Thursday, 22 March 2018

ಸಮಾಸಗಳು

ನಮ್ಮ ಶರೀರವನ್ನು ಉದಾಹರಣೆಯನ್ನಾಗಿಟ್ಟುಕೊಂಡು ಸಮಾಸಗಳನ್ನು ಬೋಧಿಸುವುದು.

ಎಲ್ಲಾ ಸಮಾಸಗಳಿಗೂ ನಮ್ಮ ದೇಹದ ಅಂಗಾಂಗಗಳನ್ನು ಉದಾಹರಣೆ ಕೊಟ್ಟು, ಸಮಾಸ ಕಲಿಸುವ ಒಂದು ಪಟ್ಟಿ.

1) ತತ್ಪುರುಷ ಸಮಾಸ:-
ತಲೆಯಲ್ಲಿ +ನೋವು =ತಲೆನೋವು
ಹಲ್ಲಿನಲ್ಲಿ+ನೋವು=ಹಲ್ಲುನೋವು
ಕಿವಿಯಲ್ಲಿ +ನೋವು =ಕಿವಿನೋವು
ಎದೆಯಲ್ಲಿ +ನೋವು =ಎದೆನೋವು
ಕಾಲಿನಲ್ಲಿ +ನೋವು =ಕಾಲುನೋವು
ಹೊಟ್ಟಯಲ್ಲಿ +ನೋವು =ಹೊಟ್ಟೆನೋವು
ಕಾಲಿನ+ಬಳೆ=ಕಾಲುಬಳೆ
ಕಣ್ಣಿನಿಂದ+ಕುರುಡ=ಕಣ್ಣುಕುರುಡ
ದೇಹದ+ರಕ್ಷಣೆ=ದೇಹರಕ್ಷಣೆ
ಇತ್ಯಾದಿ

2)ಕರ್ಮಧಾರೆಯ ಸಮಾಸ:-
ಹಿರಿದು+ಬೆರಳು=ಹೆಬ್ಬೆರಳು
ಕಿರಿದು+ಬೆರಳು=ಕಿರುಬೆರಳು
ಕೆಚ್ಚನೆ+ಕಣ್ಣು=ಕೆಂಗಣ್ಣು
ಮೆಲ್ಲಿತು+ಮಾತು=ಮೆಲ್ವಾತು
ಮೆಲ್ಲಿತು +ನುಡಿ=ಮೆಲ್ನುಡಿ
ಕೆಂಪಾದ+ತುಟಿ=ಕೆಂದುಟಿ
ಕರವು+ಕಮಲದಂತೆ=ಕರಕಮಲ
ಮುಖವು+ಕಮಲದಂತೆ =ಮುಖಕಮಲ
ಪಾದವು+ಕಮಲದಂತೆ =ಪಾದಕಮಲ
ನಖವೇ+ಆಯುಧ=ನಖಾಯುಧ
ಇತ್ಯಾದಿ.

3)ದ್ವಿಗುಸಮಾಸ :-
ಒಂದು+ಕಣ್ಣು =ಒಕ್ಕಣ್ಣು
ಮೂರು+ಕಣ್ಣು =ಮುಕ್ಕಣ್ಣು
ಐದು+ಬೆರಳು=ಐವೆರಳು
ಒಂದು+ತಲೆ=ಒಂದಲೆ
ಪಂಚಗಳಾದ+ಇಂದ್ರಿಯಗಳು=
ಪಂಚೇಂದ್ರಿಯಗಳು
ಮೂರು+ಗೇಣ್=ಮೂಗೇಣ್
ಮೂರು+ಅಡಿ=ಮುಯ್ಯಡಿ
ಇತ್ಯಾದಿ.

4)ಅಂಶಿಸಮಾಸ :-
ಕೈಯ+ಮೇಲು =ಮೇಂಗೈ
ಕೈಯ+ಅಡಿ =ಅಂಗೈ
ಕೈಯ+ಮಂದು=ಮುಂಗೈ
ತಲೆಯ+ಮುಂದು =ಮುಂದಲೆ
ತಲೆಯ+ಹಿಂದು=ಹಿಂದಲೆ
ಕಾಲ +ಅಡಿ=ಅಂಗಾಲು
ಕಾಲು+ಮೇಲು =ಮೇಂಗಾಲ್
ಮೂಗಿನ+ತುದಿ=ತುದಿಮೂಗು
ಹುಬ್ಬಿನ+ಕೊನೆ=ಕೊನೆಹುಬ್ಬು
ಹುಬ್ಬಿನ +ಕುಡಿ=ಕುಡಿಹುಬ್ಬು
ಕಣ್ಣ+ಕಡೆ=ಕೆಡೆಗಣ್ಣು
ತುಟಿಯ+ಕೆಳಗು=ಕೆಳತುಟಿ
ಮೈಯ+ಹೊರಗು=ಹೊರಮೈ
ಮೈಯ+ಒಳಗು=ಒಳಮೈ
ಬೆನ್ನಿನ+ನಡು=ನಡುಬೆನ್ನು
ಹೊಟ್ಟೆಯ+ಕೆಳಗು=ಕಿಬ್ಬೊಟ್ಟೆ
ಇತ್ಯಾದಿ.

