Friday, 23 March 2018

ಗಾದೆಮಾತು :ಹುಟ್ಟು ಗುಣ ಸುಟ್ಟರೂ ಹೋಗದು :

ಹುಟ್ಟು ಗುಣ ಸುಟ್ಟರೂ ಹೋಗದು.

ವಿವರಣೆ :-
           ಹುಟ್ಟಿನಿಂದ ಬಂದ ಗುಣವಿಶೇಷಗಳು ಏನು ಮಾಡಿದರೂ ಬದಲಾಗುವುದಿಲ್ಲ. ವಿಭಿನ್ನ ಪರಿಸರ, ವಾತಾವರಣದಲ್ಲಿ ಮಕ್ಕಳನ್ನು ಬೆಳೆಸಿದರೂ, ಅವರಿಗೆ ತಾಯಿ ತಂದೆಯಿಂದ ಬಂದ ಗುಣಗಳು ಬದಲಾಗುವುದಿಲ್ಲ . ಇದನ್ನು ಬೇರೆ ಬೇರೆ ಗಾದೆಗಳೂ ಹೇಳಿವೆ. ಉದಾಹರಣೆಗೆ – ತಾಯಿಯಂತೆ ಮಗಳು, ನೂಲಿನಂತೆ ಸೀರೆ. ನಾಯಿಯನ್ನು ಕರೆದುಕೊಂಡು ಹೋಗಿ ಸಿಂಹಾಸನದ ಮೇಲೆ ಕೂರಿಸಿದರೆ ಅದರ ಸ್ವಭಾವ ಬದಲಾಗುವುದೇ? ನಾಯಿಯ ಬಾಲವನ್ನು ನೆಟ್ಟಗೆ ಮಾಡಲಾಗುವುದೆ? ಈ ಗಾದೆಗಳ ಅಭಿಪ್ರಾಯವನ್ನು ಆಧುನಿಕ ವಿಜ್ಞಾನಿಗಳು ಒಪ್ಪುತ್ತಾರೆ. ಗುಣಗಳು ಎಂದಾಗ ದುಗು೯ಣಗಳು (ಅವಗುಣಗಳ) ಎಂದು ಮಾತ್ರ ಅಥ೯ವಲ್ಲ. ಮನುಷ್ಯನ ವ್ಯಕ್ತಿತ್ವದ ಮೇಲೆ ಪರಿಸರದ ಪ್ರಭಾವವೆಷ್ಟು ಎನ್ನುವುದರ ಬಗ್ಗೆ ಇನ್ನೂ ಚಚೆ೯ ನಡೆಯುತ್ತಲೇ ಇದೆ. ಹುಟ್ಟುಗುಣ ವಂಶಪಾರಂಪರ್ಯವಾಗಿ ಬರುವುದರಿಂದ, ಪ್ರಾಣಿಗಳಿಗೂ ಅನ್ವಯಿಸುವುದರಿಂದ, ಅದಕ್ಕೂ ಜಾತಿಗೂ ಕುಲಕ್ಕೂ ಸಂಬಂಧವಿಲ್ಲ.

No comments:

Post a Comment