Friday, 23 March 2018

-:ದಕ್ಷಿಣ ಭಾರತದ ಪ್ರಮುಖ ಐತಿಹಾಸಿಕ ಶಾಸನಗಳು:-

#ದಕ್ಷಿಣ ಭಾರತದ ಪ್ರಮುಖ ಐತಿಹಾಸಿಕ ಶಾಸನಗಳು #

●. ಸಮುದ್ರಗುಪ್ತನ ಅಲಹಾಬಾದ್ ಶಾಸನದ ಕರ್ತೃ :-ಹರಿಷೇಣ

●. ಸಮುದ್ರಗುಪ್ತನನ್ನು ನೂರು ಕದನಗಳ ಸಿಂಹ ಎಂದು ಸಂಭೋದಿಸಿದ ಶಾಸನ :-ಅಲಹಾ ಬಾದ್ ಸ್ತಂಭ ಶಾಸನ

●. ಅಲಹಾಬಾದ್ ಸ್ತಂಭ ಶಾಸನ ಮೊದಲು ಇದ್ದ ಪ್ರದೇಶ :-ಕೌಸಂಬಿ

●. ಅಲಹಾಬಾದ್ ಸ್ತಂಭ ಶಾಸನವನ್ನು ಕೌಸಂಬಿಯಿಂದ ಅಲಹಾಬಾದಿಗೆ ಸಾಗಿಸಿದ ತುಘಲಕ್ ದೊರೆ :- ಫೀರೋಜ್ ಷಾ ತುಘಲಕ್

●. ದೆಹಲಿಯಲ್ಲಿರುವ ಗುಪ್ತರ ಕಾಲದ ಸ್ತಂಭ ಶಾಸನ :- ಮೆಹ್ರೋಲಿ ಕಂಬ್ಬಿಣದ ಸ್ತಂಭ ಶಾಸನ

●. ಫಿರೋಜ್ ಷಾ ತುಘಲಕ್, ದೆಹಲಿಗೆ ರವಾನಿಸಿದ ಅಶೋಕನ ಶಿಲಾಶಾಸನಗಳು :- ಮಿರತ್ ಶಾಸನ ಹಾಗೂ ತೋಪ್ರ ಶಾಸನ

●. ಗ್ರೀಕ್ ಹಾಗೂ ಅರೇಬಿಕ್ ಭಾಷೆಗಳಲ್ಲಿರುವ ಅಶೋಕನ ಶಾಸನಗಳು ಇರುವ ಪ್ರದೇಶ :- ಕಂದಾಹಾರ್

●. ಗಿರ್ನಾರ್ ಹಾಗೂ ಜುನಾಗಡ್ ಶಾಸನದ ಕರ್ತೃ :- ರುದ್ರದಾಮನ್

●. ಸುದರ್ಶನ ಕೆರೆಯ ಇತಾಹಾಸದ ಮೇಲೆ ಬೆಳಕು ಚೆಲ್ಲುವ ಶಾಸನಗಳು :-ರುದ್ರದಾಮನ್ ಹಾಗೂ ಸ್ಕಂದ ಗುಪ್ತನ ಶಾಸನಗಳು

●. ತೆಲುಗಿನ ಪ್ರಥಮ ಶಾಸನ :-ಕಲಿಮಲ್ಲ ಶಾಸನ

●. ತಮಿಳಿನ ಪ್ರಥಮ ಶಾಸನ :- ಮಾಂಗುಳಂ ಶಾಸನ

●. ಶಾಸನಗಳ ಪಿತಾಮಹಾ ಶಾಸನಗಳ ರಾಜ. ಸ್ವಕಥನಗಾರ ಎಂದು ಖ್ಯಾತಿವೆತ್ತ ಮೌರ್ಯ ಅರಸ :-ಅಶೋಕ

●. ಅಶೋಕನ ಶಾಸನಗಳು ಈ ಲಿಪಿಯಗಳಲ್ಲಿ ಲಭ್ಯವಾಗಿದೆ :- ಬ್ರಾಹ್ಮಿ ಹಾಗೂ ಖರೋಷ್ಠಿ

●. ಕಳಿಂಗ ಯುದ್ಧದ ಬಗೆಗೆ ಬೆಳಕು ಚೆಲ್ಲುವ ಅಶೋಕನ ಶಾಸನ :-13 ನೇ ಶಿಲಾ ಶಾಸನ

●. ಅಸೋಕನ ಶಾಸನವನ್ನು ಮೊಟ್ಟ ಮೊದಲು ಓದಿದವರು :-1837 ರಲ್ಲಿ ಈಸ್ಟ್ ಇಂಡಿಯಾ ಕಂಪೆನಿಯ ಜೇಮ್ಸ್ ಪ್ರಿನ್ಸಸ್

