ಛೋಟಾಳಿಗೊಬ್ಬ ಮೋಟಾಳು. :-
ಶ್ರೀಮಂತರ ಮನೆಯಲ್ಲಿ ಆಳುಗಳಿಗೇನೂ ಕೊರತೆಯಿಲ್ಲ. ಯಾವುದಾದರೂ ಕೆಲಸ ಮಾಡಲು ಸಾಹುಕಾರ ಒಬ್ಬನಿಗೆ ಆಜ್ಞಾಪಿಸಿದರೆ ಆತ ಮತ್ತೊಬ್ಬನಿಗೆ ಅದನ್ನು ಹೇಳುತ್ತಾನೆ. ಹೀಗಾಗಿ ಆಗಬೇಕಾದ ಕೆಲಸ ಸರಿಯಾದ ಸಮಯದಲ್ಲಿ ಆಗಿದೆಯೇ ಇಲ್ಲವೆ ಗಮನಿಸಲಾಗದೆ ಕೊನೆಗೆ ಆ ಕೆಲಸ ಹೇಳಿದ್ದು ಒಬ್ಬನಿಗೆ ಮಾಡಿದ್ದು ಅಥವಾ ಮಾಡಿಸಿದ್ದು ಮತ್ತೊಬ್ಬ ಎಂಬುದು ತಿಳಿಯುತ್ತದೆ. ಆಳಾಗಿ ದುಡಿಯುತ್ತಿದ್ದರು ಅರಸನಂತೆ ಆಜ್ಞಾಪಿಸಬೇಕೆಂಬ ತವಕ. ಹೀಗಾಗಿ ಒಡೆಯನನ್ನು ಅನುಕರಿಸುವ ಪ್ರಯತ್ನದಲ್ಲಿ ಆತ ಮೊದಲಿಗೆ ಮಾಡುವ ಕೆಲಸ ತನಗೆ ಹೇಳಿದ ಕೆಲಸವನ್ನು ಇನ್ನೊಬ್ಬರಿಗೆ ಹೇಳುವುದು. ಕಚೇರಿಗಳಲ್ಲೂ ಸಹ ಇಂತಹ ಪ್ರಸಂಗಗಳೂ ನಡೆಯುತ್ತವೆ. ಮೇಲಾಧಿಕಾರಿಗಳು ಒಂದು ಕೆಲಸವನ್ನು ಒಬ್ಬರಿಗೆ ವಹಿಸಿದರೆ ಅವರು ಮತ್ತೊಬ್ಬರಿಗೆ ವಹಿಸಿರುತ್ತಾರೆ. ಆಗ ಈ ಗಾದೆಯನ್ನು ಬಳಸಬಹುದಾಗಿದೆ.
No comments:
Post a Comment