Wednesday, 4 April 2018

ಲೇಖನ ಚಿನ್ಹೆಗಳು : ವಿವರಣಾತ್ಮಕ ಚಿನ್ಹೆ (:)

ವಿವರಣಾತ್ಮಕ ಅಥವಾ ವಿವರಣಸೂಚಿ ಚಿಹ್ನೆ - (:) 

ವಿವರಣಾತ್ಮಕ ಚಿಹ್ನೆ-(:)
                   – ಒಂದು ಅಭಿಪ್ರಾಯದ ವಿವರಣೆ ಮುಂದಿನಂತೆ ಇದೆ, ಎಂದು ತೋರಿಸುವಾಗ ಸಾಮಾನ್ಯವಾಗಿ  ‘:’  ಈ ಚಿಹ್ನೆ ಹಾಕುವುದುಂಟು. ಉದಾಹರಣೆ:-  ಇದುವರೆಗೆ ನಳನ ಪಾಕಶಾಸ್ತ್ರ ನೈಪುಣ್ಯ ಹೇಳಿದ್ದಾಯಿತು.  ಇನ್ನು ಭೀಮಸೇನನ ವಿಚಾರ: ಭೀಮಸೇನ ಹುಟ್ಟಿದ ತಿಥಿ, ವಾರ, ನಕ್ಷತ್ರ ………….. ಇಲ್ಲಿ ಭೀಮಸೇನನ ವಿಚಾರದ ವಿವರಣೆ ಪ್ರಾರಂಭವಾಗುವಲ್ಲಿ  ‘:’  ಈ ಚಿಹ್ನೆ ಹಾಕಲಾಗಿದೆ.  ಇದು ಭೀಮಸೇನನ ವಿಚಾರದಲ್ಲಿ ವಿವರಣೆ ಪ್ರಾರಂಭಿಸುವ ಸೂಚನೆಗಾಗಿ ಹಾಕಿದುದೆಂದು ತಿಳಿಯಬೇಕು.  
             ಇನ್ನು ಪಂಪ ಮಹಾಕವಿಯ ವಿಚಾರ: ಪಂಪ ಕವಿಯು ಕನ್ನಡದ ಬಹು ದೊಡ್ಡ ಕವಿ …….. ಇತ್ಯಾದಿ. ಇಲ್ಲಿ ಪಂಪ ಕವಿಯ ವಿಚಾರ-ಎಂಬ ಪದದ ಮುಂದೆ ವಿವರಣಾತ್ಮಕವಾದ  ‘:’  ಈ ಚಿಹ್ನೆ ಹಾಕಲಾಗಿದೆ. ...
              ನೀನು ಈ ದಿನ ಮಾಡಬೇಕಾದ ಕೆಲಸಗಳು : ಬ್ಯಾಂಕ್ ಗೆ ಹೋಗಿ ಹಣ ತರುವುದು, ಅಂಗಡಿಯಿಂದ ಸಾಮಾನು ತರುವುದು, ಔಷಧಗಳನ್ನು ಕೊಳ್ಳುವದು ಮತ್ತು ಅಂಚೆ ಪತ್ರಗಳನ್ನು ಅಂಚೆಪೆಟ್ಟಿಗೆಗೆ ಹಾಕುವುದು.
              ಹೀಗೆ : ಈ ಚಿನ್ಹೆಯನ್ನು ಮುಂದೆ ವಿವರಣೆ ಮಾಡಿದೆ ಎಂಬರ್ಥದಲ್ಲಿ ಹಾಕಬೇಕಾಗುವುದು.

No comments:

Post a Comment