●. ಅಶೋಕನನ್ನು ಪ್ರಿಯದರ್ಶಿ ಅಶೋಕ ಎಂದು ಸಂಭೋದಿಸಿಲಾದ ಶಾಸನ :- ಮಸ್ಕಿ ಶಾಸನ

●. ಮಸ್ಕಿ ಶಾಸನ ಪ್ರಸ್ತುತ ಈ ಜಿಲ್ಲೆಯಲ್ಲಿದೆ :- ಕೊಪ್ಪಳ

●. ಅಶೋಕನನ್ನು ರಾಜ ಅಶೋಕ , ದೇವನಾಂಪ್ರಿಯ ಎಂಬ ಹೆಸರುಗಳಿಂದ ಸಂಭೋಧಿಸಲಾದ ಶಾಸನ :-ಬಳ್ಳಾರಿ ಜಿಲ್ಲೆಯ ನಿಟ್ಟೂರು ಶಾಸನ

●. ನಿಟ್ಟೂರಿನ ಶಾಸನದ ರಚನಾಕಾರ :- ಉಪಗುಪ್ತ

●. ನಿಟ್ಟೂರಿನ ಶಾಸನದ ಲಿಪಿಕಾರ :- ಚಡಪ

●. ಸಾರಾನಾಥದ ಅಶೋಕನ ಸ್ತಂಭವನ್ನು ಭಾರತ ಸರ್ಕಾರ ರಾಷ್ಟ್ರೀಯ ಲಾಂಛನವನ್ನಾಗಿ ಅಳವಡಿಸಿಕೊಂಡ ವರ್ಷ :- 1950ರಲ್ಲಿ

●. ಸಾರಾನಾಥದ ಸ್ಥೂಪದ ಕೆಳಭಾಗದಲ್ಲಿ ಸತ್ಯ ಮೇವ ಜಯತೆ ಎಂಬ ಹೇಳಿಕೆಯನ್ನು ಈ ಲಿಪಿಯಲ್ಲಿ ಬರೆಯಲಾಗಿದೆ :-ದೇವನಾಗರಿ

●. ಅಶೋಕನು ಬೌದ್ಧಧರ್ಮವನ್ನು ಸ್ವೀಕರಿಸಿದ ಪರಿಯನ್ನು ತಿಳಿಸುವ ಶಾಸನ :- ಬಬ್ರುಶಾಸನ

●. ಮೊಟ್ಟ ಮೊದಲ ಭಾರಿಗೆ ಸಂಸ್ಕೃತದಲ್ಲಿ ಶಾಸನ ಬರೆಸಿದ ರಾಜ :- ಶಕರ ಪ್ರಸಿದ್ದ ಅರಸ ರುದ್ರಧಮನ

●. ಅಮೋಘವರ್ಷನು ಕೊಲ್ಲಾಪುರದ ಮಹಾಲಕ್ಷ್ಮೀಗೆ ತನ್ನ ಎಡಗೈ ಬೆರಳನ್ನು ಕತ್ತರಿಸಿ ಸಮರ್ಪಿಸಿದ ಬಗ್ಗೆ ತಿಳಿಸುವ ಶಾಸನ :- ಸಂಜಾನ್ ದತ್ತಿ ಶಾಸನ

