Saturday, 24 March 2018

ಭಾರತದ ಮಣ್ಣುಗಳು

ಭಾರತದ ಮಣ್ಣುಗಳು

ಮುಖ್ಯಾಂಶಗಳು:
• ನದಿಗಳು ಪರ್ವತ ಪ್ರದೇಶದಿಂದ ತಂದು ಸಂಚಯಿಸಿರುವ ಮಣ್ಣಿಗೆ ಮೆಕ್ಕಲು ಮಣ್ಣು ಎಂದು ಹೆಸರು.
• ಕಪ್ಪು ಮಣ್ಣಿನ ಪ್ರದೇಶವನ್ನು ಡೆಕ್ಕನ್ ಟ್ರಾಪ್ ಎಂದು ಸಹ ಕರೆಯುವರು.
• ರಾಜಸ್ತಾನದಲ್ಲಿ ಮರಭೂಮಿ ಮಣ್ಣು ಹೆಚ್ಚಾಗಿ ಕಂಡುಬರುವದು.
• ಜೋಳ ಬೆಳೆಯಲು ಕಪ್ಪು ಮಣ್ಣು ಸೂಕ್ತವಾಗಿದೆ.
• ರಾಗಿ & ಎಣ್ಣೆ ಕಾಳು ಬೆಳೆಯಲು ಕೆಂಪು ಮಣ್ಣು ಸೂಕ್ತವಾಗಿದೆ.
ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿರಿ.
1. ಕಪ್ಪು ಮಣ್ಣು ಯಾವ ಯಾವ ಬೆಳೆಗಳಿಗೆ ಹೆಚ್ಚು ಸೂಕ್ತವಾಗಿದೆ?
• ಕಪ್ಪು ಮಣ್ಣು - ಹತ್ತಿ, ಜೋಳ, ಗೋದಿ, ಈರುಳ್ಳಿ,
ಮೆಣಸಿನಕಾಯಿ, ಹೊಗೆಸೊಪ್ಪು,
• ಎಣ್ಣೆಕಾಳುಗಳು, ನಿಂಬೆ & ದ್ರಾಕ್ಷಿ ಮುಂತಾದ ಬೆಳೆಗಳಿಗೆ ಹೆಚ್ಚು ಸೂಕ್ತವಾಗಿದೆ.

2. ಭಾರತದಲ್ಲಿ ಕಂಡು ಬರುವ ಮಣ್ಣಿನ ಮುಖ್ಯ ಪ್ರಕಾರಗಳು:-

ಭಾರತದಲ್ಲಿ ಕಂಡು ಬರುವ ಮಣ್ಣನ್ನು ಆರು ಪ್ರಮುಖ ವಿಧಗಳಾಗಿ ವಿಂಗಡಿಸಲಾಗಿದೆ.
ಅವುಗಳೆಂದರೆ –
1. ಮೆಕ್ಕಲುಮಣ್ಣು,
2. ಕಪ್ಪುಮಣ್ಣು,
3. ಕೆಂಪುಮಣ್ಣು,
4. ಜಂಬಿಟ್ಟಿಗೆ ಮಣ್ಣು,
5. ಮರುಭೂಮಿ ಮಣ್ಣು
6. ಪರ್ವತ ಮಣ್ಣು.

3. ಉತ್ತರ ಮೈದಾನ ಪ್ರದೇಶದಲ್ಲಿ ಯಾವ ಮಣ್ಣು ಕಂಡು ಬರುತ್ತದೆ?
ಉತ್ತರ ಮೈದಾನ ಪ್ರದೇಶದಲ್ಲಿ ಮೆಕ್ಕಲು ಮಣ್ಣು ಕಂಡು ಬರುತ್ತದೆ.

