#ವೀರ_ಸಾವರ್ಕರ್_ಜನ್ಮದಿನದ_ಶುಭಾಶಯಗಳು#.
ಸ್ಪೂರ್ತಿಯ ಕಿಡಿ ಸ್ವಾತಂತ್ರ್ಯ ವಿರ ಸಾವರ್ಕರ್ ರವರಿಗೆ ಅನಂತಾನಂತ ಕೋಟಿ ಪ್ರಣಾಮಗಳು...
ಸಾವರ್ಕರ್ ಎಂದರೆ ಕಿಚ್ಚು, ಸಾವರ್ಕರ್ ಎಂದರೆ ಆತ್ಮಾಭಿಮಾನ, ಸಾವರ್ಕರ್ ಎಂದರೆ ದೇಶಭಕ್ತಿ, ಸಾವರ್ಕರ್ ಎಂದರೆ ಸಮರ್ಪಣೆ. ಆದರ್ಶ, ನಿಷ್ಠೆ, ಸಾಹಸ, ಪರಾಕ್ರಮ, ಸಂಯಮ, ಸಹನಶೀಲತೆ, ಆತ್ಮವಿಶ್ವಾಸ, ಛಲ, ಜಾಣ್ಮೆ, ವಿವೇಕ, ನೇತೃತ್ವ, ಆತ್ಮಾರ್ಪಣೆ ಅವೆಲ್ಲದರ ಸಂಗಮವೇ ವಿನಾಯಕ ದಾಮೋದರ ಸಾವರ್ಕರ್.
ವಿನಾಯಕರು ಮೇ 28, 1883 ರಲ್ಲಿ ಜನಿಸಿದರು. ಸಂಸ್ಕೃತ ವಿದ್ವಾಂಸರ ಪೀಳಿಗೆಯಲ್ಲಿ ಹುಟ್ಟಿದ ಸಾವರ್ಕರರಿಗೆ ಇತಿಹಾಸ, ರಾಜನೀತಿ, ಸಾಹಿತ್ಯ, ಭಾರತಿಯ ಸಂಸ್ಕೃತಿಗಳಲ್ಲಿ ಅತ್ಯಂತ ಆಸಕ್ತಿ. ಅವರು ಬರೆದ ಪುಸ್ತಕ “ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ - 1857” ಅಸಂಖ್ಯಾತ ಸ್ವಾತಂತ್ರ್ಯ ಯೋಧರಿಗೆ ಸ್ಪೂರ್ತಿದಾಯಕವಾಯಿತು.
ವೀರ ಸಾವರ್ಕರ್(ವಿನಾಯಕ ದಾಮೋದರ ಸಾವರ್ಕರ್) ತಮ್ಮ ಸಂಪೂರ್ಣ ಜೀವನವನ್ನೇ ಭಾರತದ ಸ್ವಾತಂತ್ರ್ಯಕ್ಕಾಗಿ ಮುಡಿಪಾಗಿಟ್ಟ ಮಹಾನ್ ವಾಗ್ಮಿ, ವಿವಿಧ ವಿಷಯಗಳ ಬಗ್ಗೆ ನಿರರ್ಗಳವಾಗಿ ಬರೆಯಬಲ್ಲ ಲೇಖಕ, ಇತಿಹಾಸಕಾರ, ಕವಿ, ತತ್ವಶಾಸ್ತ್ರಜ್ಞ, ಮತ್ತು ಸಮಾಜಸೇವಕ. ಅವರನ್ನು ಕೆಲವರು ಭಾರತದ ಸ್ವಾತಂತ್ರ್ಯ ಸಂಗ್ರಾಮದ ಅತಿ ದೊಡ್ಡ ಕ್ರಾಂತಿಕಾರಿ ಎಂದು ಪರಿಗಣಿಸುವರು.ಚಾಣಕ್ಯನೀತಿಯವರಾಗಿಯೂ ಭಾವಿಸುತ್ತಾರೆ. ಸ್ವಾತಂತ್ರ್ಯ ಅಂದೋಲನದ ಇತಿಹಾಸದ ಅತ್ಯಂತ ವಿವಾದಾತ್ಮಕ ವ್ಯಕ್ತಿಗಳಲ್ಲಿ ಸಾವರ್ಕರ್ ಪ್ರಮುಖರು.