●. ದಂತಿದುರ್ಗ :-ಸಮನ್ ಗಡ್ ಹಾಗೂ ಎಲ್ಲೋರದ ಗುಹಾ ಶಾಸನ

●. ಒಂದನೇ ಕೃಷ್ಣ :-ಭಾಂಡ್ಕ ಮತ್ತು ತಾಳೇಗಾಂ ಶಾಸನ

●. ಧೃವ :-ಜೆಟ್ಟಾಯಿ ಶಾಸನ

●. ಅಮೋಘವರ್ಷ :-ಸಂಜಾನ್ ತಾಮ್ರ ಶಾಸನ

●. ಬಾದಾಮಿ ಶಾಸನದ ಕರ್ತೃ :- 1 ನೇ ಪುಲಿಕೇಶಿ

●. ಮಹಾಕೂಟ ಸ್ತಂಭ ಶಾಸನದ ಕರ್ತೃ :- ಮಂಗಳೇಶ

●. ಮಹಾಕೂಟ ಸ್ತಂಭ ಶಾಸನ :- ಬಾದಾಮಿಯ ಮಹಾಕೂಟೇಶ್ವರ ದೇವಲಾಯದಲ್ಲಿದೆ

●.ರವಿ ಕೀರ್ತೀ :-ಐಹೋಳೆ ಶಾಸನ

●. ಐಹೋಳೆ ಶಾಸನ :-ಮೇಗುತಿ ಜೀನ ದೇವಾಲಯದಲ್ಲಿ ಕೆತ್ತಲಾಗಿದೆ

●. ಚಂದ್ರವಳ್ಳಿ ಶಾಸನದ ಕರ್ತೃ :- ಮಯೂರವರ್ಮ (ಚಿತ್ರದುರ್ಗ)

●. ಬ್ರಾಹ್ಮಿಲಿಪಿಯಲ್ಲಿರುವ ಪ್ರಪ್ರಥಮ ಸಂಸ್ಕೃತ ಶಾಸನ :- ಚಂದ್ರವಳ್ಳಿ ಶಾಸನ.

●. ಕರ್ನಾಟಕದ ಅತ್ಯಂತ ಪ್ರಾಚೀನ ಸಂಸ್ಕೃತ ಶಾಸನ:-ಚಂದ್ರವಳ್ಳಿ ಶಾಸನ

●. ಕನ್ನಡದ ಮೊಟ್ಟ ಮೊದಲ ಶಾಸನ :- ಹಲ್ಮಿಡಿ ಶಾಸನ.

●. ಹಲ್ಮಿಡಿ ಶಾಸನ ಇಲ್ಲಿ ಇರುವುದು :-ಹಾಸನ ಜಿಲ್ಲೆ ಬೇಲೂರು ತಾಲೂಕಿನ ಹಲ್ಮಿಡಿ ಗ್ರಾಮ

●. ಹಲ್ಮಿಡಿ ಶಾಸನದ ಕರ್ತೃ :- ಕಾಕುಸ್ಥವರ್ಮ

●. ತಾಳಗುಂದ ಶಾಸನದ ಕರ್ತೃ :-ಕವಿ ಕುಬ್ಜ

●. ತಾಳಗುಂದ ಶಾಸನವನ್ನು ಬರೆಯಿಸಿದವರು :-ಶಾಂತಿ ವರ್ಮ (ಶಿವಮೊಗ್ಗ ದಲ್ಲಿದೆ)

●. ಮಹಿಪವೊಲು ತಾಮ್ರ ಶಾಸನದ ಕರ್ತೃ :-ಶಿವಸ್ಕಂದ ವರ್ಮ .

●. ವಾಯಲೂರು ಸ್ತಂಭ ಶಾಸನದ ಕರ್ತೃ :- ರಾಜ ಸಿಂಹ .

●. ಕರ್ನಾಟಕದ ಸಂಗೀತವನ್ನು ತಿಳಿಸುವ ಮೊಟ್ಟ ಮೊದಲ ಶಾಸನ :- 1ನೇ ಮಹೇಂದ್ರ ಮರ್ಮನ್ ನ “ಕುಡಿಮಿಯಾ ಮಲೈ ಶಾಸನ .”

●. ನಾನಾ ಘಾಟ್ ಶಾಸನದ ಕರ್ತೃ :- ನಾಗನೀಕ .

●. ಗುಹಾಂತರ ನಾಸಿಕ್ ಶಾಸನದ ಕರ್ತೃ :- ಗೌತಮೀ ಬಾಲಾಶ್ರೀ

●. ವೇಳ್ವಕುಡಿ ತಾಮ್ರ ಶಾಸನದ ಕರ್ತೃ :- ಪರಾಂತಕ ಚೋಳ.

No comments:

Post a Comment