4. ಮಣ್ಣಿನ ಸಂರಕ್ಷಣೆ ಮತ್ತು ಅದರ ವಿಧಾನಗಳು :-
   ಮಣ್ಣಿನ ಸವೆತವನ್ನು ತಡೆಗಟ್ಟುವುದು ಹಾಗೂ ಅದರ
ಫಲವತ್ತತೆಯನ್ನು ಕಾಪಾಡುವುದೇ ‘ಮಣ್ಣಿನ ಸಂರಕ್ಷಣೆ’ ಎನ್ನುವರು. ಮಣ್ಣಿನ ಸವೆತವನ್ನು ತಡೆಗಟ್ಟಲು ಹಲವಾರು ವಿಧಾನಗಳಿವೆ. ಅವುಗಳಲ್ಲಿ
ಮುಖ್ಯವಾದವುಗಳೆಂದರೆ –
• ಇಳಿಜಾರಿಗೆ ಅಡ್ಡಲಾಗಿ ಉಳುಮೆ ಮಾಡುವುದು.
• ಅಡ್ಡ ಬದುಗಳನ್ನು ನಿರ್ಮಿಸುವದು.
• ವೈಜ್ಞಾನಿಕ ಬೇಸಾಯ ಕ್ರಮಗಳನ್ನು ಅನುಸರಿಸುವದು.
• ಅರಣ್ಯ ನಾಶವನ್ನು ತಡೆಗಟ್ಟಿ ಕಾಡನ್ನು ಬೆಳೆಸುವದು.
• ನೀರಿನ ಸೂಕ್ತ ಬಳಕೆ ಮಾಡುವದು.
• ಚೆಕ್ ಡ್ಯಾಮ್‍ಗಳ ನಿರ್ಮಾಣ.

5. ಮಣ್ಣಿನ ಸವೆತಕ್ಕೆ ಕಾರಣಗಳು :-
1• ಅರಣ್ಯಗಳ ನಾಶ,
2. ಸಾಕು ಪ್ರಾಣಿಗಳನ್ನು ಮೇಯಿಸುವದು,
3ಅವೈಜ್ಞಾನಿಕ ಬೇಸಾಯ,
4. ಅಧಿಕ ನೀರಾವರಿ ಬಳಕೆ.

6. ಮೆಕ್ಕಲು ಮಣ್ಣಿನ ಗುಣಲಕ್ಷಣಗಳು :-
• ಸಮಾರು 7.7 ದಶಲಕ್ಷ ಚ.ಕಿ.ಮೀ. ಪ್ರದೇಶಗಳಲ್ಲಿ ಹರಡಿದೆ.
• ನದಿಗಳು ಪರ್ವತ ಪ್ರದೇಶಗಳಿಂದ ಹೊತ್ತುತಂದು ಸಂಚಯಿಸಿರುವ ಮಣ್ಣಿನಿಂದ ರಚಿತವಾಗಿದೆ.
• ಈ ಮಣ್ಣಿನಲ್ಲಿ ¥ಇಂmಂಚಿμi ಮತ್ತು ಸುಣ್ಣ ಹೆಚ್ಚಾಗಿರುತ್ತದೆ.
• ಜೈವಿಕಾಂಶ & ಸಾರಜನಕ ಕಡಿಮೆ ಪ್ರಮಾಣದಲ್ಲಿರುತ್ತವೆ.
• 5 ಇಲ್ಲಿ ಬೆಳೆಯುವ ಪ್ರಮುಖ ಬೆಳೆಗಳೆಂದರೆ ಗೋದಿ, ಭತ್ತ, ಕಬ್ಬು & ಸಣಬು.

7. ಮಣ್ಣಿನ ಸವೆತ ಮತ್ತು ಅದರಿಂದ ಉಂಟಾಗುವ ಸಮಸ್ಯೆಗಳು ಅಥವಾ ಪರಿಣಾಮಗಳು:-
    ಭೂಮೇಲ್ಮೈಯಲ್ಲಿ ಕಂಡು ಬರುವ ಸಡಿಲವಾದ ಪದರವು ವಿವಿಧ ಪ್ರಾಕೃತಿಕ ಶಕ್ತಿಗಳಿಂದ ಸ್ಥಳಾಂತರ ಹೊಂದುವ ಕ್ರಿಯೆಯನ್ನೇ ಮಣ್ಣಿನ ಸವೆತ ಅಥವಾ ಭೂಸವೆತ ಎಂದು ಕರೆಯುತ್ತಾರೆ.
ಮಣ್ಣಿನ ಸವೆತದಿಂದ ಉಂಟಾಗುವ ಪರಿಣಾಮಗಳು.
• ನದಿಗಳಲ್ಲಿ ಹೂಳು ತುಂಬಿ ಪ್ರವಾಹ ಉಂಟಾಗುತ್ತದೆ.
• ನದಿಗಳು ತಮ್ಮ ದಿಕ್ಕನ್ನು ಬದಲಾಯಿಸಿ ಆಸ್ತಿ ಪಾಸ್ತಿಗೆ ಹಾನಿ ಉಂಟು ಮಾಡುತ್ತವೆ.
• ಜಲಾಶಯ ಅಥವಾ ಕರೆಗಳಲ್ಲಿ ಹೂಳು ತುಂಬುವದರಿಂದ ನೀರಿನ ಸಂಗ್ರಹಣಾ ಸಾಮಥ್ರ್ಯ ಕಡಿಮೆಯಾಗುವದು.
• ಭೂಸವೆತದಿಂದ ಭೂಮಿಯಲ್ಲಿ ಇಂಗುವ ನೀರಿನ ಪ್ರಮಾಣ ಕಡಿಮೆಯಾಗುವದು.
• ಭೂಸವೆತದಿಂದ ಭೂಮಿಯ ಫಲವತ್ತತೆ ಕಡಿಮೆಯಾಗುವದು.