ಅಂಡಮಾನಿನ ಕಾರಾಗೃಹದ ಕರಿನೀರಿನ ಶಿಕ್ಷೆಗೆ ಒಳಗಾದರು ಅವರ ವಿರುದ್ಧದ ಮೊಕದ್ದಮೆಯಲ್ಲಿ , ಆಗಿನ್ನೂ 27ರ ತರುಣನಾಗಿದ್ದ ಅವರಿಗೆ, ಕುಪ್ರಸಿದ್ಧ ಅಂಡಮಾನಿನ ಜೈಲಿನಲ್ಲಿ 50 ವರ್ಷಗಳ ಕಾರಾಗೃಹ ಶಿಕ್ಷೆ ವಿಧಿಸಲಾಯಿತು. ನಾಲ್ಕು ಜುಲೈ, 1911ರಂದು, ಅವರನ್ನು ಅಂಡಮಾನಿಗೆ ಸಾಗಿಸಲಾಯಿತು.
24/12/1910 ರಿಂದ 23/12/1960, ವಿದೇಶಕ್ಕೆ ತೆರಳಿ ಕ್ರಾಂತಿ ಕಾರ್ಯ ಸಂಘಟಿಸಿದ, ದೇಶಭಕ್ತಿ ಪ್ರದರ್ಶಿಸಿದ ಮಹಾಪರಾಧಕ್ಕಾಗಿ ವಿನಾಯಕ ದಾಮೋದರ ಸಾವರ್ಕರ್ ಅವರಿಗೆ 50 ವರ್ಷಗಳ ಕರಿನೀರಿನ ಶಿಕ್ಷೆ. ಅವತ್ತಿನ ಮಟ್ಟಿಗೆ ಕರಿನೀರಿನ ಶಿಕ್ಷೆ ಎಂದರೆ ಅದು ಸಾವಿನ ಮನೆ ಅಂತಲೇ ಅರ್ಥ. ಹೊರಗಿನ ಯಾರ ಸಂಪರ್ಕವೂ ಇಲ್ಲದ, ದೇಶದಿಂದ ಬಹುದೂರದ ಅಂಡಮಾನಿನ ಆ ಕ್ರೂರ ಜೈಲಿನಿಂದ ಮರಳಿ ಬರುವ ನಂಬಿಕೆಯೇ ಇರಲಿಲ್ಲ. ಅದೂ 50 ವರ್ಷಗಳು !. ಎದೆ ಬಿರಿಯುವ ಶಿಕ್ಷೆ ಕೇಳಿದಾಗಲೂ ಅವರು ವಿಚಲಿತರಾಗಲಿಲ್ಲ. ಈ ಸಮುದ್ರ ಈಜಿದ ಸಾಹಸಿಯನ್ನು ಅಣಕಿಸಲೆಂದೇ ಅಲ್ಲಿನ ಜೈಲರ್ 'ಹೆದರಬೇಡಿ ಬ್ಯಾರಿಸ್ಟರ್ ಸಾಹೇಬರೇ, 1960 ರಲ್ಲಿ ನಮ್ಮ ಪರಮ ಕೃಪಾಳು ಸರ್ಕಾರ ಖಂಡಿತಾ ನಿಮ್ಮನ್ನು ಬಿಡುಗಡೆ ಮಾಡುತ್ತದೆ' ಎಂದಾಗ ಸಾವರ್ಕರ್ ಜೋರಾಗಿ ನಕ್ಕು '50 ವರ್ಷಗಳ ಕಾಲ ನಿಮ್ಮ ಸರ್ಕಾರ ಇದ್ದರೆ ತಾನೇ ?' ಎಂದು ಮರುಪ್ರಶ್ನಿಸಿ ಗತ್ತಿನಿಂದಲೇ ನಡೆದಿದ್ದರು.
