸನವೇರಿದ ಐದನೇ ಮದಕರಿನಾಯಕ (ಕ್ರಿ. ಶ. ೧೭೫೫-೧೭೭೯) ಚಿತ್ರದುರ್ಗದ ಪಾಳೆಯಗಾರಲ್ಲೆಲ್ಲಾ ಅತೀ ಶ್ರೇಷ್ಠನಾದವನು. ಈತನು ಸಿಂಹಾಸನವೇರಿದಾಗ  ಹನ್ನೆರಡು ವರ್ಷವಷ್ಟೇ ವಯಸ್ಸಾಗಿತ್ತು. ಶತೃಗಳ ಕಾಟ ವಿಪರೀತವಾಗಿತ್ತು. ಎಲ್ಲಾ ಶತೃಗಳ ಸಮರ್ಥವಾಗಿ ಎದುರಿಸಿದನು. ಪ್ರಾಪ್ತ ವಯಸ್ಕನಾದ ಮೇಲೆ ಇವನು ರಾಯದುರ್ಗದ ಕೃಷ್ಣಪ್ಪ ಹಾಗೂ ಅವನ ಶತೃ  ಸೈನ್ಯವನ್ನು ಸೋಲಿಸಿದನು. ಇವನನ್ನು ಸೋಲಿಸಲು ಬಂದ ಹೈದರಾಲಿಯೊಡನೆ ಎರಡು ಲಕ್ಷ ವರಹ ಪೊಗದಿ ನೀಡಲು ಸಮ್ಮತಿಸಿ ಸ್ನೇಹ ಬೆಳೆಸಿದನು. ಹೈದರಾಲಿಯನ್ನು ಸೋಲಿಸಲು ಬಂದಿದ್ದ ಮರಾಠರನ್ನು ಮದಕರಿನಾಯಕನು ಸೋಲಿಸಿದನು. ಸ್ನೇಹದಿಂದಿದ್ದ ಹೈದರಾಲಿಯೊಡನೆ ಇವನ ಸ್ನೇಹ ಹಳಸಿತು. ಹಾಗಾಗಿ ಹೈದರಾಲಿಯು ಮದಕರಿನಾಯಕನ ಮೇಲೆ ಸತತವಾಗಿ ಹಗೆ ಸಾಧಿಸಿದನು. ಮದಕರಿನಾಯಕನನ್ನು ಸೋಲಿಸಲು ಮಾಡಿದ ಅವನ ಪ್ರಯತ್ನಗಳಿಗೆ ಯಶ ಸಿಕ್ಕಿರಲಿಲ್ಲ. ನಂತರ ನಡೆದ ಯುದ್ಧದಲ್ಲಿ ಮದಕರಿನಾಯಕನ ಸೈನಿಕರ ಪಿತೂರಿಯಿಂದ ಕ್ರಿ. ಶ. ೧೭೭೯ರಲ್ಲಿ ಹೈದರಾಲಿಗೆ ಸೋತು ಸೆರೆ ಸಿಕ್ಕ ಅವನು ಶ್ರೀರಂಗಪಟ್ಟಣದ ಸೆರೆಮನೆಯಲ್ಲಿ ಕಾಲವಾದನು.

No comments:

Post a Comment