8. ಕಪ್ಪು ಮಣ್ಣಿನ ಗುಣಲಕ್ಷಣಗಳು :-
• ಈ ಮಣ್ಣು ಹತ್ತಿ ಬೆಳೆಗೆ ಹೆಚ್ಚು ಉಪಯುಕ್ತವಾದುದು.
• ಈ ಮಣ್ಣು ಅಗ್ನಿಶಿಲೆಗಳ ಶಿಥಿಲಿಕರಣದಿಂದ ಉತ್ಪತ್ತಿಯಾಗಿದೆ.
• ಇದರಲ್ಲಿ ಜೇಡಿಮಣ್ಣಿನ ಕಣಗಳು ಹೆಚ್ಚಾಗಿ ಕಂಡುಬರುತ್ತವೆ.
• ಮಣ್ಣು ಫಲವತ್ತಾಗಿದ್ದು ತೇವಾಂಶವನ್ನು ಹಿಡಿದಿಟ್ಟುಕೊಳ್ಳಲು ಸಮರ್ಥವಾಗಿದೆ.
• ಈ ಮಣ್ಣು ಕಬ್ಬಿಣ, ಸುಣ್ಣ ಹಾಗೂ ಮೆಗ್ನೀಷಿಯಂ ಕಾರ್ಬೋನೇಟ್‍ಗಳನ್ನು ಅಧಿಕ ಪ್ರಮಾಣದಲ್ಲಿ ಒಳಗೊಂಡಿದೆ.
• ಬೆಳೆಯುವ ಪ್ರಮುಖ ಬೆಳೆಗಳೆಂದರೆ ಹತ್ತಿ, ಜೋಳ, ಗೋಧಿ, ಈರುಳ್ಳಿ, ಮೆಣಸಿನಕಾಯಿ.

9. ಕೆಂಪು ಮಣ್ಣಿನ ಗುಣಲಕ್ಷಣಗಳು :-
• ಈ ಮಣ್ಣು ಸ್ಪಟಿಕ ಶಿಲೆಗಳ ಶಿಥಲೀಕರಣದಿಂದ ಉಂಟಾಗುತ್ತದೆ.
• ಈ ಮಣ್ಣಿನಲ್ಲಿ ಕಬ್ಬಿಣದ ಅಂಶವು ಕಬ್ಬಿಣದ ಆಕ್ಸೈಡ್ ಆಗಿ ಪರಿವರ್ತನೆ ಹೊಂದುವದರಿಂದ
• ಇದು ಕೆಂಪು ಬಣ್ಣವನ್ನು ಹೊಂದಿದೆ.
• ಜೈವಿಕಾಂಶ, ರಂಜಕ ಮತ್ತು ಸುಣ್ಣದ ಕೊರತೆ ಈ ಮಣ್ಣಿನಲ್ಲಿದೆ.
• ಇಲ್ಲಿ ಬೆಳೆಯುವ ಪ್ರಮುಖ ಬೆಳೆಗಳೆಂದರೆ ಹೊಗೆಸೊಪ್ಪು, ಎಣ್ಣೆಕಾಳು, ಕಬ್ಬು, ಹತ್ತಿ.

10. ಹಿಮಾಲಯ ಪರ್ವತಗಳಲ್ಲಿ ಯಾವ ಬಗೆಯ ಮಣ್ಣು ಕಂಡು ಬರುವುದು?
   ಹಿಮಾಲಯ ಪರ್ವತಗಳಲ್ಲಿ ಕೊಳೆತ ಜೈವಿಕಾಂಶಗಳನ್ನೊಳಗೊಂಡ ಮಣ್ಣು ಕಂಡು ಬರುವದು.

No comments:

Post a Comment