-:ಹಾಸಿಗೆ ಇದ್ದಷ್ಟೂ ಕಾಲು ಚಾಚು:-
ಆದಾಯಕ್ಕೆ ತಕ್ಕಂತೆ ಖಚು೯ ಮಾಡು, ಇಲ್ಲದಿದ್ದರೆ ತೊಂದರಗೆ ಸಿಕ್ಕಿ ಹಾಕಿಕೊಳ್ಳುವುದು ಖಂಡಿತ ಎನ್ನುವುದನ್ನು ಸೂಚ್ಯವಾಗಿ ಈ ಗಾದೆ ತಿಳಿಸುತ್ತದೆ. ಹಾಸಿಗೆಯಿದ್ದಷ್ಟು ಕಾಲು ಚಾಚದಿದ್ದರೆ ಕಾಲು ನೆಲದ ಮೇಲಿರುತ್ತದೆ. ನೆಲದ ಮೇಲೆ ಇರುವುದನ್ನು ಬೀದಿಗೆ ಬೀಳುವುದಕ್ಕೆ ಹೋಲಿಸಬಹುದು. ಇದೇ ಅಭಿಪ್ರಾಯವನ್ನು ನಿಮ್ಮ ಬಟ್ಟೆಗೆ (ಅಳತೆಗೆ) ತಕ್ಕಂತೆ ಕೋಟನ್ನು ಕತ್ತರಿಸಬೇಕು ಎನ್ನುವ ಇಂಗ್ಲಿಷ ಮಾತು ಇದೆ. ಮಿತವ್ಯಯ, ತೃಪ್ತಿ, ಇನ್ನೊಬ್ಬರನ್ನು ಅನುಕರಿಸದಿರುವುದು, ಕೊಳ್ಳು ಬಾಕ ಸಂಸ್ಕೃತಿಗೆ ಈಡಾಗದಿರುವುದು ಇಂದಿನವರಿಗೆ ಅತ್ಯಗತ್ಯ. ಆದಾಯಕ್ಕಿಂತ ಹೆಚ್ಚು ಖಚು೯ ಮಾಡುವುದು ವ್ಯಾವಹಾರಿಕ ಜಾಣತನ ಅಲ್ಲ. ಮಿತವ್ಯಯದಲ್ಲಿ ಗೃಹಣಿಯ ಪಾತ್ರ ಹೆಚ್ಚು ಎನ್ನುವುದನ್ನು ಮರೆಯುವಂತಿಲ್ಲ. ಕ್ರೆಡಿಟ್ ಕಾಡು೯, ಸಾಲದ ಸೌಲಭ್ಯಗಳಿಗೆ ಮಾರುಹೋಗಿ ಮನೆ ಮಾರಿಕೊಂಡಿರುವ ಸುದ್ದಿ ಈಗಂತೂ ಕೇಳಿ ಬರುತ್ತಲೇ ಇರುತ್ತದೆ. ಹಣವಿಲ್ಲದವನು ಹೆಣಕ್ಕೆ ಸಮಾನ ಎನ್ನುವ ಗಾದೆ ನಮಗೆ ನಮಗೆ ತಿಳಿಹೇಳುತ್ತದೆ.
No comments:
Post a Comment