“ಬ್ರಿಟಿಷ್ ಅಧಿಕಾರಿಗಳ ಬಗೆಗೇ ಆಗಲಿ, ಅವರ ಕಾನೂನುಗಳ ಬಗೆಗೆ ಆಗಲಿ, ಗೊಣಗುವುದರಲ್ಲಿ ಅರ್ಥವಿಲ್ಲ. ಅದಕ್ಕೆ ಕೊನೆಯೂ ಇಲ್ಲ. ನಮ್ಮ ಚಳುವಳಿ ಯಾವುದೇ ನಿರ್ದಿಷ್ಟ ಕಾನೂನನ್ನು ವಿರೋಧಿಸುವುದಕ್ಕಷ್ಟೇ ಸೀಮಿತವಾಗದೆ, ಆ ಕಾನೂನುಗಳನ್ನು ರಚಿಸಿ, ಜಾರಿಗೆ ತರುವ ಹಕ್ಕಿಗಾಗಿ ಇರಬೇಕು. ಅರ್ಥಾತ್, ಸಂಪೂರ್ಣ ರಾಜಕೀಯ ಸ್ವಾತಂತ್ರ್ಯವೇ ನಮ್ಮ ಗುರಿಯಾಗಬೇಕು” ಎಂದು ಸಾವರ್ಕರರು ಹೇಳಿದ್ದರು.
ಮಾನಸಿಕವಾಗಿ ತಮ್ಮನ್ನು ಮಾರಿಕೊಳ್ಳುತ್ತಿದ್ದಭಾರತೀಯನ್ನು ಬಡಿದೆಬ್ಬಿಸಿ ಕ್ರಾಂತಿಕಾರ್ಯಕ್ಕೆ ಮುನ್ನುಡಿ ಬರೆದರು. ಅವರ ಕಾರ್ಯದಿಂದ ಪ್ರೇರೇಪಣೆಗೊಂಡ 'ಮದನಲಾಲ್ ಧೀಂಗ್ರ' ದಾಸ್ಯ ರಕ್ಕಸನಎದೆ ಮೆಟ್ಟಿ ವಿದೇಶಿ ನೆಲದ ಮೊದಲ ಬಲಿದಾನಿಯಾಗಿ ಇತಿಹಾಸ ಸೃಷ್ಟಿಸಿದ.
1857 ರ ಸಂಗ್ರಾಮವನ್ನು 'ಸಿಪಾಯಿದಂಗೆ' ಎಂದೇ ಕರೆದಿದ್ದ ಬ್ರಿಟಿಷರಿಗೆ ಸವಾಲಾಗಿ ನಿಂತು ಅದು 'ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ' ಎಂದು ನಿರೂಪಿಸುವ ಪುಸ್ತಕ ಬರೆದ ಸಾವರ್ಕರ್ ಆ ಮೂಲಕ ಭಗತ್ ಸಿಂಗ್, ಆಜಾದ್, ನೇತಾಜಿಯಂತಹ ಈ ದೇಶದ ಮಹಾನ್ ನಾಯಕರುಗಳಿಗೆ ಪ್ರೇರಣೆ ನೀಡಿದರು.
ನೇತಾಜಿ ಸುಭಾಷ್ ಚಂದ್ರ ಬೋಸ್‌ರಿಗೆ ಪ್ರೇರಣೆ ನೀಡಿ ವಿದೇಶಕ್ಕೆ ತೆರಳಿ ಸಂಗ್ರಾಮದ ಮೂಲಕ ದಾಸ್ಯ ವಿಮೋಚನೆಯ ಮಾರ್ಗದರ್ಶನ ನೀಡಿದವರು ಸಾವರ್ಕರ್.
