ಕಳ್ಳನನ್ನು ನಂಬಿದರೂ ಕುಳ್ಳನನ್ನು ನಂಬಬೇಡ
ವಿವರಣೆ :-
ಕಳ್ಳರಿಗಿಂತ ಕುಳ್ಳರು ನಂಬಿಕೆಗೆ ಅಹ೯ರಲ್ಲ ಎನಿಸಿರಬೇಕು. ಅದಕ್ಕಾಗಿಯೇ ಈ ಗಾದೆ ಪ್ರಚಾರಕ್ಕೆ ಬಂದಿದೆ. ಕುಳ್ಳನ ಕರೆಯಬಾರದು ಕಳ್ಳನ ಕರೆಯಬಹುದು ಎನ್ನುವುದು ಸಮಾನಾಥ೯ಕ ಅಚ್ಚ ಕನ್ನಡ ಗಾದೆ. ವಾಮನಾವತಾರದ ಪೌರಾಣಿಕ ಕಥೆಯನ್ನು ಇಲ್ಲಿ ನೆನಪಿಸಿಕೊಳ್ಳಬಹುದು. ರಾಕ್ಷಸರಾಜ ಮಹಾಬಲಿ ವಿಷ್ಣುವಿನ ಭಕ್ತ ಮತ್ತು ಮಹಾದಾನಿ, ಬಲಶಾಲಿಯಾಗಿ ಬೆಳೆಯುತ್ತಿದ್ದ ಇವನನ್ನು ನಿಯಂತ್ರಿಸಲು, ಮಹಾವಿಷ್ಣುವು ವಾಮನಾವತಾರ (ಕುಳ್ಳಾಗಿರುವುದು)ವನ್ನು ತಾಳಿ ಮಹಾಬಲಿಯ ಆಸ್ಥಾನಕ್ಕೆ ಬಂದ. ಮೂರು ಹೆಜ್ಜೆಗಳನ್ನು ಇಡುವಷ್ಟು ಜಾಗ ದಾನವನ್ನಾಗಿ ಕೇಳಿದ. ದಾನಶೂರ ಮಹಾಬಲಿ ಇದಕ್ಕೆ ಒಪ್ಪಿದ ತನ್ನ ಮೊದಲನೆಯ ಹೆಜ್ಜೆಯಿಂದ ಭೂಮಿಯನ್ನೆಲ್ಲಾ, ಎರಡನೆಯ ಹೆಜ್ಜೆಯಿಂದ ಆಕಾಶವನ್ನೆಲ್ಲಾ ಆಕ್ರಮಿಸಿದ. ಮೂರನೆಯ ಹೆಜ್ಜೆಯನ್ನು ಎಲ್ಲಿಡಲಿ? ಅಂದಾಗ ನನ್ನ ತಲೆಯ ಮೇಲೆ ಅಂದ ಮಹಾಬಲಿ. ವಿಷ್ಣುವು ಹಾಗೆಯೇ ಮಾಡಿ ಅವನನ್ನು ತುಳಿದು ಹಾಕಿದ. ಇದರಿಂದ, ಕುಳ್ಳಾಗಿರುವವರೆಲ್ಲ ಕೆಟ್ಟದನ್ನೇ ಮಾಡುತ್ತಾರೆ ಎಂದು ಭಾವಿಸಲಾಗುವುದಿಲ್ಲ. ಆದರೆ ಮೇಲಿನ ಗಾದೆಯ ಪ್ರಕಾರ ಕುಳ್ಳರು (ಗಿಡ್ಡರು) ನಂಬಿಕೆಗೆ ಅಹ೯ರಲ್ಲ.
No comments:
Post a Comment