5)ದ್ವಂದ್ವಸಮಾಸ:-
ಕೈಯೂ+ಕಾಲೂ=ಕೈಕಾಲುಗಳು
ಕಣ್ಣೂ+ಕಿವಿಯೂ+ಮೂಗೂ+ಬಾಯಿಯೂ=ಕಣ್ಣು ಕಿವಿ ಮೂಗು ಬಾಯಿಗಳು
ಬಾಯಿಯೂ+ನಾಲಗೆಯೂ+ಹಲ್ಲುಗಳು=ಬಾಯಿ ನಾಲಗೆ ಹಲ್ಲುಗಳು
ಇತ್ಯಾದಿ.

6)ಬಹುವ್ರೀಸಮಾಸ :-
ಹಣೆಯಲ್ಲಿ+ಕಣ್ಣು-ಉಳ್ಳವ=ಹಣೆಗಣ್ಣ
ಚಕ್ರವು+ಪಾಣಿಯಲ್ಲಿ ಆವಂಗೋ ಅವನು-ಚಕ್ರಪಾಣಿ
ಖಡ್ಗವು+ಪಾಣಿಯಲ್ಲಿ ಆವಂಗೋ ಅವನು -ಖಡ್ಗಪಾಣಿ
ಡೊಂಕು(ಆದ)+ಕಾಲು-ಉಳ್ಳವ=ಡೊಂಕುಗಾಲ
ಕೆಂಪು(ಆದ)ಕಣ್ಣು-ಉಳ್ಳವ=ಕೆಂಗಣ್ಣ
ನಿಡಿ(ಆದ)+ಮೂಗು-ಉಳ್ಳವ=ನಿಡಿಮೂಗ
ಇತ್ಯಾದಿ.

7)ಕ್ರಿಯಾಸಮಾಸ :—
ಕೈಯನ್ನು+ಮುಗಿ=ಕೈಮುಗಿ
ಕೈಯನ್ನು+ತಡವಿ=ಕೈದಡವಿ
ಕೈಯನ್ನು+ಮುಟ್ಟಿ =ಕೈಮುಟ್ಟಿ
ತಲೆಯನ್ನು+ಕೊಡವಿ=ತಲೆಗೊಡವಿ
ಮೈಯನ್ನು+ಮುಚ್ಚಿ=ಮೈಮುಚ್ಚಿ
ಕಣ್ಣನ್ನು+ತೆರೆದನು=ಕಣ್ಣುತೆರೆದನು
ಬಾಯಿಯನ್ನು+ತೆರೆ=ಬಾಯಿತೆರೆ
ಕಣ್ಣಂ+ತೆರೆ=ಕಣ್ದೆರೆ
ಕೈಯನ್ನು+ಪಿಡಿದು=ಕೈವಿಡಿದು
ಬಾಯಿಯನ್ನು+ಮುಚ್ಚು=ಬಾಯ್ಮುಚ್ಚು
ಮೈಯಂ+ತೊಳೆದು=ಮೈದೊಳೆದು
ಕೈಯಂ+ತೊಳೆದು=ಕೈತೊಳೆದು
ಬಾಯನ್ನು +ತೆರೆದು=ಬಾಯ್ದೆರೆದು
ಇತ್ಯಾದಿ.

8)ಗಮಕ ಸಮಾಸ:-
ಇದು+ಕಣ್ಣು=ಈ ಕಣ್ಣು
ಇದು+ತುಟಿ=ಈ ತುಟಿ
ಇದು+ಕಾಲು=ಈ ಕಾಲು
ಇವನು+ಮನುಷ್ಯ=ಈ ಮನುಷ್ಯ
ಅವನು+ಹುಡುಗ=ಆ ಹುಡುಗ
ಅವಳು+ಹುಡುಗಿ=ಆ ಹುಡುಗಿ
ಅದು+ಕೈಯಿ=ಆ ಕೈಯಿ
ಅದು+ಕಾಲು=ಆ ಕಾಲು
ಇತ್ಯಾದಿ.

No comments:

Post a Comment