ದೇಶಭಕ್ತಿಯ ಅಪರಾಧಕ್ಕಾಗಿ ಭಾರತೀಯ ಮಹಾವಿದ್ಯಾಲಯವೊಂದರ ವಸತಿಗೃಹದಿಂದ ಹೊರದೂಡಲ್ಪಟ್ಟ ಮೊಟ್ಟಮೊದಲ ವಿದ್ಯಾರ್ಥಿ ಸಾವರ್ಕರ್. ಭಾರತದಲ್ಲಿ ವಿದೇಶಿ ಬಟ್ಟೆಗಳಿಗೆ ಬೆಂಕಿಯಿಟ್ಟು ಹೋಳಿ ಆಚರಿಸಿದ ಮೊಟ್ಟಮೊದಲ ಸ್ವದೇಶಾಭಿಮಾನಿ ಸಾವರ್ಕರ್. ದಾಸ್ಯರಕ್ಕಸನ ಎದೆ ಮೆಟ್ಟಲು ಮುಂದಾಗಿದ್ದಕ್ಕೆ ತಾನು ಗಳಿಸಿದ್ದ ಬಿ.ಎ. ಪದವಿಯನ್ನೇ ಕಳೆದುಕೊಂಡ ಮೊಟ್ಟಮೊದಲ ಭಾರತೀಯ ಪದವೀಧರ, ಕ್ರಾಂತಿಕಾರಿ ಚಟುವಟಿಕೆಗಳನ್ನು ನಡೆಸಿದ್ದಕ್ಕಾಗಿ ಬ್ರಿಟಿಷರಿಂದ 'ಬ್ಯಾರಿಸ್ಟರ್ ಪದವಿ'ಯನ್ನೇ ನಿರಾಕರಿಸಲ್ಪಟ್ಟ ಮೊಟ್ಟ ಮೊದಲ ಬ್ಯಾರಿಸ್ಟರ್, ಪ್ರಕಟಣೆಗೆ ಮೊದಲೇ ಎರಡು ರಾಷ್ಟ್ರಗಳಲ್ಲಿ ನಿಷೇಧಿಸಲ್ಪಟ್ಟ ಗ್ರಂಥ ರಚಿಸಿದ ಜಗತ್ತಿನ ಮೊಟ್ಟಮೊದಲ ಲೇಖಕ ಸಾವರ್ಕರ್. 'ಸಂಪೂರ್ಣ ಸ್ವಾತಂತ್ರ್ಯವೇ ಭಾರತದ ಧ್ಯೇಯ' ಎಂದು ಘೋಷಿಸಿದ ಮೊಟ್ಟಮೊದಲ ರಾಜಕೀಯ ಮುಂದಾಳು, ಜಗತ್ತಿನ ರಾಜಕೀಯ ಇತಿಹಾಸದಲ್ಲೇ ಹೇಗ್ ಅಂತರರಾಷ್ಟ್ರೀಯ ನ್ಯಾಯಾಲಯದೆದುರು ತನ್ನ ಬಗ್ಗೆ ಮೊಕದ್ದಮೆ ನಡೆಯುವಂತೆ ಮಾಡಿದ ಮೊದಲ ರಾಜಕೀಯ ಖೈದಿ ಸಾವರ್ಕರ್.
ವಿಶ್ವದ ಚರಿತ್ರೆಯಲ್ಲಿ 50 ವರ್ಷಗಳ ಕರಿನೀರಿನ ಶಿಕ್ಷೆಗೆ ಗುರಿಯಾದ ಮೊಟ್ಟ ಮೊದಲ ಸ್ವಾತಂತ್ರ್ಯ ಸೇನಾನಿ ಸಾವರ್ಕರ್. ಅಹಿಂಸೆಯ ಹೆಸರಲ್ಲಿ ಬ್ರಿಟಿಷರ ಕಾಲಿಗೆ ಬಿದ್ದು ಬಿದ್ದು ಆತ್ಮಾಭಿಮಾನವನ್ನೇ ಕಳೆದುಕೊಂಡಿದ್ದವರ ಮಧ್ಯೆ ಇಂಗ್ಲೆಂಡಿಗೇ ತೆರಳಿ ಬ್ರಿಟಿಷರ ಎದೆನಡುಗುವಂತೆ ಕ್ರಾಂತಿಕಾರ್ಯ ಸಂಘಟಿಸಿ ನೂರಾರು ತರುಣ ದೇಶಭಕ್ತರ ಪಡೆ ರಚಿಸಿದ ಮೊದಲ ಕ್ರಾಂತಿಕಾರಿ ಸಾವರ್ಕರ್. ಸತತ 11 ಬಾರಿ ಕಠಿಣ ಸೆರೆವಾಸಕ್ಕೆ ಗುರಿಯಾದ ಅದ್ವಿತೀಯ ಸೇನಾನಿ ಸಾವರ್ಕರ್. ದುರಂತವೆಂದರೆ ಸ್ವಾತಂತ್ರ್ಯಬಂದಮೇಲೂ ಭಾರತ ಸರ್ಕಾರದಿಂದಲೇ ಬಂಧನಕ್ಕೆ ಒಳಗಾದ, ಇಲ್ಲಿನ ವ್ಯವಸ್ಥೆಗೆ ನೊಂದು 21 ದಿನಗಳ ಉಪವಾಸದ ಮೂಲಕ ಪ್ರಾಯೋಪವೇಶ ಮಾಡಿ ಆತ್ಮಾರ್ಪಣೆಗೈದ ಮೊದಲ ಚೇತನ ಸಾವರ್ಕರ್.
ಸೂರ್ಯ ಮುಳುಗದ ಸಾಮ್ರಾಜ್ಯಕ್ಕೆ ದಿಟ್ಟ ಸವಾಲಾಗಿ ನಿಂತು ಬೆಳಗಿದ, ರಾಷ್ಟ್ರಕ್ಕಾಗಿ ತಮ್ಮ ಬದುಕನ್ನು, ತಮ್ಮ ಇಡೀ ಕುಟುಂಬವನ್ನು ಸಮರ್ಪಿಸಿದ, ತಮ್ಮ ಹೆಸರು ಕೇಳಿದರೇ ಬ್ರಿಟಿಷರ ಎದೆ ನಡುಗುವಂತೆ ಮಾಡಿದ, ಮತ್ತು ಆ ಕಾರಣಕ್ಕಾಗಿಯೇ ವಿಶ್ವದ ಇತಿಹಾಸದಲ್ಲೇ ಮೊದಲ ಬಾರಿ 50 ವರ್ಷಗಳ ಘೋರ ಕರಿನೀರಿನ ಶಿಕ್ಷೆಗೆ ಒಳಗಾದ ಈ ದೇಶದ ಒಬ್ಬ ಮಹಾನ್ ಕ್ರಾಂತಿಕಾರಿಯನ್ನು, ಅಪ್ರತಿಮ ದೇಶಭಕ್ತನನ್ನು ಸ್ವಾತಂತ್ರ್ಯ ಬಂದ ಕೇವಲ 50 ವರ್ಷಗಳಲ್ಲಿ ಮರೆತುಬಿಟ್ಟೆವೆಂದರೆ ಅದಕ್ಕಿಂತ, ನೋವಿನ ಸಂಗತಿh ಬೇರೇನಿದ್ದೀತು?
ವೀರ್ ಸಾವರ್ಕರ್(ವಿನಾಯಕ ದಾಮೋದರ ಸಾವರ್ಕರ್) ಹೆಸರು ಅಮರವಾಗಲಿ....
#ವಂದೇ_ಮಾತರಂ.